ಸಿಂಗಾಪುರ: ಪ್ರತಿಷ್ಠಿತ ಸೂಪರ್ ೫೦೦ ಸೀರೀಸ್ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ P V Sindhu ಅವರನ್ನು ಟ್ರೋಲ್ ಮಾಡಿರುವ ಕಿಲಾಡಿಗಳಿಗೆ ಅವರ ಕೋಚ್ ಪಾರ್ಕ್ ಟೆ ಸಂಗ್ ಮಾತಿನೇಟು ಕೊಟ್ಟಿದ್ದಾರೆ.
ವಿಶ್ವದ ಸ್ಟಾರ್ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿರದ ಕಾರಣ ಸಿಂಧೂ ಅವರು ಬಂಗಾರದ ಪದಕ ಗೆದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆದುಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ” ಪ್ರಮುಖ ಸ್ಪರ್ಧಿಗಳು ಇಲ್ಲದ ಕಾರಣ ಸಿಂಧೂ ಗೆದ್ದರು ಎಂಬುದು ಒಂದು ಮಾತೇ ಅಲ್ಲ. ಅವರು ಬೆಳಕು ಇದ್ದಹಾಗೆ. ಯಾರು ಇರಲಿ, ಇಲ್ಲದಿರಲಿ, ಅವರು ಪ್ರಜ್ವಲಿಸುತ್ತಾರೆ,ʼʼ ಎಂದು ಹೇಳಿಕೆ ನೀಡಿದ್ದಾರೆ.
ಸಿಂಧೂ ಸಾಧನೆ
ಭಾನುವಾರ ಬೆಳಗ್ಗೆ ನಡೆದ ಫೈನಲ್ ಪಂದ್ಯದಲ್ಲಿ ಪಿ. ವಿ ಸಿಂಧೂ ಚೀನಾದ ವಾಂಗ್ ಜಿ ಯಿ ವಿರುದ್ಧ 21-9, 11-21, 21-15 ಗೇಮ್‌ಗಳಿಂದ ಗೆಲುವು ಸಾಧಿಸಿ ಚೊಚ್ಚಲ ಸೂಪರ್ ಸೀರಿಸ್ ೫೦೦ ಪದಕ ಗೆದ್ದಿದ್ದರು. ಇದು ಹಾಲಿ ವರ್ಷದಲ್ಲಿ ಅವರಿಗೆ ಮೂರನೇ ಚಾಂಪಿಯನ್‌ಪಟ್ಟವಾಗಿದೆ.
ಇದನ್ನೂ ಓದಿ | Badminton: ಚೀನಾದ ವಾಂಗ್ ಜಿ ಯಿ ಮಣಿಸಿದ ಪಿ. ವಿ ಸಿಂಧೂಗೆ ಸಿಂಗಾಪುರ ಓಪನ್ ಚಾಂಪಿಯನ್ ಪಟ್ಟ