ಕ್ರೈಸ್ಟ್‌ಚರ್ಚ್: ಹಿರಿಯ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್(115)(Angelo Mathews) ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್(SL VS NZ) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿ ಸವಾಲೊಡ್ಡಿದೆ. ಕಿವೀಸ್ ಗೆಲುವಿಗೆ 285 ರನ್‌ಗಳ ಗುರಿ ನೀಡಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನ ಶ್ರೀಲಂಕಾ ಎರಡನೇ ಇನಿಂಗ್ಸ್‌ನಲ್ಲಿ 302 ರನ್‌ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟುತ್ತಿರುವ ಆತಿಥೇಯ ಕಿವೀಸ್ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕಿವೀಸ್ ಗೆಲುವಿಗೆ ಇನ್ನೂ 257 ರನ್ ಬಾರಿಸಬೇಕಿದೆ. ಟಾಮ್ ಲ್ಯಾಥಮ್ (11*) ಮತ್ತು ಕೇನ್ ವಿಲಿಯಮ್ಸನ್ (7*) ಕ್ರೀಸ್‌ನಲ್ಲಿದ್ದಾರೆ.
ಮೂರು ವಿಕೆಟ್‌ಗಳಿಗೆ 83 ರನ್‌ಗಳಿಂದ ಆಟ ಮುಂದುವರಿಸಿದ್ದ ಶ್ರೀಲಂಕಾ ತಂಡಕ್ಕೆ ಮ್ಯಾಥ್ಯೂಸ್ ಆಸರೆಯಾದರು. 235 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಸಹಿತ 115 ರನ್ ಬಾರಿಸಿದರು. ಈ ಮೂಲಕ ಕಿವೀಸ್ ಪಡೆಯ ಮೇಲುಗೈ ಕನಸಿಗೆ ಮ್ಯಾಥ್ಯೂಸ್ ಅಡ್ಡಿಯಾದರು.
ಇದನ್ನೂ ಓದಿ IND VS AUS: ಟೀಮ್ ಇಂಡಿಯಾದಲ್ಲಿ ರಾಹುಲ್ ಗತಿ ಏನು? ಏಕದಿನ ಸರಣಿಯಲ್ಲಿ ಅವಕಾಶ ಸಿಗಲಿದೆಯಾ?
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್: 92.4 ಓವರ್‌ಗಳಲ್ಲಿ 355. ನ್ಯೂಜಿಲ್ಯಾಂಡ್ ಮೊದಲ ಇನಿಂಗ್ಸ್: 107.3 ಓವರ್‌ಗಳಲ್ಲಿ 373. ಎರಡನೇ ಇನಿಂಗ್ಸ್ ಶ್ರೀಲಂಕಾ: 105.3 ಓವರ್‌ಗಳಲ್ಲಿ 302 (ಏಂಜೆಲೊ ಮ್ಯಾಥ್ಯೂಸ್ 115, ದಿನೇಶ್ ಚಾಂಡಿಮಲ್ 42, ಧನಂಜಯ ಡಿಸಿಲ್ವಾ ಔಟಾಗದೆ 47, ಬ್ಲೇರ್ ಟಿಕ್ನೆರ್ 100ಕ್ಕೆ 4, ಮ್ಯಾಟ್ ಹೆನ್ರಿ 71ಕ್ಕೆ 3) ನ್ಯೂಜಿಲ್ಯಾಂಡ್ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಕೆ : 17 ಓವರ್‌ಗಳಲ್ಲಿ 1 ವಿಕೆಟ್‌ಗೆ 28 (ಟಾಮ್ ಲ್ಯಾಥಮ್ ಬ್ಯಾಟಿಂಗ್ 11, ಕೇನ್ ವಿಲಿಯಮ್ಸನ್ ಬ್ಯಾಟಿಂಗ್ 7).