Site icon Vistara News

Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

Smriti Mandhana

Smriti Mandhana: Smriti Mandhana hits hundred, joins Mithali Raj in elite list with 7000 international runs

ಬೆಂಗಳೂರು: ಭಾನುವಾರ ನಡೆದ ದಕ್ಷಿಣ ಆಫ್ರಿಕಾ(NDW vs RSAW) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ 143 ರನ್​ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಸೇರಿ 7 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆ ಬರೆದಿದ್ದಾರೆ. ಮಂಧನಾ ಅವರ 6ನೇ ಏಕದಿನ ಶತಕ ಇದಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 56 ರನ್‌ಗಳನ್ನು ಕಲೆ ಹಾಕುತ್ತಿದ್ದಂತೆ ಸ್ಮೃತಿ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದ ಮೈಲುಗಲ್ಲು ನಿರ್ಮಿಸಿದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾತಿಘ ಎನ್ನುವ ಹಿರಿಗೆಮೆ ಪಾತ್ರರಾದರು. ದಾಖಲೆ ಮಾಜಿ ಆಟಗಾರ್ತಿ ಮಿಥಾಲಿ ರಾಜ್(Mithali Raj) ಹೆಸರಿನಲ್ಲಿದೆ. ಮಿಥಾಲಿ ರಾಜ್ ಅವರು 10868 ರನ್‌ಗಳನ್ನು ಬಾರಿಸಿದ್ದಾರೆ. 7,059 ರನ್​ ಪೂರ್ತಿಗೊಳಿಸಿದ ಮಂಧಾನಗೆ ಬಿಸಿಸಿಐ ಶುಭ ಹಾರೈಸಿದೆ.


ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದಕೊಂಡ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. 15 ರನ್​ ಒಟ್ಟುಗೂಡುವಷ್ಟರಲ್ಲಿ ಶಫಾಲಿ ವರ್ಮ(7) ವಿಕೆಟ್​ ಪತನಗೊಂಡಿತು. ಬಳಿಕ ಬಂದ ಹೇಮಲತಾ(12), ಜೆಮಿಮಾ ರೋಡ್ರಿಗಸ್​(17), ನಾಯಕಿ ಹರ್ಮನ್​ ಪ್ರೀತ್​ ಕೌರ್​(10), ರಿಚಾ ಘೋಷ್​(3) ಕಳಪೆ ಬ್ಯಾಟಿಂಗ್​ ನಡೆಸಿ ವಿಕೆಟ್​ ಕಳೆದುಕೊಂಡರು. ಈ ವೇಳೆ ಏಕಾಂಗಿಯಾಗಿ ಹೋರಾಡಿದ ಮಂಧನಾ ಶತಕ ಬಾರಿಸಿ ತಂಡದ ಪಾಲಿಗೆ ಆಪತ್ಬಾಂಧವರಾಗಿ ಮೂಡಿಬಂದರು.

47ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಮಂಧಾನ 12 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ 117 ರನ್​ ಬಾರಿಸಿದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ದೀಪ್ತಿ ಶರ್ಮ ಮತ್ತು(37) ಮತ್ತು ಪೂಜಾ ವಸ್ತ್ರಾಕರ್​(31*) ಉತ್ತಮ ಸಾಥ್​ ನೀಡಿದರು. ಹೀಗಾಗಿ ತಂಡ 250ರ ಗಡಿ ದಾಟಿತು. ಚೇಸಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ಆಶಾ ಸೋಬನಾ( 4 ವಿಕೆಟ್​) ಅವರ ಸ್ಪಿನ್​ ಬೌಲಿಂಗ್​ ದಾಳಿಗೆ ಕೇವಲ 122 ರನ್​ಗೆ ಸರ್ವಪತನ ಕಂಡಿತು. ಪದಾರ್ಪಣ ಪಂದ್ಯದಲ್ಲೇ ಆಶಾ ಸೋಬನಾ ಅಮೊಘ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ಖಾಯಂ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ Smriti Mandhana: ಆರ್​ಸಿಬಿ ಅಭಿಮಾನಿಗಳ ಕ್ರೇಜ್​ಗೆ ಫಿದಾ ಆದ ಸ್ಮೃತಿ ಮಂಧಾನ

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 265 (ಮಂಧನಾ 117, ದೀಪ್ತಿ 37, ಪೂಜಾ ಔಟಾಗದೆ 31, ಅಯಬೊಂಗಾ ಖಾಕಾ 47ಕ್ಕೆ 3, ಮಸಬಟಾ ಕ್ಲಾಸ್‌ 51ಕ್ಕೆ 2). ದಕ್ಷಿಣ ಆಫ್ರಿಕಾ-37.4 ಓವರ್‌ಗಳಲ್ಲಿ 122 (ಸುನೆ ಲೂಸ್‌ 33, ಸಿನಾಲೊ ಜಾಫ‌¤ 27, ಮರಿಜಾನ್‌ ಕಾಪ್‌ 24, ಆಶಾ 21ಕ್ಕೆ 4, ದೀಪ್ತಿ 10ಕ್ಕೆ 2). ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ

Exit mobile version