Site icon Vistara News

ಮುಂಬೈ ತಂಡದಿಂದ ರೋಹಿತ್​ಗೆ ಗೇಟ್​ ಪಾಸ್?; ಪಾಂಡ್ಯಗೆ ಗಾಳ ಹಾಕಿದ ಫ್ರಾಂಚೈಸಿ

rohit sharma and hardik pandya ipl

ಮುಂಬಯಿ: ಎಲ್ಲ ಐಪಿಎಲ್(IPL 2024)​ ಫ್ರಾಂಚೈಸಿಗಳು ಮುಂದಿನ ಆವೃತ್ತಿಗೆ ಸಿದ್ಧತೆ ಆರಂಭಿಸಿದೆ. ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುವ ಆಟಗಾರ ಪಟ್ಟಿಯ ತರಾರಿಯಲ್ಲಿದೆ. ಇದರ ಮಧ್ಯೆ ಮುಂಬಯಿ ಇಂಡಿಯನ್ಸ್(Mumbai Indians)​ ಫ್ರಾಂಚೈಸಿ, 5 ಕಪ್​ ಗಲ್ಲಿಸಿಕೊಟ್ಟ ನಾಯಕ ರೋಹಿತ್​ ಶರ್ಮ(Rohit Sharma) ಅವರನ್ನು ತಂಡದಿಂದ ಕೈ ಬಿಡಲು ಯೋಚಿಸಿದೆ ಎಂದು ತಿಳಿದುಬಂದಿದೆ.

ರೋಹಿತ್​ ಶರ್ಮ ಅವರನ್ನು ಮುಂಬೈ ತಂಡದಿಂದ ಕೈ ಬಿಟ್ಟು ಅವರ ಸ್ಥಾನಕ್ಕೆ ಹಾರ್ದಿಕ್​ ಪಾಂಡ್ಯ(Hardik Pandya) ಅವರನ್ನು ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ಟ್ರೇಡಿಂಗ್​ ನಿಯಮದ ಪ್ರಕಾರ ಈಗಾಗಲೇ ಕೆಲ ಫ್ರಾಂಚೈಸಿಗಳು ಆಟಗಾರರನ್ನು ಅದಲು ಬದಲು ಮಾಡಿಕೊಂಡಿವೆ. ಇದೇ ನಿಯಮದ ಪ್ರಕಾರ ರೋಹಿತ್​ ಅವರನ್ನು ಗುಜರಾತ್​ ಟೈಟಾನ್ಸ್​(Gujarat Titans)ಗೆ ಬಿಟ್ಟುಕೊಟ್ಟು ಆ ತಂಡದಿಂದ ಹಾರ್ದಿಕ್​ ಪಾಂಡ್ಯವನ್ನು ಖರೀದಿ ಮಾಡುವುದು ಮುಂಬೈ ಯೋಜನೆಯಾಗಿದೆ ಎಂದು ವರದಿಯಾಗಿದೆ.

ಮಾತುಕತೆ ನಡೆದಿದೆ

ಮೂಲಗಳ ಪ್ರಕಾರ ಈಗಾಗಲೇ ಮುಂಬೈ ಮತ್ತು ಗುಜರಾತ್​ ಫ್ರಾಂಚೈಸಿಗಳು ಈ ಬಗ್ಗೆ ಮಾತುಕತೆ ನಡುಸಿವೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಆದರೆ ಫ್ರಾಂಚೈಸಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೆ ರೋಹಿತ್​ ಮತ್ತು ಪಾಂಡ್ಯ ಕೂಡ ಈ ವಿಚಾರದ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ IPL 2024: ಲಕ್ನೋ ತಂಡ ಸೇರಿದ ಪಡಿಕ್ಕಲ್; ಬೌಲಿಂಗ್​ ಆವೇಶ ತೋರದ ಅವೇಶ್​ಗೆ ಕೊಕ್!​

ಮುಂಬೈ ಇಂಡಿಯನ್ಸ್​ ಪರವೇ ಐಪಿಎಲ್​ ಪದಾರ್ಪಣೆ ಮಾಡಿದ ಹಾರ್ದಿಕ್​ ಪಾಂಡ್ಯ ಅವರು ತಂಡ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ 2021ರಲ್ಲಿ ತಂಡದಿಂದ ಹೊರಬಂದು ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ಸೇರಿದ್ದರು. ಅಲ್ಲದೆ ತಂಡದ ನಾಯಕತ್ವವನ್ನು ವಹಿಸಿಕೊಂಡರು. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು.

ರೋಹಿತ್​ ಅವರಿಗೆಎ ಈಗಾಗಲೇ 36 ವರ್ಷ ವಯಸ್ಸಾಗಿದೆ. ಇನ್ನು ಕನಿಷ್ಠ 2 ವರ್ಷಗಳ ಕಾಲ ಅವರು ಬ್ಯಾಟಿಂಗ್​ ಫಾರ್ಮ್​ ಮುಂದುವರಿಸಬಹುದು ಹೀಗಾಗಿ ಭವಿಷ್ಯದಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುವ ನಾಯಕನ ಹುಡುಕಾಟದಲ್ಲಿರುವ ಮುಂಬೈ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯ ಅವರನ್ನು ಮತ್ತೆ ತಂಡಕ್ಕೆ ಕರೆತರು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿದೆ.

ರೋಹಿತ್​ ಅಥವಾ ಆರ್ಚರ್​

ನ್ಯೂಸ್ 18 ಪ್ರಕಾರ, ಹಾರ್ದಿಕ್ ಪಾಂಡ್ಯಗೆ ಪ್ರತಿಯಾಗಿ ರೋಹಿತ್ ಶರ್ಮಾ ಅಥವಾ ಜೋಫ್ರಾ ಆರ್ಚರ್ ಅವರನ್ನು ಬದಲಾಯಿಸಲು ಗುಜರಾತ್ ಟೈಟನ್ಸ್ ವಿನಂತಿಸಿದೆ. ರೋಹಿತ್ ಮುಂಬೈ ತೊರೆಯುವ ಸಾಧ್ಯತೆ ಬಹುತೇಕ ಅಸಾಧ್ಯವಾಗಿದ್ದರೂ, ಒಪ್ಪಂದವು ಮುಂದುವರಿದರೆ ಆರ್ಚರ್ ಜೋಫ್ರಾ ಗುಜರಾತ್‌ ಟೈಟನ್ಸ್ ತಂಡಕ್ಕೆ ವ್ಯಾಪಾರವಾಗಬಹುದು. ಟ್ರೇಡಿಂಗ್ ವಿಂಡೋ ನವೆಂಬರ್ 26ರಂದು ಕೊನೆಯಾಗಲಿದ್ದು ಇದಕ್ಕೂ ಮುನ್ನ ಈ ವಿಚಾರದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.

ಒಂದು ವೇಳೆ ಹಾರ್ದಿಕ್ ಪಾಂಡ್ಯ ಗುಜರಾತ್​ ತಂಡದಿಂದ ನಿರ್ಗಮಿಸಿ ರೋಹಿತ್​ ಅವರು ಗುಜರಾತ್​ ಸೇರಿದರೆ ರೋಹಿತ್​ ಅವರೇ ನಾಯಕನಾಗಬಹುದು. ಇದು ಸಾಧ್ಯವಾಗದೆ ಜೋಫ್ರಾ ಆರ್ಚರ್​ ಬಂದರೆ ಆಗ ರಶೀದ್ ಖಾನ್ ಅಥವಾ ಕೇನ್ ವಿಲಿಯಮ್ಸನ್ ಇಬ್ಬರಲ್ಲಿ ಒಬ್ಬರು ಗುಜರಾತ್ ತಂಡದ ನಾಯಕತ್ವ ವಹಿಸಿಕೊಳ್ಳಬಹುದು.

Exit mobile version