ನವದೆಹಲಿ: 2022ರ ಸಾಲಿನ ದೇಶದ ಅತ್ಯುನ್ನತ ಕ್ರೀಡಾ(Sports Awards) ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು ಟೇಬಲ್ ಟೆನಿಸ್ ಆಟಗಾರ ಅಚಿಂತ್ಯ ಶರತ್ ಕಮಲ್ ಅವರು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ 25 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಜತೆಗೆ ಇತರ ವಿಭಾಗದಲ್ಲಿ ಆಯ್ಕೆಯಾದ ಎಲ್ಲ ಕ್ರೀಡಾ ಸಾಧಕರು ನವೆಂಬರ್ 30ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿವೆ.
ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
ಅಚಿಂತ್ಯ ಶರತ್ ಕಮಾಲ್ | ಟೆಬಲ್ ಟೆನಿಸ್ |
ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ
ಸೀಮಾ ಪುನಿಯಾ | ಅಥ್ಲೆಟಿಕ್ಸ್ |
ಎಲ್ದೋಸ್ ಪಾಲ್ | ಅಥ್ಲೆಟಿಕ್ಸ್ |
ಅವಿನಾಶ್ ಮುಕುಂದ್ ಸಬ್ಲೆ | ಅಥ್ಲೆಟಿಕ್ಸ್ |
ಲಕ್ಷ್ಯ ಸೇನ್ | ಬ್ಯಾಡ್ಮಿಂಟನ್ |
ಎಚ್.ಎಸ್ ಪ್ರಣಯ್ | ಬ್ಯಾಡ್ಮಿಂಟನ್ |
ಅಮಿತ್ ಪಂಗಾಲ್ | ಬಾಕ್ಸಿಂಗ್ |
ನಿಖತ್ ಜರೀನ್ | ಬಾಕ್ಸಿಂಗ್ |
ಪ್ರದೀಪ್ ಕುಲಕರ್ಣಿ | ಚೆಸ್ |
ಆರ್. ಪ್ರಜ್ಞಾನಂದ | ಚೆಸ್ |
ದೀಪ್ ಗ್ರೇಸ್ ಎಕ್ಕಾ | ಹಾಕಿ |
ಸುಶೀಲಾ ದೇವಿ | ಜೂಡೋ |
ಸಾಕ್ಷಿ ಕುಮಾರಿ | ಕಬಡ್ಡಿ |
ನಯನ್ ಮೋನಿ ಸೈಕಿಯಾ | ಲಾನ್ ಬೌಲ್ಸ್ |
ಸಾಗರ್ ಕೈಲಾಸ್ ಓವಲ್ಕರ್ | ಮಲ್ಲಕಂಬ |
ಎಲವೆನಿಲ್ ವಲರಿವನ್ | ಶೂಟಿಂಗ್ |
ಓಂಪ್ರಕಾಶ್ ಮಿಥರ್ವಾಲ್ | ಶೂಟಿಂಗ್ |
ಶ್ರೀಜಾ ಅಕುಲ್ | ಟೇಬಲ್ ಟೆನಿಸ್ |
ವಿಕಾಸ್ ಠಾಕೂರ್ | ವೇಟ್ಲಿಫ್ಟಿಂಗ್ |
ಅಂಶು | ಕುಸ್ತಿ |
ಸರಿತಾ | ಕುಸ್ತಿ |
ಪರ್ವೀನ್ | ವುಶು |
ಮಾನಸಿ ಜೋಶಿ | ಪ್ಯಾರಾ ಬ್ಯಾಡ್ಮಿಂಟನ್ |
ತರುಣ್ ಧಿಲ್ಲೋನ್ | ಪ್ಯಾರಾ ಬ್ಯಾಡ್ಮಿಂಟನ್ |
ಸ್ವಪ್ನಿಲ್ ಸಂಜಯ್ ಪಾಟೀಲ್ | ಪ್ಯಾರಾ ಸ್ವಿಮ್ಮಿಂಗ್ |
ಜೆರ್ಲಿನ್ ಅನಿಕಾ ಜೆ | ಡೆಫ್ ಬ್ಯಾಡ್ಮಿಂಟನ್ |
ದ್ರೋಣಾಚಾರ್ಯ ಪ್ರಶಸ್ತಿಯ ಪಟ್ಟಿ
ಜೀವನ್ಜೋತ್ ಸಿಂಗ್ ತೇಜಾ | ಆರ್ಚರಿ |
ಮೊಹಮ್ಮದ್ ಅಲಿ ಕಮರ್ | ಬಾಕ್ಸಿಂಗ್ |
ಸುಮಾ ಸಿದ್ಧಾರ್ಥ್ ಶಿರೂರ್ | ಪ್ಯಾರಾ ಶೂಟಿಂಗ್ |
ಸುಜೀತ್ ಮಾನ್ | ಕುಸ್ತಿ |
ಜೀವಮಾನ ಪ್ರಶಸ್ತಿ ಪಟ್ಟಿ
ದಿನೇಶ್ ಜವಾಹರ್ ಲಾಡ್ | ಕ್ರಿಕೆಟ್ |
ಬಿಮಲ್ ಪ್ರಫುಲ್ಲ ಘೋಷ್ | ಫುಟ್ಬಾಲ್ |
ರಾಜ್ ಸಿಂಗ್ | ಕುಸ್ತಿ |
ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ 2022
ಅಶ್ವಿನಿ ಅಕ್ಕುಂಜೆ | ಅಥ್ಲೆಟಿಕ್ಸ್ |
ಧರಂವೀರ್ ಸಿಂಗ್ | ಹಾಕಿ |
ಬಿ ಸಿ ಸುರೇಶ್ | ಕಬಡ್ಡಿ |
ನಿರ್ ಬಹದ್ದೂರ್ ಗುರುಂಗ್ | ಪ್ಯಾರಾ ಅಥ್ಲೆಟಿಕ್ಸ್ |
ಇದನ್ನೂ ಓದಿ | Dhayn Chand Khel Ratna | ಟಿಟಿ ಪಟು ಶರತ್ ಕಮಾಲ್‌ಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ