Site icon Vistara News

Smriti Mandhana : ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಸ್ಮೃತಿ ಮಂದಾನ, ಶಫಾಲಿ ವರ್ಮಾ ಆಯ್ಕೆ

Smriti Mandhana,

ಬೆಂಗಳೂರು: ಜುಲೈ 2024ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮೂವರು ಆಟಗಾರರಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಎಲ್ಲಾ ಮೂವರು ಆಟಗಾರರು ಆರಂಭಿಕ ಬ್ಯಾಟರ್​ಗಳು. ಸ್ಮೃತಿ ಮಂದಾನ (Smriti Mandhana) ಮತ್ತು ಶಫಾಲಿ ವರ್ಮಾ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇಬ್ಬರು ಭಾರತೀಯರು. ಇಬ್ಬರೂ ಆಟದ ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇನ್ನೊಬ್ಬ ಆಟಗಾರ ಶ್ರೀಲಂಕಾದ ನಾಯಕ ಚಾಮರಿ ಅಟ್ಟಪ್ಟು

ಸ್ಮೃತಿ ಮಂದಾನ ಅವರು ಜೂನ್ 2024 ರ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ವಿಜೇತರಾಗಿದ್ದರು. ಸತತ ಎರಡನೇ ತಿಂಗಳು ಮತ್ತೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಇತ್ತೀಚೆಗೆ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ಆಟಗಾರ್ತಿ ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಈ ತಿಂಗಳು ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2024 ರಲ್ಲಿ, ಮಂದಾನ ಐದು ಪಂದ್ಯಗಳಲ್ಲಿ 57.66 ಸರಾಸರಿ ಮತ್ತು 137.30 ಸ್ಟ್ರೈಕ್ ರೇಟ್​​ನಲ್ಲಿ 173 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್​​ನಲ್ಲಿ ಅವರು 47 ಎಸೆತಗಳಲ್ಲಿ 60 ರನ್ ಗಳಿಸಿದರು ಆದರೆ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು.

ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟಿ 20 ಐ ಸರಣಿಯಲ್ಲಿ, ಮಂದಾನ ಎರಡು ಇನ್ನಿಂಗ್ಸ್​​ಳಲ್ಲಿ 100 ಸರಾಸರಿ ಮತ್ತು 142.85 ಸ್ಟ್ರೈಕ್ ರೇಟ್​​​ನಲ್ಲಿ 100 ರನ್ ಗಳಿಸಿದ್ದರು. ಅಂತಿಮ ಟಿ 20 ಪಂದ್ಯದಲ್ಲಿ ಅವರು 54* ರನ್ ಗಳಿಸಿ ಭಾರತವು ಸರಣಿಯನ್ನು 1-1 ರಿಂದ ಸಮಬಲಗೊಳಿಸಲು ಸಹಾಯ ಮಾಡಿದ್ದರು. ಜುಲೈ 2024ರಲ್ಲಿ ಆಡಿದ ಎಲ್ಲಾ ಟಿ 20 ಪಂದ್ಯಗಳಲ್ಲಿ ಮಂದಾನ 68.25 ಸರಾಸರಿ ಮತ್ತು 139.28 ಸ್ಟ್ರೈಕ್ ರೇಟ್ನಲ್ಲಿ 273 ರನ್ ಗಳಿಸಿದ್ದಾರೆ.

ಶಫಾಲಿ ಸಾಧನೆ

ಮಂದಾನ ಅವರ ಆರಂಭಿಕ ಪಾಲುದಾರರಾಧ ಶಫಾಲಿ ವರ್ಮಾ ಕೂಡ ಈ ಪ್ರತಿಷ್ಠಿತ ಪಟ್ಟಿಗೆ ಸೇರಿದ್ದಾರೆ. 2024ರ ಏಷ್ಯಾಕಪ್​​ನಲ್ಲಿ ವರ್ಮಾ 50ರ ಸರಾಸರಿಯಲ್ಲಿ 200 ರನ್ ಹಾಗೂ 140.84ರ ಸ್ಟ್ರೈಕ್ ರೇಟ್ನಲ್ಲಿ 200 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದರು.

ಪಂದ್ಯಾವಳಿಯ ಭಾರತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅವರು 29 ಎಸೆತಗಳಲ್ಲಿ 40 ರನ್ ಗಳಿಸಿದರು. ನಂತರ, ಅವರು ನೇಪಾಳದ ವಿರುದ್ಧ 48 ಎಸೆತಗಳಲ್ಲಿ 81 ರನ್ ಬಾರಿಸಿದ್ದರು.

ಮಿಥಾಲಿ ರಾಜ್ ನಂತರ ದ್ವಿಶತಕ ಬಾರಿಸಿದ ಎರಡನೇ ಭಾರತೀಯ ಮಹಿಳಾ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಶೆಫಾಲಿ ವರ್ಮಾ ಪಾತ್ರರಾಗಿದ್ದಾರೆ. ವರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ ೧೯೪ ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು. ಅವರು 205 ರನ್ ಗಳಿಸಿದರೆ ಭಾರತವು 603-6 ಸ್ಕೋರ್ ಮಾಡಿ. ಇದು ಮಹಿಳಾ ಟೆಸ್ಟ್​​ನಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ: Prakash Padukone : ಪದಕಗಳನ್ನು ತಪ್ಪಿಸಿಕೊಂಡ ಅಥ್ಲೀಟ್​ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್​ ಪಡುಕೋಣೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ, ಶೆಫಾಲಿ ವರ್ಮಾ 45 ರನ್ ಗಳಿಸಿದರೆ, ಎರಡು ಇನ್ನಿಂಗ್ಸ್​ಗಳಲ್ಲಿ 115.38 ಸ್ಟ್ರೈಕ್ ರೇಟ್​​ನಂತೆ ಆಡಿದ್ದರು. ಈ ಅವಧಿಯಲ್ಲಿ ವರ್ಮಾ ಟೆಸ್ಟ್​​ನಲ್ಲಿ 229 ರನ್ ಮತ್ತು ಟಿ 20ಐನಲ್ಲಿ 245 ರನ್ ಗಳಿಸಿದ್ದಾರೆ.

ಚಾಮರಿ ಅಟ್ಟಪಟ್ಟು ಮೂರನೇ ಪ್ರಶಸ್ತಿಗೆ ಹೋರಾಟ


ಶ್ರೀಲಂಕಾದ ನಾಯಕ ಚಾಮರಿ ಅಟ್ಟಪಟ್ಟು ಅತ್ಯುತ್ತಮ ಮಹಿಳಾ ಕ್ರಿಕೆಟರ್ ಎಂದೆನಿಸಿದ್ದಾರೆ. ಭಾರತ ವಿರುದ್ಧ ಫೈನಲ್​​ನಲ್ಲಿ ಗೆದ್ದು ಐತಿಹಾಸಿಕ ಏಷ್ಯಾ ಕಪ್ ಟ್ರೋಫಿ ಪಡೆಯುವಲ್ಲಿ ತಂಡ ಪಾಲಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇದು ಆ ತಂಡದ ಮೊದಲ ಏಷ್ಯಾ ಕಪ್ ಪ್ರಶಸ್ತಿಯೂ ಆಗಿತ್ತು. ಆಲ್ರೌಂಡರ್ ಐದು ಪಂದ್ಯಗಳಲ್ಲಿ 101.33 ಸರಾಸರಿ ಮತ್ತು 146.85 ಸ್ಟ್ರೈಕ್ ರೇಟ್​ನೊಂಇಗೆ 304 ರನ್​ ಬಾರಿಸಿದ್ದಾರೆ. ಇದು ಪಂದ್ಯಾವಳಿಯಲ್ಲಿ ವೈಯಕ್ತಿ ಅತಿ ಹೆಚ್ಚು ರನ್. ಅವರು ಚೆಂಡಿನೊಂದಿಗೆ ಮೂರು ವಿಕೆಟ್ ಕೂಡ ಪಡೆದಿದ್ದಾರೆ.

ಭಾರತ ವಿರುದ್ಧದ ಫೈನಲ್​​ನಲ್ಲಿ ಶ್ರೀಲಂಕಾದ ನಾಯಕಿ 43 ಎಸೆತಗಳಲ್ಲಿ 61 ರನ್ ಗಳಿಸಿ ತಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದರು.

Exit mobile version