ನವ ದೆಹಲಿ: ಭಾರತ ತಂಡದ ಆಫ್ಸ್ಪಿನ್ನರ್ ರವೀಂದ್ರ ಜಡೇಜಾ ಸ್ಟೈಲಿಸ್ಟ್ ಆಟಗಾರ. ಹೀಗಾಗಿ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರನ್ನ ಅಭಿಮಾನದಿಂದ ಸರ್ ಎಂಬುದಾಗಿಯೂ ಕರೆಯುತ್ತಾರೆ. ಆದರೆ, ಜಡೇಜಾ ಅವರಿಗೆ ತಮ್ಮನ್ನು ಸರ್ ಎಂದು ಕರೆಯುವುದು ಇಷ್ಟವಿಲ್ಲ. ನನ್ನ ಹೆಸರಿನಿಂದಲೇ ಕರೆಯುವುದು ಇಷ್ಟ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇಂಡಿಯನ್ಸ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಅವರು ಅಡ್ಡ ಹೆಸರಿನಿಂದ ಕರೆಯುವುದನ್ನು ನಾನು ವಿರೋಧಿಸುತ್ತೇನೆ ಎಂಬುದಾಗಿ ಅವರು ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಬಳಿಕ ಅವರು ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಂದರ್ಶನ ನೀಡಿದ್ದು, ಅದರಲ್ಲಿ ಅವರು ತಮ್ಮ ಇಷ್ಟಗಳನ್ನು ಹೇಳಿಕೊಂಡಿದ್ದಾರೆ.
ನಾನು ರವೀಂದ್ರ ಜಡೇಜಾ ಎಂದು ಗುರುತಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ. ಅದನ್ನು ಹೊರತುಪಡಿಸಿ ಬೇರೆ ಹೆಸರಿನಿಂದ ಕರೆಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಹೀಗಾಗಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಯಾರಾದರೂ ನನ್ನನ್ನು ಸರ್ ಎಂದು ಕರೆದರೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Ravindra Jadeja : ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ, ಆರ್ ಅಶ್ವಿನ್
ಅಂದ ಹಾಗೆ ರವೀಂದ್ರ ಜಡೇಜಾ ಅವರಿಗೆ ಸರ್ ಎಂದು ಹೆಸರು ಇಟ್ಟಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಜಡೇಜಾ ಅವರು ತಂಡಕ್ಕೆ ಸೇರಿಕೊಂಡಾಗ ಧೋನಿ ಅವರನ್ನು ಸರ್ ಎಂದು ಕರೆಯುತ್ತಿದ್ದರು. ಅದೇ ಹೆಸರನ್ನು ಜಡೇಜಾ ಅವರಿಗೆ ವಾಪಸ್ ಇಟ್ಟಿದ್ದರು ಧೋನಿ.