Site icon Vistara News

Sourav Ganguly: ಮನೆಯಿಂದಲೇ ಗಂಗೂಲಿಯ ಮೊಬೈಲ್​ ಕಳವು; ಡೇಟಾ ಸೋರಿಕೆ ಭಯ!

Sourav Ganguly

ಕೋಲ್ಕತ್ತಾ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಅವರ ಮೊಬೈಲ್ ಫೋನ್ ಕಳವಾಗಿದ್ದು, ಪೋನ್​ನಲ್ಲಿದ್ದ(Sourav Ganguly’s phone) ಡಾಟಾ ಸಂರಕ್ಷಣೆಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಂಗೂಲಿ ಫೋನ್​ ಅವರ ಮನೆಯಿಂದಲೇ ಕಳವಾಗಿದೆ. ವರದಿಯ ಪ್ರಕಾರ 1.6 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಇದಾಗಿದೆ ಎನ್ನಲಾಗಿದೆ.

ಶನಿವಾರದಂದು ಈ ಘಟನೆ ನಡೆದಿದ್ದು, ಭಾನುವಾರದಂದು ಗಂಗೂಲಿ ಠಾಕುರ್ಪುಕೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈಯಕ್ತಿಕ ಡೇಟಾವನ್ನು ಒಳಗೊಂಡಿರುವ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್​ ಫೋನ್ ಇದಾಗಿತ್ತು. ಮನೆಯಿಂದಲೇ ಮೊಬೈಲ್​ ಕಾಣೆಯಾಗಿದೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಶನಿವಾರ ಬೆಳಿಗ್ಗೆ 11.30 ರಿಂದ ಅವರ ಫೋನ್ ಪತ್ತೆಯಾಗಿಲ್ಲ. ಪ್ರಸ್ತುತ ಅವರ ಮನೆಗೆ ಬಣ್ಣ ಬಳಿಯುತ್ತಿರುವ ಕೆಲವು ಕಾರ್ಮಿಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನನ್ನ ಫೋನ್ ಮನೆಯಿಂದ ಕಳವಾಗಿದೆ ಎಂದು ನಾನು ಭಾವಿಸುತ್ತೇನೆ. ಫೋನ್​ನಲ್ಲಿ ತುಂಬಾ ಸಂಪರ್ಕ ಸಂಖ್ಯೆಗಳಿವೆ. ವೈಯಕ್ತಿಕ ಮಾಹಿತಿ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಪ್ರವೇಶವನ್ನು ಹೊಂದಿದೆ. ಸೂಕ್ಷ್ಮವಾದ ವೈಯಕ್ತಿಕ ಡೇಟಾ ಕೂಡ ಇದೆ. ಅದು ಸೋರಿಕೆಯಾದಲ್ಲಿ ತನಗೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡಬಹುದು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಂಗೂಲಿ ಹೇಳಿದ್ದಾರೆ.

ಬಿಸಿಸಿಐ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ಗಂಗೂಲಿ


ಅಂಡರ್ 19 ಪುರುಷರ (U-19 World Cup) ಏಕದಿನ ವಿಶ್ವಕಪ್​ನಲ್ಲಿ ಭಾರತ ಸತತ ಐದನೇ ಮತ್ತು ಒಟ್ಟಾರೆ 9 ನೇ ಫೈನಲ್ ಆಡುತ್ತಿದೆ. ಆದರೆ, ಭಾರತ ಇದುವರೆಗೆ ಒಂದೇ ಒಂದು ವಿಶ್ವ ಕಪ್​ಗೆ ಆತಿಥ್ಯ ವಹಿಸಿಲ್ಲ. ಈ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ (BCCI) ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂದರೆ ಗಂಗೂಲಿ ಹಿಂದಿನ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದವರು.

ಭಾರತವು ಈ ವಿಶ್ವ ಕಪ್​ನಲ್ಲಿ ಅತ್ಯಂತ ಯಶಸ್ವಿ ತಂಡ. ಒಟ್ಟು ಐದು ಆವೃತ್ತಿಗಳನ್ನು ಗೆದ್ದಿದೆ. ಆದರೂ ಟೂರ್ನಿಯ ಆತಿಥ್ಯ ವಹಿಸಿಲ್ಲ. ಹಿರಿಯ ಪುರುಷರ ಪಂದ್ಯಾವಳಿಗಳನ್ನು ಹೆಚ್ಚಾಗಿ ಆಯೋಜಿಸದ ವಿಶ್ವದ ನಾನಾ ದೇಶಗಳಲ್ಲಿ ಅಂಡರ್ 19 ವಿಶ್ವಕಪ್ ನಡೆಯುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.

ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಆಟವನ್ನು ವಿಸ್ತರಿಸಲು ಈ ಪಂದ್ಯಾವಳಿಗಳನ್ನು ವಿಶ್ವದ ವಿವಿಧ ಮೂಲೆಗಳಲ್ಲಿ ನಡೆಸಲಾಗುತ್ತದೆ ಎಂದು ಸೌರವ್ ಗಂಗೂಲಿ ನಂಬಿದ್ದಾರೆ. ರೆವ್​ಸ್ಪೋರ್ಟ್ಸ್​​ನಲ್ಲಿ ಮಾತನಾಡಿದ ಗಂಗೂಲಿ “ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ (ಭಾರತವು ಅಂಡರ್ -19 ವಿಶ್ವಕಪ್​​ಗೆ ಆತಿಥ್ಯ ವಹಿಸುತ್ತಿಲ್ಲ). ಇತರ ವಿಶ್ವಕಪ್ ಗಳನ್ನು ಭಾರತದಲ್ಲಿ ಆಡಲಾಗುತ್ತದೆ. ಹಿರಿಯರ ವಿಶ್ವಕಪ್ ನಡೆಯದ ಸ್ಥಳಗಳಲ್ಲಿ ಇದನ್ನು ಆಡಿದರೆ ತಪ್ಪೇನು ಎಂದು ಹೇಳಿದ್ದಾರೆ.

Exit mobile version