Site icon Vistara News

Smriti Mandhana: ಆರ್​ಸಿಬಿ ಅಭಿಮಾನಿಗಳ ಕ್ರೇಜ್​ಗೆ ಫಿದಾ ಆದ ಸ್ಮೃತಿ ಮಂಧಾನ

Smriti Mandhana

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ(RCB) ಬಗ್ಗೆ ನಾಯಕಿ ಸ್ಮೃತಿ ಮಂಧಾನ(Smriti Mandhana) ಮುಕ್ತವಾಗಿ ಮಾತನಾಡಿದ್ದಾರೆ. ಎಲ್ಲೇ ಹೋದರೂ ಅಭಿಮಾನಿಗಳು ಈ ಸಲ ಕಪ್​ ನಮ್ದೇ ಎಂದು ಚಿಯರ್ ಮಾಡುತ್ತಾರೆ ಎಂದು ಹೇಳಿದ್ದಾರೆ.

2ನೇ ಆವೃತ್ತಿಯ ಡಬ್ಲ್ಯುಪಿಎಲ್​ಗೆ ಅಭ್ಯಾಸ ನಡೆಸುತ್ತಿರುವ ಸ್ಮೃತಿ ಮಂಧನಾ ವಿಶೇಷ ಸಂದರ್ಶನದಲ್ಲಿ ಈ ವಿಚಾರವನ್ನು ತಿಳಿಸಿದರು. ‘ನಮಗೆ ಕಪ್ ಗೆಲ್ಲಲು ಸಾಧ‍್ಯವಾಗುತ್ತದೋ ಇಲ್ಲವೋ, ಆದರೆ ಅಭಿಮಾನಿಗಳು ಮಾತ್ರ ಎಲ್ಲೇ ಹೋದರೂ ಈ ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದರೂ ಅಲ್ಲಿಯೂ ಇದೇ ಮಾತು. ಈ ತಂಡಕ್ಕಿರುವ ಕ್ರೇಜ್​ ಬೇರೆ ತಂಡಕ್ಕೆ ಸಿಗಲು ಸಾಧ್ಯವಿಲ್ಲ’ ಎಂದು ಹೇಳಿದರು.

ಟೂರ್ನಿ ಆಡಲು ಬೆಂಗಳೂರಿಗೆ ಬಂದ ವೇಳೆ ಸ್ಮೃತಿ ಮಂಧಾನ ಅವರನ್ನು ಸಲಾರ್​ ಸಿನೆಮಾದ ಬಿಜಿಎಂನಲ್ಲಿ ಸ್ವಾಗತಿಸಲಾಗಿತ್ತು. ಈ ವೇಳೆ ಅವರು ಸ್ಟೇಡಿಯಂಗೆ ಬಂದು ಆರ್​ಸಿಬಿಗೆ ಸಪೋರ್ಟ್​ ಮಾಡಿ ಎಂದು ಕನ್ನಡದಲ್ಲಿಯೇ ಹೇಳಿದ್ದರು. ಈ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.

ಆರ್​ಸಿಬಿ ತಂಡ


ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.

ಇದನ್ನೂ ಓದಿ WPL 2024: ಈ ಬಾರಿಯ ಡಬ್ಲ್ಯುಪಿಎಲ್ ಟೂರ್ನಿಯ ತಂಡಗಳು, ತಾಣ, ಸ್ವರೂಪ ಹೇಗಿದೆ?

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಹಾಲಿ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ಇದೇ 23ರಿಂದ ಟೂರ್ನಿ ಆರಂಭಗೊಳ್ಳಲಿದೆ. ಆತಿಥೇಯ ಆರ್​ಸಿಬಿ ಮಹಿಳಾ ತಂಡ ಫೆಬ್ರವರಿ 4ರಂದು ಯುಪಿ ವಾರಿಯರ್ಸ್​ ವಿರುದ್ಧ ತನ್ನ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ ಲೀಗ್​ನಿಂದ ಮೊದಲ ತಂಡವಾಗಿ ಹೊರಬಿದ್ದಿದ್ದ ಆರ್​ಸಿಬಿ ಈ ಬಾರಿ ತವರಿನ ಸಂಪೂರ್ಣ ಲಾಭವೆತ್ತಿ ಶ್ರೇಷ್ಠ ಪ್ರದರ್ಶನ ತೋರಬೇಕಿದೆ. ಕಳೆದ ವರ್ಷ ಸಂಪೂರ್ಣವಾಗಿ ಮುಂಬೈನಲ್ಲಿ ಟೂರ್ನಿ ನಡೆದಿತ್ತ. ಈ ಬಾರಿ ಬೆಂಗಳೂರು ಮತ್ತು ನವದೆಹಲಿಯಲ್ಲಿಯೂ ನಡೆಯಲಿದೆ.

Exit mobile version