Site icon Vistara News

Team India | ಮಾಜಿ ಕೋಚ್ ರವಿ ಶಾಸ್ತ್ರಿಗೆ ಪ್ರತ್ಯುತ್ತರ ಕೊಟ್ಟ ಸ್ಪಿನ್ನರ್‌ ಆರ್ ಅಶ್ವಿನ್‌

ಮುಂಬಯಿ : ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿ ಕೂಡ ಮನುಷ್ಯರು. ಒತ್ತಡದಲ್ಲಿ ಕೆಲಸ ಮಾಡುವ ಅವರಿಗೂ ವಿಶ್ರಾಂತಿಯ ಅಗತ್ಯವಿರುತ್ತದೆ ಎಂದು ಟೀಮ್‌ ಇಂಡಿಯಾ ಮಾಜಿ ಕೋಚ್‌ ರವಿ ಶಾಸ್ತ್ರಿ ಅವರಿಗೆ ಹಿರಿಯ ಸ್ಪಿನ್ನರ್‌ ಆರ್‌. ಅಶ್ವಿನ್ ಟಾಂಗ್‌ ಕೊಟ್ಟಿದ್ದಾರೆ. ಕೋಚ್‌ ರಾಹುಲ್‌ ದ್ರಾವಿಡ್‌ ಅವರು ನ್ಯೂಜಿಲೆಂಡ್‌ ಸರಣಿಯಿಂದ ಬ್ರೇಕ್‌ ತೆಗೆದುಕೊಂಡಿರುವುದು ಯಾಕೆ ಎಂದು ಶುಕ್ರವಾರ ರವಿ ಶಾಸ್ತ್ರಿ ಪ್ರಶ್ನಿಸಿದ್ದರು.

ವಿಶ್ವ ಕಪ್‌ನ ಸೆಮಿ ಫೈನಲ್‌ನಲ್ಲಿ ಸೋತ ಭಾರತ ತಂಡದ ನೇರವಾಗಿ ನ್ಯೂಜಿಲೆಂಡ್‌ಗೆ ಪ್ರವಾಸ ಬೆಳೆಸಿದೆ. ಅಲ್ಲಿ ಟಿ೨೦ ಹಾಗೂ ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಯೋಜನೆಯಾಗಿದೆ. ಆದರೆ, ಈ ತಂಡದ ಜತೆಗೆ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಇತರ ಸಹಾಯಕ ಕೋಚ್‌ಗಳು ತೆರಳಿರಲಿಲ್ಲ. ಬದಲಿಗೆ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಹಾಗೂ ಇತರ ಸಿಬ್ಬಂದಿಯನ್ನು ಬಿಸಿಸಿಐ ಕಳುಹಿಸಿತ್ತು. ಇದನ್ನು ರವಿ ಶಾಸ್ತ್ರಿ ಪ್ರಶ್ನಿಸಿದ್ದರು.

ದ್ರಾವಿಡ್‌ ಅವರಿಗೆ ವಿಶ್ರಾಂತಿ ಯಾಕೆ ಬೇಕು ಎಂಬುದನ್ನು ನಾನು ವಿವರಿಸುತ್ತೇನೆ. ವಿಶ್ವ ಕಪ್‌ಗಾಗಿ ಕೋಚಿಂಗ್‌ ಸಿಬ್ಬಂದಿ ಸಾಕಷ್ಟು ಶ್ರಮ ವಹಿಸಿದೆ. ಬೇರೆ ಬೇರೆ ಎದುರಾಳಿಗಳ ವಿರುದ್ಧ ನಾನಾ ಯೋಜನೆಗಳನ್ನು ರೂಪಿಸಿಕೊಂಡಿತ್ತು. ಹೀಗಾಗಿ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದಾರೆ. ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ಅಶ್ವಿನ್‌ ಯೂಟ್ಯೂಚ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

“ವಿವಿಎಸ್‌ ಲಕ್ಷ್ಮಣ್‌ ಹಾಗೂ ಅವರ ತಂಡ ಹೊಸ ಯೋಜನೆಯೊಂದಿಗೆ ನ್ಯೂಜಿಲೆಂಡ್‌ಗೆ ತೆರಳಿದೆ. ಇದರಿಂದ ತಂಡಕ್ಕೆ ಲಾಭವಾಗಲಿದೆ,” ಎಂಬುದಾಗಿ ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ಸರಣಿ ಮುಗಿದ ತಕ್ಷಣವೇ ಬಾಂಗ್ಲಾದೇಶ ಸರಣಿ ಆರಂಭಗೊಳ್ಳಲಿದೆ. ಹೀಗಾಗಿ ಕೋಚಿಂಗ್ ಸಿಬ್ಬಂದಿಗೂ ವಿಶ್ರಾಂತಿಯ ಅಗತ್ಯವಿದೆ,” ಎಂದು ಅಶ್ವಿನ್‌ ಹೇಳಿದ್ದಾರೆ.

ಶುಕ್ರವಾರ ರವಿ ಶಾಸ್ತ್ರಿ ಮಾತನಾಡಿ, ಕೋಚಿಂಗ್‌ ಸಿಬ್ಬಂದಿಗೂ ವಿಶ್ರಾಂತಿ ಅಗತ್ಯವಿದೆ ಎಂಬುದನ್ನು ನಾನು ನಂಬುವುದಿಲ್ಲ. ಐಪಿಎಲ್‌ ಟೈಮ್‌ನಲ್ಲಿ ಮೂರು ತಿಂಗಳು ವಿಶ್ರಾಂತಿ ದೊರೆಯುವ ಕಾರಣ ಬೇರೆ ಟೈಮ್‌ನಲ್ಲಿ ರೆಸ್ಟ್‌ ಅಗತ್ಯವಿಲ್ಲ ಎಂಬುದಾಗಿ ಅವರು

ಇದನ್ನೂ ಓದಿ | Team India | ಆರ್‌ ಅಶ್ವಿನ್‌ ಬೌಲಿಂಗ್‌ ಪ್ರದರ್ಶನದ ಬಗ್ಗೆ ಮಾರ್ಮಿಕ ಹೇಳಿಕೆ ನೀಡಿದ ಲೆಜೆಂಡ್‌ ಕಪಿಲ್‌ ದೇವ್‌

Exit mobile version