Site icon Vistara News

ICC World Cup 2023 : ಆಫ್ಘನ್​ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 5 ವಿಕೆಟ್​ ಸುಲಭ ಜಯ

South Africa Cricket team

ಅಹಮದಾಬಾದ್​: ದಕ್ಷಿಣ ಆಫ್ರಿಕಾ ತಂಡ ಹಾಲಿ ವಿಶ್ವ ಕಪ್​ ಲೀಗ್ (ICC World Cup 2023) ಹಂತದಲ್ಲಿ 9ನೇ ವಿಜಯವನ್ನು ಕಂಡಿದೆ. ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ ಗೆಲುವು ಸಾಧಿಸಿ ಸೆಮಿಫೈನಲ್ ಹಂತದ ಹಣಾಹಣಿಗೆ ಪೂರ್ಣ ಪ್ರಮಾಣದ ಅಭ್ಯಾಸ ನಡೆಸಿದೆ. ದಕ್ಷಿಣ ಆಫ್ರಿಕಾ ತಂಡ ಎರಡನೇ ತಂಡವಾಗಿ ಸೆಮೀಸ್​ಗೆ ಪ್ರವೇಶ ಪಡೆದುಕೊಂಡಿದೆ. 17ರಂದು ನಡೆಯುವ ಎರಡನೇ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಲಿದೆ. ಅತ್ತ ಅಫಘಾನಿಸ್ತಾನ ತಂಡ ಸೋಲಿನೊಂದಿಗೆ ವಿಶ್ವ ಕಪ್ ಅಭಿಯಾನ ಕೊನೆಗೊಳಿಸಿದೆ. ಆದಾಗ್ಯೂ ಆ ತಂಡಕ್ಕೆ ಇದು ಸ್ಮರಣೀಯ ವಿಶ್ವ ಕಪ್ ಎನಿಸಿಕೊಂಡಿದೆ. ಆಡಿರುವ 9ರಲ್ಲಿ 4 ವಿಜಯವನ್ನು ಕಂಡುಕೊಂಡಿದೆ. ಇದು ವಿಶ್ವ ಕಪ್ ಆವೃತ್ತಿಯಲ್ಲಿ ಆಫ್ಘನ್ ತಂಡದ ಗರಿಷ್ಠ ದಾಖಲೆಯಾಗಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 244 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಇದು ಏಳನೇ ಗೆಲುವು. ಭಾರತ ಮತ್ತು ನೆದರ್ಲ್ಯಾಂಡ್ಸ್​ ತಂಡದ ವಿರುದ್ಧ ತೆಂಬಾ ಬವುಮಾ ತಂಡ ಸೋಲು ಕಂಡಿತ್ತು.

ಕಷ್ಟಕರ ಗೆಲುವು

ದಕ್ಷಿಣ ಆಫ್ರಿಕಾ ಗೆಲುವನ್ನು ಪಡೆದ ಹೊರತಾಗಿಯೂ ನಿರೀಕ್ಷಿಸಿದ ರೀತಿಯಲ್ಲಿ ದೊರಕಲಿಲ್ಲ. ಮಧ್ಯಮ ಓವರ್​ಗಳಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ವ್ಯಾನ್ ಡೆರ್ ಡುಸೆನ್ (76) ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದರು. ಅವರು ತಂಡದ ಮೇಲೆ ಒತ್ತಡ ಬೀಳಲು ಬಿಡಲಿಲ್ಲ. ಅವರು ಕೊನೇ ತನಕ ಔಟಾಗದೇ ಉಳಿದು ಗೆಲ್ಲಿಸಿಕೊಟ್ಟರು. ಇದಕ್ಕೂ ಮುನ್ನ ಡಿ ಕಾಕ್ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ನೀಡಿದರು. ಅವರು 41 ರನ್ ಬಾರಿಸಿದರು. ಅವರೀಗ ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 9 ಪಂದ್ಯಗಳಲ್ಲಿ 591 ರನ್ ಪೇರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sri Lanka Cricket Team : ಲಂಕಾ ಕ್ರಿಕೆಟ್​ ತಂಡಕ್ಕೆ ಬಹು ದೊಡ್ಡ ಸಂಕಷ್ಟ!

ನಾಯಕ ಬವುಮಾ (23 ರನ್​) ಲಯ ಮತ್ತು ಫಿಟ್ನೆಸ್ ಪಡೆದು ಹೋರಾಡುವಲ್ಲಿ ಹೆಣಗಾಡಿದರು. ಮಾರ್ಕ್ರಮ್ (25), ಕ್ಲಾಸೆನ್ (10 ನರ್​) ಮತ್ತು ಮಿಲ್ಲರ್ (24) ಗೆಲುವಿಗಾಗಿ ಕೊಡುಗೆ ಕೊಟ್ಟರು. ಕೊನೆಯಲ್ಲಿ ಫೆಹ್ಲುಕ್ವಾಯೊ (39) ಬಿರುಸಿನ ಆಟವಾಡಿ ಗೆಲುವು ತಂದುಕೊಟ್ಟರು. ಅವರುವ್ಯಾನ್ ಡೆರ್ ಡುಸೆನ್ ಅವರೊಂದಿಗೆ 65 ರನ್​ಗಳ ಜತೆಯಾಟ ನೀಡಿದರು.

ರನ್​ ಗಳಿಕೆ ಸಾಲಲಿಲ್ಲ

ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್ ಈ ಪಂದ್ಯದಲ್ಲಿ ಕೈಕೊಟ್ಟಿತು. ನಿರಂತರವಾಗಿ ವಿಕೆಟ್​ ಕಳೆದುಕೊಂಡಿತು. ಆದಾಗ್ಯೂ ಅಜ್ಮತುಲ್ಲಾ ಒಮರ್ಜೈ ಅಜೇಯ 97 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ನೂರ್​ ಅಹಮದ್​ 26 ರನ್​ ಹಾಗೂ ರಹ್ಮತ್ ಶಾ 26 ರನ್ ಮತ್ತು ಗುರ್ಬಜ್​ 25 ರನ್ ಗಳಿಸಿದರು. ಆದರೆ, ಬೌಲಿಂಗ್​ ವೇಳೆ ಎದುರಾಳಿ ಮೇಲೆ ಒತ್ತಡ ಹೇರಿದರು. ದಕ್ಷಿಣ ಆಫ್ರಿಕಾದ ಸ್ಕೋರಿಂಗ್ ವೇಗವನ್ನು ನಿಯಂತ್ರಣದಲ್ಲಿಡಲು ಮತ್ತು ಆಟವನ್ನು ಇಷ್ಟು ಕೊನೆ ತನಕ ಕೊಂಡೊಯ್ಯಲು ಸಫಲರಾದರು. ರಶೀದ್ ಮತ್ತು ನಬಿ ತಲಾ ಎರಡು ವಿಕೆಟ್ ಪಡೆದರೆ ಇನ್ನೊಂದು ವಿಕೆಟ್ ಮುಜೀಬ್ ಗೆ ಸಿಕ್ಕುತ. ನೂರ್ ಸ್ವಲ್ಪ ಕಳೆಗುಂದಿದರು. ನವಿನ್ ಉಲ್ ಹಕ್​ ಕೂಡ ದುಬಾರಿಯಾದರು.

ಈ ವಿಶ್ವಕಪ್​ನಲ್ಲಿ ಆಫ್ಘನ್​ ಸಾಧನೆ ಕಡಿಮೆಯೇನಲ್ಲ. ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ, ಯಾವುದೂ ಅದೃಷ್ಟದ ಗೆಲುವಲ್ಲ. ಸಂಘಟಿತ ಪ್ರಯತ್ನ. ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಆರಂಭ ಪಡೆದಿತ್ತು. ಆದರೆ, ಅಲ್ಲಿ ಅದೃಷ್ಟ ಕೈಕೊಟ್ಟಿತು.

Exit mobile version