Site icon Vistara News

Luis Rubiales: ಮೈದಾನದಲ್ಲೇ ಆಟಗಾರ್ತಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಅಧ್ಯಕ್ಷನ ವಿರುದ್ಧ ಶಿಸ್ತುಕ್ರಮ

Spanish FA chief Luis Rubiales to resign

ಮ್ಯಾಡ್ರಿಡ್: ಕಳೆದ ಭಾನುವಾರ ಸಿಡ್ನಿ ಅಂಗಳದಲ್ಲಿ ನಡೆದ ಅತ್ಯಂತ ಜಿದ್ದಾಜಿದ್ದಿನ ಮಹಿಳಾ ವಿಶ್ವಕಪ್ ಫುಟ್ಬಾಲ್​ ಫೈನಲ್ ಪಂದ್ಯದಲ್ಲಿ ಸ್ಪೇನ್(Spain beat England)​ ತಂಡ ಇಂಗ್ಲೆಂಡ್​ ತಂಡವನ್ನು 1-0 ಅಂತರದಿಂದ ಮಣಿಸಿ ಚೊಚ್ಚಲ ಬಾರಿ ವಿಶ್ವ ಕಿರೀಟ ಗೆದ್ದಿತ್ತು. ಪಂದ್ಯ ಗೆದ್ದ ಖಷಿಯಲ್ಲಿ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೆಲೆಸ್(Luis Rubiales) ಅಶಿಸ್ತು ತೋರಿದಲ್ಲದೆ. ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಸ್ಪೇನ್ ಆಟಗಾರ್ತಿ ಜೆನ್ನಿ ಹೆರ್ಮೊಸೋ(Jenni Hermoso) ಅವರ ತುಟಿಗೆ ಎಲ್ಲರ ಎದುರಲ್ಲೇ ಚುಂಬಿಸಿದ್ದರು.(kiss controversy) ಲೂಯಿಸ್ ರುಬೆಲೆಸ್ ಅವರ ಈ ವರ್ತನೆಗೆ ಎಲ್ಲಡೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಮುತ್ತಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿ ಲೂಯಿಸ್ ರುಬೆಲೆಸ್ ವಿರುದ್ಧ ಫಿಫಾ(FIFA) ಶಿಸ್ತುಕ್ರಮ ಕೈಗೊಂಡಿದೆ.

“ಅಶಿಸ್ತಿನ ವರ್ತನೆ ತೋರಿದ ಸ್ಪೇನ್ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಲೂಯಿಸ್ ರುಬೆಲೆಸ್ ವಿರುದ್ಧ, ಫಿಫಾ ಶಿಸ್ತು ಸಮಿತಿಯು ತನಿಖೆ ನಡೆಸಿ ತಕ್ಕ ಶಿಕ್ಷೆ ನೀಡಲಿದೆ” ಎಂದು ಫಿಫಾ ತನ್ನ ಅಧಿಕೃತ ಪ್ರಕಟಣೆ ತಿಳಿಸಿದೆ. ಲೂಯಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯೂನಿಯನ್ ಫುಟ್‍ಪ್ರೊ ಮತ್ತು ಸ್ಪೇನ್ ತಾರೆ ಹೆರ್ಮೊಸೊ ಜಂಟಿ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಹೆರ್ಮೆಸೊ ಪರವಾಗಿ ನಿಲ್ಲುವುದಾಗಿ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಹೇಳಿದೆ.

ಕ್ಷಮೆಯಾಚಿಸಿದ್ಧ ಲೂಯಿಸ್‌

ಸ್ಪೇನ್‌ನ ಜೆನ್ನಿಫರ್‌ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಚುಂಬಿಸಿದ್ದಕ್ಕೆ ಸ್ಪೇನ್‌ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಗೆಲುವಿನ ಸಂತಸದಲ್ಲಿ ಈ ಘಟನೆ ನಡೆದು ಹೋಯಿತು. ನನ್ನ ತಪ್ಪಿಗೆ ನಾನು ಕ್ಷೆಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಇದಾದ ಬಳಿಕ ಅವರು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದರು.

ಇದನ್ನೂ ಓದಿ FIFA Women’s World Cup: ಚೊಚ್ಚಲ ಫಿಫಾ ವಿಶ್ವಕಪ್​ ಗೆದ್ದ ಸ್ಪೇನ್​ ಮಹಿಳಾ ತಂಡ

ವಿಶ್ವ ಕಪ್​ ಗೆದ್ದ 5ನೇ ತಂಡ

ವಿಶ್ವಕಪ್​ ಫೈನಲ್​ ಪಂದ್ಯ ಇಂಗ್ಲೆಂಡ್​ ಮತ್ತು ಸ್ಪೇನ್​ಗೆ ಮೊದಲ ಫೈನಲ್​ ಪಂದ್ಯವಾಗಿತ್ತು. ಫೈನಲ್‌ ಪಂದ್ಯಕ್ಕೆ 75 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಹಾಜರಿದ್ದರು. ಜಿದ್ದಾಜಿದ್ದಿನಿಂದ ನಡೆದ ಈ ಪಂದ್ಯದಲ್ಲಿ ಸ್ಪೇನ್​ 1-0 ಗೋಲ್​ ಬಾರಿಸಿ ಗೆಲುವು ಸಾಧಿಸಿತು. ಪಂದ್ಯ ಆರಂಭಗೊಂಡ 29ನೇ ನಿಮಿಷದಲ್ಲೇ ಓಲ್ಗಾ ಕಾರ್ಮೋನಾ(Olga Carmona) ಆಕರ್ಷಕ ಗೋಲು ಸಿಡಿಸಿದ್ದರು. ಕಪ್​ ಗೆಲ್ಲುವ ಮೂಲಕ ಸ್ಪೇನ್‌ ತಂಡ ಫಿಫಾ ವಿಶ್ವಕಪ್‌ ಟ್ರೋಫಿ ಜಯಿಸಿದ 5ನೇ ತಂಡ ಎನಿಸಿಕೊಂಡಿತ್ತು. ಅಮೆರಿಕ ಸರ್ವಾಧಿಕ ನಾಲ್ಕು ಬಾರಿ ಟ್ರೋಫಿ ಜಯಿಸಿದ್ದರೆ, ಜರ್ಮನಿ 2 ಬಾರಿ ಹಾಗೂ ಜಪಾನ್‌ ಮತ್ತು ನಾರ್ವೆ ತಂಡಗಳು ತಲಾ ಒಂದೊಂದು ಬಾರಿ ಟ್ರೋಫಿ ಗೆದ್ದಿದೆ.

Exit mobile version