Site icon Vistara News

Virat Kohli: ಪಂದ್ಯದ ಬಳಿಕ ಜಡೇಜಾಗೆ ಕ್ಷಮೆ ಕೇಳಿದ ವಿರಾಟ್​ ಕೊಹ್ಲಿ

virat kohli sorry to jadeja

ಪುಣೆ: ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್​ ಕೊಹ್ಲಿ(Virat Kohli) ಅವರು ಪಂದ್ಯದ ಬಳಿಕ ಸಹ ಆಟಗಾರ ರವೀಂದ್ರ ಜಡೇಜಾ(Ravindra Jadeja) ಬಳಿ ಕ್ಷಮೆಯಾಚಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 256 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ 41.3 ಓವರ್​​ಗಳಲ್ಲಿ ಮೂರು ವಿಕೆಟ್​ಗೆ 261 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್​ ವೇಳೆ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ವಿರಾಟ್​ ಅವರು 97 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ ಅಜೇಯ 103 ರನ್​ ಬಾರಿಸಿದರು. ಗೆಲುವಿಗೆ ಮೂರು ರನ್​ ಬೇಕಿದ್ದಾಗ ಕೊಹ್ಲಿ ಸಿಕ್ಸರ್​ ಬಾರಿಸಿ ತಂಡಕ್ಕೆ ಗೆಲುವಿನ ಜತೆಗೆ ತಮ್ಮ ಶತಕವನ್ನೂ ಪೂರ್ತಿಗೊಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ ಬಾಳ್ವೆಯಲ್ಲಿ 48ನೇ ಶತಕ ಬಾರಿಸಿದ ಸಾಧನೆ ಮಾಡಿದರು. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವಿಕರಿಸಿ ಮಾತನಾಡುವ ವೇಳೆ ವಿರಾಟ್​ ಅವರು ಈ ಪ್ರಶಸ್ತಿ ನಿಜವಾಗಿಯೂ ರವೀಂದ್ರ ಜಡೇಜಾಗೆ ಸಲ್ಲಬೇಕಿತ್ತು. ಆದರೆ ನಾನು ಶತಕ ಬಾರಿಸಿದ ಕಾರಣ ಅಂತಿಮ ಕ್ಷಣದಲ್ಲಿ ನನಗೆ ಒಲಿಯಿತು. ನಿಮ್ಮ ಈ ಪ್ರಶಸ್ತಿಯನ್ನು ಕಸಿದುಕೊಂಡದಕ್ಕೆ ಕ್ಷಮೆ ಇರಲಿ ಎಂದು ನಗುತ್ತಲೇ ಹೇಳಿದರು.

ಕೊಹ್ಲಿ ಹೀಗೆ ಹೇಳಲು ಕಾರಣವೆಂದರೆ ಜಡೇಜಾ ಅವರು ಈ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್​ ಮತ್ತು ಬೌಲಿಂಗ್​ನಲ್ಲಿ 2 ವಿಕೆಟ್​ ಕಿತ್ತಿದ್ದರು. ಹೀಗಾಗಿ ಜಡೇಜಾ ಅವರಿಗೆ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ ಶತಕದ ಕಾರಣದಿಂದ ಈ ಪ್ರಶಸ್ತಿ ಕೊಹ್ಲಿಗೆ ಒಲಿಯಿತು. ಇದೇ ಕಾರಣಕ್ಕೆ ಕೊಹ್ಲಿ ಅವರು ಜಡ್ಡುಗೆ ಸಿಗಬೇಕಾದ ಪ್ರಶಸ್ತಿ ತನಗೆ ಸಿಕ್ಕಾಗ ಜಡ್ಡು ಬಳಿಕ ಕ್ಷಮೆ ಕೇಳಲು ಪ್ರಮುಖ ಕಾರಣ. ಕೊಹ್ಲಿಯ ಈ ಮಾತನ್ನು ಕೇಳುತ್ತಲೇ ಜಡೇಜಾ ಅವರು ಜೋರಾಗಿ ನಕ್ಕಿದ್ದಾರೆ. ಇಬ್ಬರು ಕೂಡ ಉತ್ತಮ ಸ್ನೇಹಿತರಾಗಿದ್ದಾರೆ.

ಇದನ್ನೂ ಓದಿ IND vs BAN: ಕೊಹ್ಲಿಗೆ ಶತಕ ಬಾರಿಸಲು ಒಪ್ಪಿಸಿದ್ದೇ ರಾಹುಲ್​; ಪಂದ್ಯದ ಬಳಿಕ ರಿವೀಲ್

ವಿಶ್ವ ದಾಖಲೆ ಬರೆದ ಕೊಹ್ಲಿ

ಕೊಹ್ಲಿ ಅವರು ಶತಕ ಬಾರಿಸಿ ಮಿಂಚಿದ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 26 ಸಾವಿರ ರನ್ ಪೂರೈಸಿದರು. ಈ ಮೂಲಕ ಅತಿ ವೇಗವಾಗಿ 26000 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಅವರು 601 ಇನಿಂಗ್ಸ್​ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಕೊಹ್ಲಿ ಕೇವಲ 577 ಇನಿಂಗ್ಸ್​ಗಳ ಮೂಲಕ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.

Exit mobile version