Site icon Vistara News

Smriti Mandhana : ಶ್ರೀಲಂಕಾದ ಅಂಗವಿಕಲ ಕ್ರಿಕೆಟ್​ ಅಭಿಮಾನಿಗೆ ಮೊಬೈಲ್ ಕೊಟ್ಟ ಸ್ಮೃತಿ ಮಂದಾನಾ

Smriti Mandhana

ಬೆಂಗಳೂರು: ಮಹಿಳಾ ಏಷ್ಯಾ ಕಪ್ 2024 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಭಾರತದ ಮಹಿಳಾ ತಂಡದ ಆರಂಭಿಕ ಬ್ಯಾಟರ್​​ ಸ್ಮೃತಿ ಮಂದಾನ (Smriti Mandhana) ಅಂಗವಿಕಲ ಬಾಲಕಿಯೊಬ್ಬಳಿಗೆ ಮೊಬೈಲ್ ನೀಡುವ ಮೂಲಕ ಕ್ರಿಕೆಟ್​ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದ ಅಂಗವಿಕಲ ಅಭಿಮಾನಿಗೆ ತಂಡದ ಉಪನಾಯಕಿ ಮೊಬೈಲ್ ಫೋನ್ ನೀಡಿ ಮಾತನಾಡಿಸಿ ಪ್ರೇರಣೆ ನೀಡಿದ್ದಾರೆ.

ಏಷ್ಯಾಕಪ್​​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಗೆಲ್ಲಲು ಸ್ಮೃತಿ ಮಂದಾನ ಹೆಚ್ಚು ನೆರವಾಗಿದ್ದರು. ಆರಂಭಿಕ ಬ್ಯಾಟರ್​ ದೊಡ್ಡ ಇನಿಂಗ್ಸ್ ಆಡಿದ್ದರು. ಹೀಗಾಗಿ ಭಾರತಕ್ಕೆ ಸುಲಭ ವಿಜಯ ದೊರಕಿತ್ತು. ಟಾಸ್​ ಸೋತ ಭಾರತ ಮೊದಲು ಬೌಲಿಂಗ್ ಮಾಡಿತಲ್ಲದೆ 108 ರನ್​ಗಳಿಗೆ ಪಾಕ್ ತಂಡವನ್ನು ಸೋಲಿಸಿತು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರೆ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಹಾಗೂ ಶ್ರೇಯಂಕಾ ಪಾಟೀಲ್ ತಲಾ 2 ವಿಕೆಟ್ ಪಡೆದರು.

ಬಳಿಕ ಬ್ಯಾಟ್ ಮೂಲಕ ಸ್ಮೃತಿ ಮಂದಾನ ಅವರು ತಮ್ಮ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಶಫಾಲಿ ವರ್ಮಾ (40) ಆರಂಭಿಕ ಜೊತೆಯಾಟದಲ್ಲಿ 85 ರನ್​ಗಳ ಜತೆಯಾಟ ನೀಡಿದರು. ಸ್ಮೃತಿ ಮಂದಾನ 31 ಎಸೆತಗಳಲ್ಲಿ 45 ರನ್ ಸಿಡಿಸಿ ಔಟಾದರು. ಆರಂಭಿಕ ಬ್ಯಾಟ್ಸ್ಮನ್ 145 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದರು. ಅವರ ಇನಿಂಗ್ಸ್​​ನಲ್ಲಿ 9 ಫೋರ್​ಗಳಿದ್ದವು. ಭಾರತ ವನಿತೆಯರು 15 ಓವರ್ ಗಳಲ್ಲಿ ಗುರಿ ಮುಟ್ಟಿದರು.

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

ಪಂದ್ಯದ ಮುಗಿದ ಬಳಿಕ ಸ್ಮೃತಿ ಮಂದಾನ ಆಟಕ್ಕಿಂತ ಹೆಚ್ಚಾಗಿ ತಮ್ಮ ಒಳ್ಳೆಯತನದಿಂದ ಸುದ್ದಿಯಾದರು. ಆರಂಭಿಕ ಬ್ಯಾಟರ್​ ವಿಶೇಷ ಚೇತನ ಬಾಲಕಿಯ ಬಳಿಗೆ ಹೋಗಿ ಅವಳಿಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದರು. ಘಟನೆಯ ವೀಡಿಯೊ ವೈರಲ್ ಆಗಿರುವ ವಿಡಿಯೊ ಕ್ಲಿಪ್ ಇಲ್ಲಿದೆ.

ಎಲ್ಲಾ ಸವಾಲುಗಳ ಹೊರತಾಗಿಯೂ ಅದೀಶಾ ಹೆರಾತ್ ಗೆ ಕ್ರಿಕೆಟ್ ಎಂದರೆ ಪ್ರೀತಿ. ಹೀಗಾಗಿ ಅವರು ಕ್ರೀಡಾಂಗಣಕ್ಕೆ ಬಂದಿದ್ದರು. ತನ್ನ ನೆಚ್ಚಿನ ಕ್ರಿಕೆಟಿಗರಾದ ಸ್ಮೃತಿ ಮಂದಾನ ಅವರೊಂದಿಗೆ ಮುಖಾಮುಖಿಯಾದರು. ಮೆಚ್ಚುಗೆಯ ಸಂಕೇತವಾಗಿ ಮೊಬೈಲ್ ಫೋನ್ ಅನ್ನು ಪಡೆದುಕೊಂಡರು ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ತನ್ನ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​ ಮಾಡಿದೆ.

ನಮ್ಮ ಬೌಲರ್​ಗಳು ಮತ್ತು ಆರಂಭಿಕರು ಗೆಲುವನ್ನು ಸಾಧಿಸಿದರು. ಮೊದಲ ಪಂದ್ಯ ಯಾವಾಗಲೂ ಒತ್ತಡದ ಆಟವಾಗಿರುತ್ತದೆ. ನಮ್ಮ ಇಡೀ ಘಟಕ ಉತ್ತಮವಾಗಿ ಆಡಿತು. ನಾವು ಬೌಲಿಂಗ್ ಮಾಡುವಾಗ ಆರಂಭಿಕ ಪ್ರಗತಿಗಳ ಬಗ್ಗೆ ಮಾತನಾಡುತ್ತೇವೆ ಮತ್ತು ಬ್ಯಾಟಿಂಗ್​ನಲ್ಲಿಯೂ ಉತ್ತಮವಾಗಿ ಆಡಿದ್ದೇವೆ. ಈ ಶ್ರೇಯಸ್ಸು ಸ್ಮೃತಿ ಮತ್ತು ಶಫಾಲಿಗೆ ಸಲ್ಲುತ್ತದೆ ಎಂದು ಸ್ಮೃತಿ ಗೆಲುವಿನ ಬಳಿಕ ಹೇಳಿದ್ದಾರೆ.

ಭಾರತ ಮಹಿಳಾ ತಂಡ ಭಾನುವಾರ (ಜುಲೈ 21) ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಸೆಣಸಲಿದೆ.

Exit mobile version