ಸಿಂಗಾಪುರ: ಇಲ್ಲಿ ನಡೆಯುತ್ತಿರುವ ಸಿಂಗಾಪುರ ಸ್ಮ್ಯಾಷ್(Singapore Smash) ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಕಂಡಿದೆ. ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ(Manika Batra) ಅವರು ಮಹಿಳೆಯರ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ವಿಭಾಗಗಳಲ್ಲಿ ಸೋಲು ಕಾಣುವ ಮೂಲಕ ಭಾರತ ನಿರಾಸೆ ಅನುಭವಿಸಿತು.
ಮಂಗಳವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಜಿ. ಸತಿಯನ್(Sathiyan Gnanasekaran) ಜಗೆಗೂಡಿ ಆಡಿದ ಮಣಿಕಾ 9-11, 9-11, 11-8, 11-5, 7-11 (3-2) ಅಂತರದಲ್ಲಿ ಜಪಾನ್‌ನ ಹಿನಾ ಹಯಾತ ಮತ್ತು ತೊಮೊಕಜು ಹರಿಮೊಟೊ ಜೋಡಿಯ ವಿರುದ್ಧ ಸೋಲು ಕಂಡರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದ ಜಪಾನ್ ಜೋಡಿಯ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಭಾರತದ ಜೋಡಿ ಸೋಲು ಕಾಣಬೇಕಾಯಿತು.
ಇದನ್ನೂ ಓದಿ WTT Contender | ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿ; ಸೆಮಿಫೈನಲ್ ಪ್ರವೇಶಿಸಿದ ಮಣಿಕಾ ಬಾತ್ರಾ
ಇದಕ್ಕೂ ಮುನ್ನ ನಡೆದ ಮಹಿಳೆಯರ ಡಬಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದಲ್ಲಿ ಮಣಿಕಾ ಮತ್ತು ಅರ್ಚನಾ ಕಾಮತ್ ಜೋಡಿ 2-11, 6-11, 15-13, 12-10, 6-11 ರಲ್ಲಿ ಚೀನಾದ ಮೆಂಗ್ ಚೆನ್-ಯಿದಿ ವಾಂಗ್ ವಿರುದ್ಧ ಪರಾಭವಗೊಂಡಿತು. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ಶರತ್ ಕಮಲ್ ಅವರು ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋತಿದ್ದರು.