ಮುಂಬಯಿ: ಟೀಮ್ ಇಂಡಿಯಾದ ಬೌಲರ್ ಯಜ್ವೇಂದ್ರ ಚಹಲ್ (Yuzvendra Chahal) ಅವರು ಭಾರತ ಕ್ರಿಕೆಟ್ ತಂಡದ ಪರ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್ಗಳನ್ನು ಉರುಳಿಸಿದರೆ ಟಿ20 ಮಾದರಿಯಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
32 ವರ್ಷದ ಬಲಗೈ ಸ್ಪಿನ್ನರ್ ಯಜ್ವೇಂದ್ರ ಚಹಲ್ ಅವರು 71 ಪಂದ್ಯಗಳಲ್ಲಿ 87 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇನ್ನೂ ನಾಲ್ಕು ವಿಕೆಟ್ಗಳನ್ನು ಉರುಳಿಸಿದರೆ ಅವರ ವಿಕೆಟ್ಗಳ ಸಂಖ್ಯೆ 91ಕ್ಕೆ ಏರಿಕೆಯಾಗಲಿದೆ. ಭಾರತ ತಂಡದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರು ಪ್ರಸ್ತುತ 90 ವಿಕೆಟ್ಗಳ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಚಹಲ್ ನಾಲ್ಕು ವಿಕೆಟ್ ಪಡೆದರೆ ಗರಿಷ್ಠ ವಿಕೆಟ್ಗಳ ಸಾಧನೆ ಅವರ ಹೆಸರಲ್ಲಿ ದಾಖಲಾಗಲಿದೆ.
ಒಂದು ವೇಳೆ ಅವರು ಐದು ವಿಕೆಟ್ ಕಬಳಿಸಿದರೆ ಮತ್ತೊಂದು ಎಲೈಗ್ ಗುಂಪಿಗೆ ಸೇರ್ಪಡೆಯಾಗಲಿದ್ದಾರೆ. ತವರಿನಲ್ಲಿ ಆಡಿದ 35 ಪಂದ್ಯಗಳಲ್ಲಿ ಅವರು 45 ವಿಕೆಟ್ ಉರುಳಿಸಿದ್ದು, ಐದು ವಿಕೆಟ್ ಪಡೆದರೆ ತವರಿನ ವಿಕೆಟ್ಗಳ ಅರ್ಧ ಶತಕ ಪೂರೈಸಲಿದ್ದಾರೆ.
ಇದನ್ನೂ ಓದಿ | IND VS SA | ಮೈದಾನದಲ್ಲೇ ಅಂಪೈರ್ಗೆ ಗುದ್ದಿದ ಸ್ಪಿನ್ನರ್ ಯಜ್ವೇಂದ್ರ ಚಹಲ್; ಏನಾಯಿತು ಅವರಿಗೆ?