Site icon Vistara News

ICC Rankings: ಸೆಮಿ​ ಪಂದ್ಯಕ್ಕೂ ಮುನ್ನ ಅಗ್ರಸ್ಥಾನ ಕಳೆದುಕೊಂಡ ಮೊಹಮ್ಮದ್​ ಸಿರಾಜ್

No.1 ODI bowler

ದುಬೈ: ಕಳೆದ ವಾರ ಐಸಿಸಿ ಪ್ರಕಟಿಸಿದ ಬೌಲರ್​ಗಳ ಶ್ರೇಯಾಂಕದಲ್ಲಿ(ICC Rankings) ನಂ.1 ಸ್ಥಾನಕ್ಕೇರಿದ್ದ ಟೀಮ್​ ಇಂಡಿಯಾದ ಮೊಹಮ್ಮದ್​ ಸಿರಾಜ್​(Mohammed Siraj) ಅವರು ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್​ ಬೌಲರ್​ ಕೇಶವ್​ ಮಹಾರಾಜ್(Keshav Maharaj)​ ನಂ.1ಸ್ಥಾನಕ್ಕೇರಿದ್ದಾರೆ. ಸಿರಾಜ್​ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಗ್ರಸ್ಥಾನದಲ್ಲೇ ಮುಂದುವರಿದ ಗಿಲ್

ಶುಭಮನ್​ ಗಿಲ್​ ಅವರು ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಕಳೆದ ವಾರ ಗಿಲ್​ ಅವರು 830 ರೇಟಿಂಗ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಅವರು ಹಿಂದಿಕ್ಕಿದ್ದರು. ಈ ಬಾರಿ ಗಿಲ್ ರೇಟಿಂಗ್​ನಲ್ಲಿ ಮತ್ತೆ 2 ಅಂಕದ ಏರಿಕೆ ಕಂಡಿದ್ದಾರೆ. ಸದ್ಯ ಅವರ ರೇಟಿಂಗ್​ ಅಂಕ 832. ಶುಭಮನ್​ ಗಿಲ್​ ಅವರು ಪ್ರಸ್ತುತ ಈ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಎರಡು ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದ್ದರು.

ಇದನ್ನೂ ಓದಿ IND vs NZ: ಸಚಿನ್​,ರೋಹಿತ್ ದಾಖಲೆ​ ಮುರಿಯಲಿದ್ದಾರಾ ಕೊಹ್ಲಿ,ರಚಿನ್​?

ದಕ್ಷಿಣ ಆಫ್ರಿಕಾ ತಂಡದ ಎಡಗೈ ಬ್ಯಾಟರ್​ ಕ್ವಿಂಟನ್​ ಡಿ ಕಾಕ್(773 ರೇಟಿಂಗ್​ ಅಂಕ)​ ಅವರು ಒಂದು ಸ್ಥಾನಗಳ ಪ್ರಗತಿ ಸಾಧಿಸಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಅವರು 772 ರೇಟಿಂಗ್​ ಅಂಕದೊಂದಿದೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ 760 ರೇಟಿಂಗ್​ ಅಂಕದೊಂದಿಗೆ ಒಂದು ಸ್ಥಾನ ಮೇಲೇರಿ 5ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ 6ನೇ ಸ್ಥಾನದಲ್ಲಿದ್ದರು. ಬ್ಯಾಟಿಂಗ್​ ಶ್ರೇಯಾಂಕದ ಅಗ್ರ 10ರಲ್ಲಿ ಮೂವರು ಭಾರತೀಯ ಆಟಗಾರರು ಕಾಣಿಸಿಕೊಂಡಂತಾಗಿದೆ.

ಇದನ್ನೂ ಓದಿ IND vs NZ: ಸಚಿನ್​,ರೋಹಿತ್ ದಾಖಲೆ​ ಮುರಿಯಲಿದ್ದಾರಾ ಕೊಹ್ಲಿ,ರಚಿನ್​?

ಶ್ರೇಯಸ್ ಅಯ್ಯರ್ ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನ ಮೇಲೇರಿ ನಂ.13ಕ್ಕೆ ತಲುಪಿದ್ದಾರೆ. ಕೆಎಲ್ ರಾಹುಲ್ ಆರು ಸ್ಥಾನ ಮೇಲೇರಿ 18ನೇ ಸ್ಥಾನಕ್ಕೇರಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಭಾರತದ ಕೊನೆಯ ಮತ್ತು ಅಂತಿಮ ಗುಂಪಿನ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಶತಕ ಬಾರಿಸಿದ್ದರು. ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಭಾರತ ಪರ ವೇಗದ ಶತಕ ಬಾರಿಸಿದ ದಾಖಲೆಯನ್ನು ರಾಹುಲ್ ನಿರ್ಮಿಸಿದ್ದರು.

ಇದನ್ನೂ ಓದಿ IND vs NZ: ಇಂದು ಭಾರತ-ಕಿವೀಸ್​ ಸೆಮಿ ಸಮರ; ಹೇಗಿದೆ ವಾಂಖೆಡೆ ಹವಾಮಾನ?

ಕುಸಿದ ಸಿರಾಜ್​

ಕಳೆದ ವಾರ ಮೂರನೇ ಸ್ಥಾನದಿಂದ ಏರಿಕ ಕಂಡು ಅಗ್ರಸ್ಥಾನ ಪಡೆದು ನಂ.1 ಬೌಲರ್​ ಆಗಿದ್ದ ಸಿರಾಜ್​ ಈ ಬಾರಿ ಮತ್ತೆ ಕುಸಿತ ಕಂಡಿದ್ದಾರೆ. 723 ರೇಟಿಂಗ್​ ಅಂಕೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್​ ಮಹರಾಜ್​ 726 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ ಅವರು ದ್ವಿತೀಯ ಸ್ಥಾನದಲ್ಲಿದ್ದರು. ಜಸ್​ಪ್ರೀತ್​ ಬುಮ್ರಾ ಮತ್ತು ಕುಲ್​ದೀಪ್ ಯಾದವ್​ ತಲಾ 2 ಸ್ಥಾನಗಳ ಪ್ರಗತಿ ಸಾಧಿಸಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.​ ಮೊಹಮ್ಮದ್​ ಶಮಿ ಒಂದು ಸ್ಥಾನ ಕುಸಿತ ಕಂಡು 12ನೇ ಸ್ಥಾನ ಪಡೆದಿದ್ದಾರೆ.

ಮಹಾರಾಜ್ ಅವರು ನವೆಂಬರ್ 16 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ದಕ್ಷಿಣ ಆಫ್ರಿಕಾದ ಸೆಮಿಫೈನಲ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ.

Exit mobile version