Site icon Vistara News

Physical abuse : ಅತ್ಯಾಚಾರ ಕೇಸಲ್ಲಿ ಸಿಕ್ಕಿ ಬಿದ್ದಿದ್ದ ಲಂಕಾ ಕ್ರಿಕೆಟಿಗನಿಗೆ ಶಿಕ್ಷೆಯಿಂದ ಮುಕ್ತಿ

Gunatilaka

ಕೊಲೊಂಬೊ: ಪ್ರಮುಖ ಬೆಳವಣಿಗೆಯೊಂದರಲ್ಲಿ, 32 ವರ್ಷದ ಶ್ರೀಲಂಕಾ ಬ್ಯಾಟರ್​ ಧನುಷ್ಕಾ ಗುಣತಿಲಕ ವಿರುದ್ಧದ ನಿಷೇಧ ಶಿಕ್ಷೆಯನ್ನು ವಾಪಸ್ ಪಡೆಯಲು ಅಲ್ಲಿನ ಕ್ರಿಕೆಟ್​ ಮಂಡಳಿ ನಿರ್ಧರಿಸಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಗಂಭೀರ ಲೈಂಗಿಕ ದೌರ್ಜನ್ಯದ (Physical abuse) ಆರೋಪಗಳ ಮೇಲೆ ಕ್ರಿಕೆಟಿಗನ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಹಲವಾರು ನಿಷೇಧಗಳನ್ನು ಹೇರಲಾಗಿತ್ತು. ಇದೀಗ ಅವರ ಮೇಲಿನ ಶಿಕ್ಷೆಯನ್ನು ವಾಪಸ್​ ಪಡೆಯುವುದಾಗಿ ಅಲ್ಲಿನ ಸಮಿತಿ ಹೇಳಿದೆ.

ಶಿಕ್ಷೆಯನ್ನು ವಾಪಸ್ ಪಡೆಯುವ ಶಿಫಾರಸುಗಳನ್ನು ಅಕ್ಟೋಬರ್ 13 ರಂದು ಮಂಡಳಿಯ ಕಾರ್ಯಕಾರಿ ಸಮಿತಿ ಅನುಮೋದಿಸಿದೆ. ಸಭೆ ನಡೆದ ನಂತರ. ಆದಾಗ್ಯೂ, ಆಲ್​ರೌಂಡರ್​ಗೆ ಲಿಖಿತ ಎಚ್ಚರಿಕೆಯನ್ನು ನೀಡಲಾಗಿದೆ.. ಹೀಗೆ ಭವಿಷ್ಯದ ಕ್ರಿಕೆಟ್​ ಚಟುವಟಿಕೆಗಳಲ್ಲಿ ಅವರು ರಾಷ್ಟ್ರದ ಪ್ರತಿನಿಧಿಯಾಗಿ ಅದೇಶ ಸ್ಥಾನಮಾನವನ್ನು ಯಾವಾಗಲೂ ಕಾಪಾಡಬೇಕು ಎಂದು ಅವರಿಗೆ ಸೂಚಿಸಲಾಗಿದೆ.

ಈ ಸುದ್ದಿಗಳನ್ನೂ ಓದಿ
Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ
Shardul Thakur : ಕುಚಿಕು ದೋಸ್ತ್​ ಶ್ರೇಯಸ್ ಮತ್ತು ಪತ್ನಿಯ ಜತೆ ಬರ್ತ್​ಡೇ ಆಚರಿಸಿಕೊಂಡ ಶಾರ್ದೂಲ್​
SL vs AUS: ಅಂಪೈರ್​ ವಿವಾದಾತ್ಮಕ ತೀರ್ಪಿಗೆ ವಿಕೆಟ್​ ಕೈಚೆಲ್ಲಿದ ಡೇವಿಡ್​ ವಾರ್ನರ್​

ಗುಣತಿಲಕ ಅವರನ್ನು 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ 20 ಐ ವಿಶ್ವಕಪ್ ಸಮಯದಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರ, ಅವರನ್ನು ದೇಶದಲ್ಲಿ 11 ತಿಂಗಳ ಕಾಲ ಪ್ರಯಾಣ ನಿರ್ಬಂಧಗಳಿಗೆ ಒಳಪಡಿಸಲಾಗಿತ್ತು. ಇದಲ್ಲದೆ, ಅವರ ಮೇಲೆ ಲೈಂಗಿಕ ದೌರ್ಜನ್ಯದ ನಾಲ್ಕು ಆರೋಪಗಳನ್ನು ಸಹ ಹೊರಿಸಲಾಗಿತ್ತು. ಅವುಗಳನ್ನು ಕಾನೂನು ವಿಚಾರಣೆಗೆ ಒಳಪಡಿಸಲಾಗಿತ್ತು.

ಆರೋಪ ಮುಕ್ತ

32 ವರ್ಷದ ಗುಣತಿಲಕ ಬಳಿಕ ವಿಚಾರಣೆಯನ್ನು ಎದುರಿಸಿದ್ದರು. ಅದು ನಂತರ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. ಇದೀಗ ಅವರ ನಿಷೇಧವನ್ನು ತೆಗೆದುಹಾಕುವುದರೊಂದಿಗೆ, ಆಲ್​ರೌಂಡರ್​ ಅಂತಿಮವಾಗಿ ದೀರ್ಘ ವಿರಾಮದ ಬಳಿಕ ಅಂತಾರಾಷ್ಟ್ರೀಯ ಕರ್ತವ್ಯಗಳಿಗೆ ಮರಳುವಂತಾಗಿದೆ.

ಗುಣತಿಲಕ ಅವರ ಕ್ರಿಕೆಟ್ ವೃತ್ತಿಜೀವನ ಮತ್ತು ರಾಷ್ಟ್ರದ ಕ್ರಿಕೆಟ್ ಮಹತ್ವಾಕಾಂಕ್ಷೆಗಳ ಮೇಲೆ ಅದರ ಪರಿಣಾಮವನ್ನು ಪರಿಗಣಿಸಿ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಸಿಸಿರಾ ರತ್ನಾಯಕೆ, ಕಾನೂನು ಅಟಾರ್ನಿ ನಿರೋಶನಾ ಪೆರೆರಾ ಮತ್ತು ಅಟಾರ್ನಿ ಅಸೆಲಾ ರೆಕಾವಾ ನೇತೃತ್ವದ ವಿಚಾರಣಾ ಸಮಿತಿಯು ಅವರ ಕ್ರಿಕೆಟ್ ನಿಷೇಧವನ್ನು ತಕ್ಷಣವೇ ತೆಗೆದುಹಾಕಲು ಸರ್ವಾನುಮತದಿಂದ ಶಿಫಾರಸು ಮಾಡಿತ್ತು. ನಿಯಮಿತ ಕ್ರಿಕೆಟ್ ಚಟುವಟಿಕೆಗಳನ್ನು ಪುನರಾರಂಭಿಸಲು ಮತ್ತು ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲು ಅವರಿಗೆ ಅವಕಾಶ ಮಾಡಿಕೊಟ್ಟಿತ್ತು.

ಚೇತರಿಸುವ ಪ್ರಯತ್ನ

ಶ್ರೀಲಂಕಾದ ಪ್ರಸ್ತುತ ವಿಶ್ವ ಕಪೊ್​ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ತಂಡ ಭಯಾನಕ ಆರಂಭವನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಶ್ರೀಲಂಕಾ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ.

ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳನ್ನು ಆಡಿರುವ ಶ್ರೀಲಂಕಾ ಇದುವರೆಗಿನ ಪ್ರತಿಯೊಂದು ಪಂದ್ಯದಲ್ಲೂ ಸೋಲನ್ನು ಅನುಭವಿಸಿದೆ. ಅವರು ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಮುಖಾಮುಖಿಯಾಗಲಿದ್ದಾರೆ.

ಅಫಘಾನಿಸ್ತಾನ ಆಟಗಾರನಿಗೆ ಐಸಿಸಿ ದಂಡ

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​ನಲ್ಲಿ (ICC World Cup 2023) ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆದ್ದಿರುವುದು ಸುದ್ದಿಯಾಗಿತ್ತು. ಇದೇ ಪಂದ್ಯದಲ್ಲಿ ಆಪ್ಘನ್​ ತಂಡದ ಆರಂಭಿಕ ಬ್ಯಾಟರ್​​ ರಹ್ಮನುಲ್ಲಾ ಗುರ್ಬಜ್​ (Rahmanullah Gurbaz) ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ದಂಡನೆಗೆ ಒಳಗಾಗುವ ಸಾಧ್ಯತೆಗಳಿವೆ. ಅವರಿಗೆ ಪಂದ್ಯದ ಶುಲ್ಕ ಅಥವಾ ಅದಕ್ಕಿಂತ ಹೆಚ್ಚಿನ ದಂಡನೆ ವಿಧಿಸುವ ಸಾಧ್ಯತೆಗಳಿವೆ.

ರಹಮಾನುಲ್ಲಾ ಗುರ್ಬಾಜ್ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಇದು “ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಮೈದಾನದ ಉಪಕರಣಗಳು ಅಥವಾ ಫಿಟ್ಟಿಂಗ್​ಗಳ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗಿದೆ.

ಅಫ್ಘಾನಿಸ್ತಾನದ ಇನ್ನಿಂಗ್ಸ್​​ನ 19 ನೇ ಓವರ್​ನಲ್ಲಿ ಈ ಘಟನೆ ನಡೆದಿದ್ದು, ರಹಮಾನುಲ್ಲಾ ಗುರ್ಬಾಜ್ 80 ರನ್​ಗಳಿಗೆ ರನ್ ಔಟ್ ಆದ ನಂತರ ಮೈದಾನದಿಂದ ಹೊರಹೋಗುವಾಗ ಬೌಂಡರಿ ರೋಪ್​ ಮತ್ತು ಕುರ್ಚಿಗೆ ಬ್ಯಾಟ್ ನಿಂದ ಹೊಡೆದಿದ್ದರು.

ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ಜೆಫ್ ಕ್ರೋವ್ ಪ್ರಸ್ತಾಪಿಸಿದ ಶಿಕ್ಷೆಯನ್ನು ರಹಮಾನುಲ್ಲಾ ಗುರ್ಬಾಜ್ ಒಪ್ಪಿಕೊಂಡಿದ್ದಾರೆ. ಆರಂಭಿಕ ಆಟಗಾರನ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.

Exit mobile version