ಕ್ರಿಕೆಟ್‌ಗೆ ಪ್ರವೇಶಿಸಿದ ಆರಂಭಿಕ ದಿನಗಳಲ್ಲಿ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲರ್ ಆಗಿದ್ದರು ಅಶ್ವಿನ್. ಬಳಿಕ ಸ್ಪಿನ್ನರ್ ಆಗಿ ಯಶಸ್ಸು. ಆರ್. ಅಶ್ವಿನ್ ಇದುವರೆಗೆ 111 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 150 ವಿಕೆಟ್ ಕಬಳಿಸಿದ್ದಾರೆ.
2006ರಲ್ಲಿ ಹರಿಯಾಣ ವಿರುದ್ಧ ದೇಶಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್. ಆ ಪಂದ್ಯದಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪಿನ್ನರ್.
2010ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯವು ಜಿಂಬಾಬ್ವೆ ವಿರುದ್ಧವಾಗಿತ್ತು. ಆ ಹಣಾಹಣಿಯಲ್ಲಿ ಅವರು 2 ವಿಕೆಟ್ ಉರುಳಿಸಿ 38 ರನ್ ಗಳಿಸಿದ್ದರು.
ರವಿಚಂದ್ರನ್ ಅಶ್ವಿನ್ 2011ರ ವಿಶ್ವ ಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.
ಅಶ್ವಿನ್ 2011ರಲ್ಲಿ ತಮ್ಮ ಬಾಲ್ಯದ ಸ್ನೇಹಿತೆ ಪ್ರೀತಿ ನಾರಾಯಣ್ ಅವರೊಂದಿಗೆ ವಿವಾಹವಾಗಿದ್ದಾರೆ. ದಂಪತಿಗೆ ಅಖಿರಾ ಮತ್ತು ಆಧ್ಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಭಾರತ ಸರ್ಕಾರವು ಅಶ್ವಿನ್ ಅವರ ಕ್ರಿಕೆಟ್ ಸಾಧನೆಗಾಗಿ 2014ರಲ್ಲಿ “ಅರ್ಜುನ ಪ್ರಶಸ್ತಿ”ಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ| ಜನುಮದಿನದ ಸಂಭ್ರಮದಲ್ಲಿ ಚೆಲುವಿನ ಚಿತ್ತಾರ ಹುಡುಗಿ