Site icon Vistara News

Team India : ಐರ್ಲೆಂಡ್ ಪ್ರವಾಸದ ಕೋಚಿಂಗ್ ವಿಭಾಗದಲ್ಲಿ ದ್ರಾವಿಡ್​, ಲಕ್ಷ್ಮಣ್ ಇಬ್ಬರೂ ಇಲ್ಲ

VVS Laxman

ಬೆಂಗಳೂರು: ಭಾರತ ವಿರುದ್ಧದ ಟಿ20 ಸರಣಿಗೆ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡಕ್ಕೆ ಹೊಸ ಕೋಚ್ ಆಗಿ ನೇಮಕವಾಗಲಿದ್ದಾರೆ. ಏಷ್ಯಾ ಕಪ್​ ಹಾಗೂ ವಿಶ್ವ ಕಪ್​ ಹಿನ್ನೆಲೆಯಲ್ಲಿ ಹೆಡ್ ಕೋಚ್​ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದರಿಂದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್​ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಬಹುದೇನೋ ಎಂದು ಅಂದಾಜಿಸಲಾಗಿತ್ತು. ಆದರೆ, ಇಬ್ಬರನ್ನೂ ಆಯ್ಕೆ ಮಾಡದೇ ಸಿತಾಂಶು ಕೋಟಕ್ ತಾತ್ಕಾಲಿಕ ಕೋಚ್ ಆಗಿ ನೇಮಿಸಲಾಗಿದೆ.

ಏಷ್ಯಾ ಕಪ್ 2023 ಶಿಬಿರಕ್ಕೆ ಮುಂಚಿತವಾಗಿ ರಾಹುಲ್ ದ್ರಾವಿಡ್ ಮತ್ತು ಅವರ ಸಿಬ್ಬಂದಿ ಒಂದು ವಾರದ ವಿರಾಮದಲ್ಲಿರುತ್ತಾಗೆ. ಹೀಗಾಗಿ ಲಕ್ಷ್ಮಣ್ ತಂಡದೊಂದಿಗೆ ಹೋಗುತ್ತಾರೆ ಎಂದು ಹೇಳಲಾಗಿತ್ತು ಆದರೆ, ಲಕ್ಷ್ಮಣ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉದಯೋನ್ಮುಖ ಆಟಗಾರರ ಶಿಬಿರದ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ, ಅವರು ಅವಕಾಶ ಕಳೆದುಕೊಳ್ಳಲಿದ್ದಾರೆ. ಅವರ ಬದಲಿಗೆ ಕೋಟಕ್ ಹೋಗಲಿದ್ದಾರೆ. ಆಗಸ್ಟ್ 18ರಿಂದ ಸರಣಿ ಆರಂಭವಾಗಲಿದೆ.

ಸಿತಾಂಶು ಕೋಟಕ್ ಪ್ರಸ್ತುತ ಭಾರತ ಎ ಮುಖ್ಯ ಕೋಚ್ ಮತ್ತು ಎನ್​ಸಿಎಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಅವರು ಮಂಗಳವಾರ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಡಬ್ಲಿನ್​​ಗೆ ತೆರಳಲಿದ್ದಾರೆ. ಸಾಯಿರಾಜ್ ಬಹುತುಲೆ ಈ ಸರಣಿಗೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಸಿತಾಂಶು ಕೋಟಕ್ ದೇಶೀಯ ಕ್ರಿಕೆಟ್​​ನಲ್ಲಿ ಪ್ರಸಿದ್ಧ ತರಬೇತುದಾರ ಮತ್ತು ಆಟಗಾರ. ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ 8000 ರನ್ ಮತ್ತು ಲಿಸ್ಟ್ ಎ ಕ್ರಿಕೆಟ್​ನಲ್ಲಿ 3000 ರನ್ ಗಳಿಸಿರುವ ಕೋಟಕ್ ದೇಶೀಯ ಕ್ರಿಕೆಟ್​​​ ಸೌರಾಷ್ಟ್ರ ಪರ ಹೆಸರು ಮಾಡಿದ್ದಾರೆ. 2019 ರಲ್ಲಿ ರಾಹುಲ್ ದ್ರಾವಿಡ್ ಎನ್​​ಸಿಎ ಮುಖ್ಯಸ್ಥರಾದ ನಂತರ, ಕೋಟಕ್ ಭಾರತ ಎ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಈ ಹಿಂದೆ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಟೀಮ್ ಇಂಡಿಯಾದೊಂದಿಗೆ ಇದ್ದರು.

ಇದನ್ನೂ ಓದಿ : ICC World Cup: ರಾಹುಲ್​ ಬಂದರೆ ಈತನಿಗೆ ವಿಶ್ವಕಪ್​ ತಂಡದಲ್ಲಿ ಸ್ಥಾನವಿಲ್ಲ

ಭಾರತಕ್ಕೆ ಮರಳಿದೆ ಕಾಯಂ ಕೋಚಿಂಗ್​​ ಸಿಬ್ಬಂದಿ

ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಫ್ಲೋರಿಡಾದಿಂದ ಭಾರತಕ್ಕೆ ಮರಳಲಿದ್ದಾರೆ. ಆಗಸ್ಟ್ 23 ರಂದು ಎನ್​​ಸಿಎನಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ಶಿಬಿರಕ್ಕೆ ಸೇರುವ ಮೊದಲು ಅವರು ಒಂದು ವಾರದ ವಿರಾಮ ಪಡೆಯಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಹಂತ, ಹಂತವಾಗಿ ಐರ್ಲೆಂಡ್​ಗೆ

ಟೀಮ್ ಇಂಡಿಯಾ ಭಾರತ ಐರ್ಲೆಂಡ್​ ಸರಣಿಗಾಗಿ ಎರಡು ಪ್ರತ್ಯೇಕ ಬ್ಯಾಚ್​​ಗಳಲ್ಲಿ ಪ್ರಯಾಣಿಸಲಿದೆ. ಒಂದು ತಂಡ ಮಂಗಳವಾರ ಮುಂಬೈನಿಂದ ಐರ್ಲೆಂಡ್​ಗೆ ತೆರಳಲಿದೆ. ಮೊದಲ ಬ್ಯಾಚ್​​ನಲ್ಲಿ ನಾಯಕ ಜಸ್ಪ್ರೀತ್ ಬುಮ್ರಾ ಮತ್ತು ಭಾರತ ಮತ್ತು ವಿಂಡೀಸ್ ತಂಡದ ಭಾಗವಾಗಿಲ್ಲದವರು ಇರಲಿದ್ದಾರೆ. ಮುಂದಿನ ಬ್ಯಾಚ್ ಫ್ಲೋರಿಡಾದಿಂದ ನೇರವಾಗಿ ಐರ್ಲೆಂಡ್ ರಾಜಧಾನಿ ಡಬ್ಲಿನ್ ಗೆ ಹಾರಲಿದೆ. ಎರಡನೇ ಬ್ಯಾಚ್​ನಲ್ಲಿರುವ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರು ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಟಿ 20 ಪಂದ್ಯಗಳನ್ನು ಆಡುವ ತಂಡದ ಭಾಗವಾಗಿದ್ದಾರೆ.

ಭಾರತ ತಂಡ

ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಶ್​ದೀಪ್​​ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

Exit mobile version