Site icon Vistara News

Rishabh Pant : ರಿಷಭ್​ ಪಂತ್ ತಂಡಕ್ಕೆ ವಾಪಸಾಗಲು ಎಷ್ಟು ವರ್ಷ ಬೇಕಾಗಬಹುದು ಎಂದು ತಿಳಿಸಿದ ಸೌರವ್​ ಗಂಗೂಲಿ

Sourav Ganguly said how many years it may take for Rishabh Pant to return to the team

#image_title

ನವ ದೆಹಲಿ: ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ (Rishabh Pant) ಕಾರು ಅವಘಡದಲ್ಲಿ ಗಾಯಗೊಂಡು ಮನೆಯಲ್ಲಿದ್ದಾರೆ. ತಮ್ಮೂರು ರೂರ್ಕಿಗೆ ಹೋಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಘಟನೆಯಲ್ಲಿ ರಿಷಭ್​ ಪಂತ್​ ಅವರ ಮಂಡಿಗೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಜತೆಗೆ ಬೆನ್ನಿಗೂ ಸುಟ್ಟ ಗಾಯಗಳವಾಗಿವೆ. ಹಣೆಗೂ ಪೆಟ್ಟಾಗಿದೆ. ಅಪಘಾತದ ಗಂಭೀರತೆಯನ್ನು ನೋಡಿದರೆ ಅವರ ಪ್ರಾಣ ಉಳಿದದ್ದೇ ಅದೃಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು. ಏತನ್ಮಧ್ಯೆ, ರಿಷಭ್​ ಪಂತ್​ ಯಾವಾಗ ತಂಡಕ್ಕೆ ವಾಪಸಾಗಬಹುದು ಎಂಬ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಉತ್ತರ ಕೊಟ್ಟಿದ್ದಾರೆ.

ಬಿಸಿಸಿಐ ಮಾಜಿ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ಕ್ರಿಕೆಟ್ ನಿರ್ದೇಶಕರಾಗಿ ನೇಮಕೊಂಡಿದ್ದಾರೆ. ರಿಷಭ್​ ಪಂತ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕರೂ ಆಗಿದ್ದ ಕಾರಣ ಅವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಕ್ರಿಕೆಟಿಗ ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಉತ್ತರ ಕೊಟ್ಟಿದ್ದಾರೆ.

ಐಪಿಎಲ್​ನಲ್ಲಿ ರಿಷಭ್​ ಪಂತ್​ ಅವರ ಸ್ಥಾನಕ್ಕೆ ಸೂಕ್ತ ಪರ್ಯಾಯ ಹುಡುಕುವುದು ಸುಲಭವಲ್ಲ ಎಂಬುದಾಗಿಯೂ ಗಂಗೂಲಿ ಹೇಳಿದ್ದಾರೆ. ಫ್ರಾಂಚೈಸಿ ಕೂಡ ಪರ್ಯಾಯ ಆಟಗಾರ ಯಾರೆಂದು ತಿಳಿಸಿಲ್ಲ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಜತೆ ಒಂದೆರಡು ಬಾರಿ ಮಾತುಕತೆ ನಡೆಸಿದ್ದೇನೆ. ಅವರಿಗೆ ಗಂಭೀರ ಗಾಯಗಳಾಗಿವೆ. ಅತಿ ಸೂಕ್ಷ್ಮ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ ಒಂದು ವರ್ಷ ಅಥವಾ ಎರಡು ವರ್ಷ ಅವಧಿಯಲ್ಲಿ ತಂಡಕ್ಕೆ ಮರಳಬಹುದು ಎಂದು ಗಂಗೂಲಿ ಹೇಳಿದ್ದಾರೆ.

ಐಪಿಎಲ್​ ಬಗ್ಗೆ ಏನಂದರು?

ಐಪಿಎಲ್​ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಉಳಿದಿದೆ. ಈಗಷ್ಟೇ ನಮ್ಮ ಕ್ಯಾಂಪ್ ಆರಂಭಗೊಂಡಿದೆ. ಸತತ ಕ್ರಿಕೆಟ್​ ಪಂದ್ಯಗಳು ನಡೆಯುತ್ತಿರುವ ಕಾರಣ ಅವರೆಲ್ಲರೂ ಏಕಾಏಕಿ ತಂಡಕ್ಕೆ ಲಭ್ಯರಾಗುವುದಿಲ್ಲ. ನಾಲ್ಕರಿಂದ ಐದು ಆಟಗಾರರು ಇರಾನಿ ಕಪ್​ನಲ್ಲಿ ಆಡುತ್ತಿದ್ದಾರೆ. ಸರ್ಫರಾಜ್​ ಖಾನ್​ ಬೆರಳು ಮುರಿದಿದೆ. ಅವರೂ ಸದ್ಯಕ್ಕೆ ಕ್ಯಾಂಪ್​ಗೆ ಬರುವುದಿಲ್ಲ ಎಂದು ಗಂಗೂಲಿ ಹೇಳಿದರು.

Exit mobile version