Site icon Vistara News

ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾ ಕ್ರಿಕೆಟಿಗನ ಕೊಠಡಿಗೆ ನುಗ್ಗಿತು ಹಾವು! ಅಪಾಯಕಾರಿಯೊ, ನಿರುಪದ್ರವಿಯೊ?

t20 world cup

ಲಖನೌ : ಭಾರತ ತಂಡದ ವಿರುದ್ಧದ ಟಿ೨೦ ಸರಣಿಯಲ್ಲಿ ಪಾಲ್ಗೊಳ್ಳುವುದಕ್ಕೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿದೆ. ಮಂಗಳವಾರ ಇತ್ತಂಡಗಳ ನಡುವೆ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ಆಯೋಜನೆಗೊಂಡಿದೆ. ಏತನ್ಮಧ್ಯೆ, ಭಾರತಲ್ಲಿ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನ ಎರಡನೇ ಆವೃತ್ತಿ ನಡೆಯುತ್ತಿದ್ದು, ಅದರಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ ಮಿಚೆಲ್‌ ಜಾನ್ಸರ್ ಅವರು ಭಾರತಕ್ಕೆ ಬಂದಿದ್ದಾರೆ. ಅವರು ಲಖನೌನ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ. ಈ ಹೋಟೆಲ್‌ನ ಕೊಠಡಿಗೆ ಹಾವೊಂದು ನುಗ್ಗಿರುವುದು ಸುದ್ದಿಯಾಗಿದೆ.

ತಮ್ಮ ಕೊಠಡಿಗೆ ಹಾವು ನುಗ್ಗಿರುವ ಚಿತ್ರವನ್ನು ಮಿಚೆಲ್‌ ಜಾನ್ಸನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದ್ಯಾವುದು ಹಾವು? ನನ್ನ ಹೋಟೆಲ್‌ ಕೊಠಡಿಯಲ್ಲಿ ಹರಿದಾಡುತ್ತಿದೆ ಎಂದು ಒಂದು ಪೋಸ್ಟ್‌ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ಹಾವಿನ ಮತ್ತೊಂದು ಸರಿಯಾದ ಚಿತ್ರ ಸಿಕ್ಕಿದೆ. ಇದು ಯಾವುದು ಎಂದೇ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಲಖನೌನಲ್ಲಿ ವಾಸವಿರುವುದೇ ಆಸಕ್ತಿಕರ ಸಂಗತಿ ಎಂದು ಹೇಳಿಕೊಂಡಿದ್ದಾರೆ.

“ಅದಕ್ಕೆ ಕೆಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ವೂಲ್ಫ್‌ ಸ್ನೇಕ್, ಟ್ರೌಶರ್‌ ಸ್ನೇಕ್‌ ಎಂದೆಲ್ಲ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅಪಾಯಕಾರಿ ಹಾವಿನಂತೆ ತೋರುತ್ತಿದೆ. ಸ್ವಲ್ಪ ಎಚ್ಚರಿಕೆ ವಹಿಸಿ ಎಂಬುದಾಗಿ ಸಲಹೆ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡದ ಅಪಾಯಕಾರಿ ಬೌಲರ್‌ ಎನಿಸಿಕೊಂಡಿದ್ದ ಮಿಚೆಲ್‌ ಜಾನ್ಸನ್‌ ಅವರು ೭೩ ಟೆಸ್ಟ್‌ ಪಂದ್ಯಗಳು, ೧೫೩ ಏಕದಿನ ಪಂದ್ಯಗಳು, ೩೦ಟಿ೨೦ ಪಂದ್ಯಗಳಲ್ಲಿ ಆಡಿದ್ದಾರೆ.

ಇದನ್ನೂ ಓದಿ |T20 World Cup | ಬೌಲರ್‌ಗಳ ಆಯ್ಕೆಯಲ್ಲಿ ಭಾರತ ತಂಡ ಯಾಮಾರಿದೆ ಎಂದ ಆಸೀಸ್‌ ಮಾಜಿ ವೇಗಿ

Exit mobile version