ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧ ಲೈಗಿಂಕ ಕಿರುಕುಳದ ಆರೋಪ ಮಾಡಿ, ಅವರನ್ನು ಬಂಧಿಸುವಂತೆ ಹೋರಾಟ ನಡೆಸಿ(Wrestlers Protest) ಬಂಧನಕ್ಕೂ ಒಳಗಾಗಿದ್ದ ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯ(Bajrang Punia) ಮತ್ತು ವಿನೇಶ್ ಫೋಗಟ್(Vinesh Phogat) ವಿದೇಶದಲ್ಲಿ ತರಬೇತಿ ನಡೆಸಲು ತೆರಳಲಿದ್ದಾರೆ. ಇದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವೂ ಅನುಮತಿ ನೀಡಿದೆ.
ಬಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್(Vinesh Phogat and Bajrang Punia) ಕ್ರಮವಾಗಿ ಕಿರ್ಗಿಸ್ತಾನ ಹಾಗೂ ಹಂಗೇರಿಯಲ್ಲಿ ಅಭ್ಯಾಸ ನಡೆಸಲಿದೆ. ಏಷ್ಯನ್ ಗೇಮ್ಸ್(Asian Games) ಹಾಗೂ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲು ಉಭಯ ಕುಸ್ತಿಪಟುಗಳು ಜುಲೈ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳಲಿದ್ದಾರೆ. ಸದ್ಯ ಕುಸ್ತಿ ಕೂಟದ ಮೇಲೆ ಹೆಚ್ಚಿನ ಗಮನ ಹರಿಸಿರುವ ಕಾರಣ ಈ ಕುಸ್ತಿಟುಗಳು ಮತ್ತೆ ಬ್ರಿಜ್‌ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುವುದು ಅನುಮಾನವೆನಿಸಿದೆ.
ಸಾಕ್ಷಿ ಮಲಿಕ್(Sakshi Malik) ಅವರು ಭಾರತದಲ್ಲೆ ತರಬೇತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಅವರು ಸಾಯ್ ಕ್ರೀಡಾ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
ಟ್ರಯಲ್ಸ್ ವಿಚಾರದಲ್ಲಿ ಕಿತ್ತಾಡಿದ್ದ ಕುಸ್ತಿಪಟುಗಳು
ಏಷ್ಯನ್ ಗೇಮ್ಸ್(Asian Games) ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರತಿಭಟನೆ(Wrestlers Protest) ನಡೆಸಿದ್ದ 6 ಕುಸ್ತಿಪಟುಗಳಿಗೆ ಟ್ರಯಲ್ಸ್‌ನಿಂದ ರಿಯಾಯಿತಿ ನೀಡಿರುವ ಕ್ರಮಕ್ಕೆ ಹಲವು ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಒಲಿಂಪಿಕ್ ಸಂಸ್ಥೆಯ (ಐಒಎ) ಈ ನಿರ್ಧಾರವನ್ನು ಪಶ್ನೆ ಮಾಡಿದ್ದರು. ಇದರರಿಂದ ಕೆರಳಿದ್ದ ಕುಸ್ತಿಪಟುಗಳು ಇತ್ತೀಚೆಗೆ ಸ್ಪಷ್ಟನೆ ನೀಡುವ ಜತೆಗೆ ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ಯೋಗೇಶ್ವರ್ ದತ್(Yogeshwar Dutt) ಅವರಿಗೆ ತೀಕ್ಷ್ಣ ಮಾತುಗಳಿಂದ ಬೈದಿದ್ದರು.
“ಒಂದೊಮ್ಮೆ ನಾವು ಟ್ರಯಲ್ಸ್‌ನಿಂದ ಯಾವುದೇ ರೀತಿಯ ರಿಯಾಯಿತಿ ಪಡೆದಿದ್ದರೆ ಮತ್ತು ಇದನ್ನು ಸಾಬೀತುಪಡಿಸಿದಲ್ಲಿ ಕುಸ್ತಿಯನ್ನೇ ಬಿಟ್ಟುಬಿಡುತ್ತೆವೆ’ ಬ್ರಿಜ್‌ಭೂಷಣ್ ಅವರಿಗೆ ಶಿಕ್ಷೆಯಾಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ಆರೋಪ ಪಟ್ಟಿ ಸಲ್ಲಿಸುವುದನ್ನೇ ಕಾಯುತ್ತಿದ್ದೇವೆ” ಎಂದು ವಿನೇಶ್ ಫೋಗಟ್ ಹೇಳಿದ್ದರು.
ಇದನ್ನೂ ಓದಿ Asian Games 2023 : ಏಷ್ಯನ್ ಗೇಮ್ಸ್ ತಂಡಕ್ಕೆ ಶಿಖರ್ ಧವನ್ ನಾಯಕ?
ಯೋಗೇಶ್ವರ್ ದತ್(Yogeshwar Dutt) ವಿರುದ್ಧ ವಿನೇಶ್ ಫೋಗಟ್(Vinesh Phogat) ಟ್ವಿಟರ್ನಲ್ಲಿ ದೊಡ್ಡ ಪ್ರಬಂಧವನ್ನೇ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ಯೋಗೇಶ್ವರ್ ಅವರನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಗುಲಾಮ ಎಂದು ಹೇಳಿದ್ದರು. ಜತೆಗೆ ಬಜರಂಗ್ ಪೂನಿಯಾ(Bajrang Punia) ಮತ್ತು ಸಾಕ್ಷಿ ಮಲಿಕ್ ಕೂಡ ವಿನೇಶ್ ಅವರ ಬೆಂಬಲಕ್ಕೆ ನಿಂತಿದ್ದರು.