Site icon Vistara News

Spain Masters: ಸ್ಪೇನ್‌ ಮಾಸ್ಟರ್ ಬ್ಯಾಡ್ಮಿಂಟನ್‌; ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಸಿಂಧು, ಶ್ರೀಕಾಂತ್‌

Spain Masters: Spain Masters Badminton; Sindhu, Srikanth reached the quarter finals

Spain Masters: Spain Masters Badminton; Sindhu, Srikanth reached the quarter finals

ಮ್ಯಾಡ್ರಿಡ್‌: ಇಲ್ಲಿ ನಡೆಯತ್ತಿರುವ ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳಾದ ಪಿ.ವಿ.ಸಿಂಧು(PV Sindhu) ಮತ್ತು ಕಿದಂಬಿ ಶ್ರೀಕಾಂತ್‌(S. Kidambi) ಅವರು ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ್ದಾರೆ. ಕಳೆದ ಕೆಲ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಸಿಂಧು ಈ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಮತ್ತೆ ಲಯಯಕ್ಕೆ ಮರಳಿದಂತೆ ತೋರುತ್ತಿದೆ. ಜತೆಗೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದನ್ನು ಮೂಡಿಸಿದ್ದಾರೆ.

ಅವಳಿ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಇಂಡೋನೇಷ್ಯಾದ ಪುತ್ರಿ ಕುಸುಮಾ ವರ್ದನಿ ಅವರನ್ನು 21-16, 21-14 ನೇರ ಗೇಮ್‌ಗಳಿಂದ ಮಣಿಸಿದರು. ಉಭಯ ಆಟಗಾರ್ತಿಯರ ಈ ಹೋರಾಟ ಕೇವಲ 30 ನಿಮಿಷಕ್ಕೆ ಅಂತ್ಯ ಕಂಡಿತು. ಸಿಂಧು 2023ರಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದರು.

ಪುರುಷರ ಸಿಂಗಲ್ಸ್​ ವಿಭಾಗದಲ್ಲಿ 21ನೇ ಶ್ರೇಯಾಂಕದ ಕಿದಂಬಿ ಶ್ರೀಕಾಂತ್‌ ತನ್ನದೇ ದೇಶದ ಬಿ.ಸಾಯಿ ಪ್ರಣೀತ್‌ ಅವರನ್ನು 21-15, 21-12 ನೇರ ಗೇಮ್‌ಗಳಿಂದ ಸೋಲಿಗೆ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದರು. ಮುಂದಿನ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಜಪಾನಿನ ಕೆಂಟ ನಿಶಿಮೊಟೊ ಅವರ ಸವಾಲು ಎದುರಿಸಬೇಕಿದೆ. ಈ ಹರ್ಡಲ್ಸ್​ ದಾಟುವಲ್ಲಿ ಶ್ರೀಕಾಂತ್‌ ಯಶಸ್ವಿಯಾದರೆ ಟೂರ್ನಿಯಲ್ಲಿ ಚಾಂಪಿಯನ್​ ಅಲಂಕರಿಸಿಸುವುದು ಖಚಿತ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ Swiss Open: ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ

ಕಿರಣ್‌ ಜಾರ್ಜ್‌ ಮತ್ತು ಪ್ರಿಯಾಂಶು ರಾಜವತ್‌ ಅವರು ಸಿಂಗಲ್ಸ್‌ನಲ್ಲಿ ಸೋತು ಹೊರಬಿದ್ದರು. ಜಾರ್ಜ್‌ ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೊಹಾನ್ಸೆನ್‌ ವಿರುದ್ಧ 17-21, 12-21 ಗೇಮ್‌ಗಳಿಂದ ಸೋತರೆ ಪ್ರಿಯಾಂಶು ಫ್ರಾನ್ಸ್‌ನ ಎಂಟನೇ ಶ್ರೇಯಾಂಕದ ತೋಮ ಜೂನಿಯರ್‌ ಪೊಪೋವ್‌ ಎದರು 14-21, 15-21 ಗೇಮ್‌ಗಳಿಂದ ಪರಾಭವಗೊಂಡರು. ಸದ್ಯ ಈ ಕೂಟದಲ್ಲಿ ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಮಾತ್ರ ಭಾರತದ ಪದಕ ಭರವಸೆಯಾಗಿದ್ದಾರೆ.

Exit mobile version