Site icon Vistara News

SL vs PAK 1st Test: ಈ ಒಂದು ವಿಕೆಟ್​ ಪಡೆಯಲು ಒಂದು ವರ್ಷ ಕಾದ ಪಾಕ್​ ಬೌಲರ್!​

Shaheen Afridi

ಗಾಲೆ: ಪ್ರವಾಸಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ(SL vs PAK 1st Test) ಭಾನುವಾರ ಗಾಲೆಯಲ್ಲಿ ಆರಂಭಗೊಂಡಿದೆ. ಪಾಕ್​ ಬೌಲರ್​ ಶಾಹೀನ್‌ ಅಫ್ರಿದಿ(Shaheen Afridi) ಅವರ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ಲಂಕಾ 226 ರನ್​ಗೆ 5 ವಿಕೆಟ್​ ಕಳೆದುಕೊಮಡು ಸಂಕಷ್ಟಕ್ಕೆ ಸಿಲುಕಿದೆ.

ಗಾಲೆಯಲ್ಲಿ ಭಾನುವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಶ್ರೀಲಂಕಾಗೆ ಶಾಹೀನ್‌ ಅಫ್ರಿದಿ ಆರಂಭದಲ್ಲೇ ಆಘಾತವಿಕ್ಕಿದರು. ತಂಡದ ಮೊತ್ತ 6 ರನ್​ ಆಗುವಷ್ಟರಲ್ಲಿ ಆರಂಭಕಾರ ನಿಶಾನ್‌ ಮದುಷ್ಕ ಅವರ ವಿಕೆಟ್​ ಕಿತ್ತರು. ಇದೇ ವೇಳೆ ಶಾಹೀನ್‌ ಅಫ್ರಿದಿ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ನೂರು ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಅಚ್ಚರಿ ಎಂದರೆ 99 ವಿಕೆಟ್​ ಪಡೆದಿದ್ದ ಅವರು ನೂರರ ಗಡಿ ದಾಟಲು ಬರೋಬ್ಬರಿ ಒಂದು ವರ್ಷ ಕಾದಿದ್ದು. ​

ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಶಾಹೀನ್‌ ಅಫ್ರಿದಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಅವರು ಟೆಸ್ಟ್​ ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರಿಗೆ ಈ ಒಂದು ವಿಕೆಟ್​ ಪಡೆಯಲು ಒಂದು ವರ್ಷ ಕಾಯಬೇಕಾದ ಸ್ಥಿತಿ ಬಂದೊದಗಿತ್ತು. ಮೊಣಕಾಲಿನ ಶಸ್ತ್ರಚಿಕಿತ್ಸಗೆ ಒಳಗಾದ ಕಾರಣ ತವರಿನಲ್ಲೇ ನಡೆದಿದ್ದ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪಾಳ್ಗೊಂಡಿರಲಿಲ್ಲ. ಮೇ ತಿಂಗಳಿನಲ್ಲಿ ನಡೆದಿದ್ದ ಕಿವೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಮೂಲಕ ಪಾಕ್​ ತಂಡ ಸೇರಿಕೊಂಡಿದ್ದರು.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್​ ಟೂರ್ನಿಯ ಪೋಸ್ಟರ್ ರಿಲೀಸ್​​ ಮಾಡಿದ ಐಸಿಸಿ

ಸದ್ಯ ಪ್ರತಿಕೂಲ ಹವಾಮಾನದ ಸಮಸ್ಯೆಯಿಂದ ಕೆಲ ಕಾಲ ಸ್ಥಗಿತಗೊಂಡಿದ್ದ ಲಂಕಾ ಮತ್ತು ಪಾಕ್​ ನಡುವಿನ ಈ ಪಂದ್ಯ ಆರಂಭಗೊಂಡಿದ್ದು, ಲಂಕಾ 58.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 226 ರನ್​ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದೆ. ಶಾಹೀನ್‌ ಅಫ್ರಿದಿ 56 ರನ್​ ನೀಡಿ ಪ್ರಮುಖ 3 ವಿಕೆಟ್​ ಉರುಳಿಸಿದ್ದಾರೆ.

Exit mobile version