Site icon Vistara News

Smriti Mandhana: ಆರ್​ಸಿಬಿ ತಂಡಕ್ಕೆ ಸ್ಮೃತಿ ಮಂಧಾನಾ ನಾಯಕಿ

Smriti Mandhana

#image_title

ಬೆಂಗಳೂರು: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್‌ ಲೀಗ್‌ನಲ್ಲಿ (ಡಬ್ಲ್ಯುಪಿಎಲ್‌) ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನಾ (Smriti Mandhana) ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ಆರ್​ಸಿಬಿ ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನಾ ಅವರು ನಾಯಕಿಯಾಗಿ ಆಯ್ಕೆಯಾಗಿರುವ ವಿಚಾರವನ್ನು ಮಾಜಿ ನಾಯಕ ವಿರಾಟ್​ ಕೊಹ್ಲಿ(virat kohli) ಮತ್ತು ಹಾಲಿ ನಾಯಕ ಫಾ ಡು ಪ್ಲೆಸಿಸ್‌(Faf du Plessis) ಆರ್​ಬಿಸಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿಯ ವಿಶೇಷ ತಂಡದ ನಾಯಕತ್ವವನ್ನು ಮತ್ತೊಬ್ಬರು 18 ನಂಬರ್​ ಜೆರ್ಸಿಯ ಪ್ಲೇಯರ್ ವಹಿಸಿಕೊಳ್ಳಲಿದ್ದಾರೆ. ಅವರ ಹೆಸರು ಸ್ಮೃತಿ ಮಂಧಾನಾ ಎಂದು ಕೊಹ್ಲಿ ಈ ವಿಡಿಯೋದಲ್ಲಿ ಹೇಳುವ ಮೂಲಕ ಆರ್​ಸಿಬಿ ಮಹಿಳಾ ತಂಡದ ನಾಯಕಿಯನ್ನು ಹೆಸರಿಸಿದರು.

“ಸುಮಾರು 10 ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ನಾನು ಈ ಕ್ಷಣವನ್ನು ತುಂಬಾ ಆನಂದಿಸಿದ್ದೇನೆ. ನಾಯಕನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಳೆದ ವರ್ಷವೂ ಡು ಪ್ಲೆಸಿಸ್ ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದರು. ಆರ್​ಸಿಬಿ ಮಹಿಳಾ ತಂಡವು ತುಂಬಾ ಬಲಿಷ್ಠವಾಗಿದ್ದು, ಆರ್​ಸಿಬಿಯ ಮೊದಲ ಮಹಿಳಾ ನಾಯಕಿಯಾಗಿ ನೀವು ಯಶಸ್ಸು ಸಾಧಿಸುವಂತಾಗಲಿ” ಎಂದು ಕೊಹ್ಲಿ ವಿಡಿಯೊದಲ್ಲಿ ಮಂಧಾನಾಗೆ ಹಾರೈಸಿದ್ದಾರೆ.

ಇದನ್ನೂ ಓದಿ WPL 2023: ಆರ್​ಸಿಬಿ ತಂಡಕ್ಕೆ ಬೆನ್ ಸಾಯರ್ ಮುಖ್ಯ ಕೋಚ್

ಹಾಲಿ ನಾಯಕ ಡು ಪ್ಲೆಸಿಸ್‌ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕುಟೊಂಬಕ್ಕೆ ನಿಮಗೆ ಸ್ವಾಗತ ನಿಮ್ಮ ನಾಯಕತ್ವದಲ್ಲಿ ತಂಡ ಶ್ರೇಷ್ಠಮಟ್ಟದ ಪ್ರದರ್ಶನ ತೋರುವಂತಾಗಿ ಎಂದು ಹೇಳಿದ್ದಾರೆ. ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಸ್ಮೃತಿ ಮಂಧಾನಾ(Smriti Mandhana) ಅತ್ಯಧಿಕ 3.4 ಕೋಟಿ ರೂ. ಮೊತ್ತಕ್ಕೆ ಆರ್​ಸಿಬಿ ತಂಡದ ಪಾಲಾಗುವ ಮೂಲಕ ದಾಖಲೆ ನಿರ್ಮಿಸಿದ್ದರು.

Exit mobile version