ಮುಂಬಯಿ : ಭಾರತ ಮಹಿಳೆಯರ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ವಿಮೆನ್ಸ್ ಸೂಪರ್ ಲೀಗ್ನ ಹರಾಜಿನಲ್ಲಿ (WPL Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಅವರು 3.4 ಕೋಟಿ ರೂಪಾಯಿ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಮುಂಬಯಿ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೈಪೋಟಿ ನಡೆಸಿತು. ಅಂತಿಮವಾಗಿ ಆರ್ಸಿಬಿ ಬಳಗ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಆರ್ಸಿಬಿ ತಂಡ ಸೇರಿಕೊಂಡಿರುವ ಸ್ಮೃತಿ ಮಂಧಾನಾ ತಂಡದ ನಾಯಕಿಯಾಗಿರುವ ಸಾಧ್ಯತೆಗಳಿವೆ. ಭಾರತ ತಂಡದ ನೇತೃತ್ವ ಕೂಡ ಹಲವು ಬಾರಿ ವಹಿಸಿಕೊಂಡಿದ್ದಾರೆ. ಅದೇ ಅನುಭವ ಹಾಗೂ ಸ್ಫೋಟಕ ಬ್ಯಾಟಿಂಗ್ ಬಲದಿಂದಾಗಿ ಅವರು ಡಬ್ಲ್ಯುಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು.
ಸ್ಮೃತಿ ಮಂಧಾನ ವಿಶ್ವದ ಅತ್ಯಂತ ಬಲಿಷ್ಠ ಬ್ಯಾಟರ್ಗಳ ಪೈಕಿ ಒಬ್ಬರು. ಅವರು ಇದುವರೆಗೆ ಆಡಿರುವ 112 ಟಿ20 ಹಣಾಹಣಿಗಳಲ್ಲಿ 27.32 ಸರಾಸರಿಯಂತೆ 2651 ರನ್ ಬಾರಿಸಿದ್ದಾರೆ. ಅದರಲ್ಲಿ 20 ಅರ್ಧ ಶತಕಗಳು ಸೇರಿಕೊಂಡಿವೆ. ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 124ರಷ್ಟಿದೆ.
ಇದನ್ನೂ ಓದಿ : RCB Twitter Account: ಹ್ಯಾಕ್ ಆಗಿದ್ದ ಆರ್ಸಿಬಿ ಟ್ವಿಟರ್ ಖಾತೆ ರಿಸ್ಟೋರ್
ಸ್ಮೃತಿ ಅವರು ಬಿಗ್ಬ್ಯಾಷ್ ಮಹಿಳಾ ಲೀಗ್ನಲ್ಲೂ ಆಡಿದ್ದಾರೆ.38 ಪಂದ್ಯಗಳಲ್ಲಿ ಪಾಲ್ಗೊಂಡಿರುವ ಅವರು 784 ರನ್ ಬಾರಿಸಿದ್ದಾರೆ. ಅಲ್ಲಿ ಅವರ ಸ್ಟ್ರೈಕ್ ರೇಟ್ 130ಕ್ಕಿಂತಲೂ ಹೆಚ್ಚಿದೆ. ದಿ ಹಂಡ್ರೆಡ್ ಟೂರ್ನಿಯಲ್ಲೂ ಸ್ಮೃತಿ ತಮ್ಮ ಬ್ಯಾಟಿಂಗ್ ಪ್ರಭಾವ ತೋರಿಸಿದ್ದಾರೆ.