Site icon Vistara News

Soumya Sarkar: 14 ವರ್ಷಗಳ ಹಳೆಯ ಸಚಿನ್​ ದಾಖಲೆ ಮುರಿದ ಸೌಮ್ಯ ಸರ್ಕಾರ್

Soumya Sarkar walks back after smashing 169

ಆಕ್ಲೆಂಡ್​: ಬಾಂಗ್ಲಾದೇಶ ಬ್ಯಾಟರ್ ಸೌಮ್ಯ ಸರ್ಕಾರ್(Soumya Sarkar) ಬುಧವಾರ ನ್ಯೂಜಿಲ್ಯಾಂಡ್​​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಎಡಗೈ ಆಟಗಾರನಾಗಿರುವ ಸೌಮ್ಯ ಸರ್ಕಾರ್ 151 ಎಸೆತಗಳಲ್ಲಿ 169 ರನ್ ಬಾರಿಸಿದರು. ಈ ಮೂಲಕ ಸಚಿನ್​ ಅವರ ದಾಖಲೆಯೊಂದು ಪತನಗೊಂಡಿತು. ನ್ಯೂಜಿಲ್ಯಾಂಡ್​ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ಏಷ್ಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೌಮ್ಯ ಸರ್ಕಾರ್ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಸಚಿನ್​ ತೆಂಡೂಲ್ಕರ್​ ಹಸರಿನಲ್ಲಿತ್ತು.

ಸಚಿನ್​ ತೆಂಡೂಲ್ಕರ್​ ಅವರು ನ್ಯೂಜಿಲ್ಯಾಂಡ್​ ವಿರುದ್ಧ 2009ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ತೆಂಡೂಲ್ಕರ್ ಅಜೇಯ 163 ರನ್ ಬಾರಿಸಿದ್ದರು. ಇದೀಗ 14 ವರ್ಷಗಳ ಬಳಿಕ ಸಚಿನ್​ ದಾಖಲೆ ಮುರಿಯುವಲ್ಲಿ ಬಾಂಗ್ಲಾ ಆಟಗಾರ ಯಶಸ್ವಿಯಾದರು. ಅವರ ಈ ಸೊಗಾಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಬರೋಬ್ಬರಿ 22 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸಿಡಿದವು.

ಸೋಲು ಕಂಡ ಬಾಂಗ್ಲಾ

ಸೌಮ್ಯ ಸರ್ಕಾರ್ ಅವರ ಶತಕದ ಹೊರತಾಗಿಯೂ ಬಾಂಗ್ಲಾದೇಶ ಈ ಪಂದ್ಯದಲ್ಲಿ ಸೋಲು ಕಂಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾದೇಶ 49.5 ಓವರ್​ಗಳಲ್ಲಿ 291 ರನ್​ಗಳಸಿ ಸವಾಲೊಡ್ಡಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ಕೇವಲ ಮೂರು ವಿಕೆಟ್​ ಕಳೆದುಕೊಂಡು 46.2 ಓವರ್​ಗಳಲ್ಲಿ 296 ರನ್​ ಗಳಿಸಿ ಗೆಲುವು ದಾಖಲಿಸಿತು.

ಚೇಸಿಂಗ್​ ವೇಳೆ ನ್ಯೂಜಿಲ್ಯಾಂಡ್​ ಪರ ಆರಂಭಿಕರಾದ ವಿಲ್​ ಯಂಗ್​ ಮತ್ತು ರಚಿನ್​ ರವೀಂದ್ರ ಮೊದಲ ವಿಕೆಟ್​ಗೆ 76 ರನ್​ ಒಟ್ಟುಗೂಡಿಸಿ ಉತ್ತಮ ಅಡಿಪಾಯ ಹಾಕಿದರು. ರಚಿನ್​ 7 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 45 ರನ್​ ಬಾರಿಸಿದರೆ, ವಿಲ್​ ಯಂಗ್ 89 ರನ್​ ಗಳಿಸಿದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ ದಾಖಲಾಯಿತು. ಮೂರನೇ ವಿಕೆಟ್​ಗೆ ಆಡಲಿಳಿದ ಹೆನ್ಸಿ ನಿಕೋಲ್ಸ್​ ಕೂಡ 95 ರನ್​ ಬಾರಿಸಿದರು. ಕೇವಲ 5 ರನ್​ ಅಂತರದಿಂದ ಶತಕ ತಪ್ಪಿಸಿಕೊಂಡರು.

ಇದನ್ನೂ ಓದಿ ಮುಂಬೈ ಇಂಡಿಯನ್ಸ್​ ತೊರೆದರೇ ಸಚಿನ್​ ತೆಂಡೂಲ್ಕರ್​? ಪೋಸ್ಟ್​ನಲ್ಲಿದೆ ಅಸಲಿಯತ್ತು!

ಅಂತಿಮ ಹಂತದಲ್ಲಿ ನಾಯಕ ಟಾಮ್ ಲ್ಯಾಥಂ(34) ಮತ್ತು ಟಾಮ್​ ಬ್ಲಂಡೆಲ್​(24) ಅಜೇಯ ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಾಂಗ್ಲಾದೇಶ ಪರ ಸೌಮ್ಯ ಸರ್ಕಾರ್ ಹೊರತುಪಡಿಸಿ ಅನುಭವಿ ಹಾಗೂ ಹಿರಿಯ ಆಟಗಾರ ಮುಶ್ಫಿಕರ್​ ರಹಿಂ 45 ರನ್​ ಬಾರಿಸಿದರು. ಉಳಿದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು. ಕನಿಷ್ಠ ಇಬ್ಬರು ಆಟಗಾರರಾದರು 30 ಪ್ಲಸ್​ ರನ್​ ಬಾರಿಸುತ್ತಿದ್ದರೆ ಪಂದ್ಯದಲ್ಲಿ ಹಿಡಿತ ಸಾಧಿಸಬಹುದಿತ್ತು. ಈ ಪಂದ್ಯ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಕಿವೀಸ್​2-0 ಮುನ್ನಡೆ ಸಾಧಿಸಿ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

Exit mobile version