ಹೈದರಾಬಾದ್: ಬಹುನಿರೀಕ್ಷಿತ ಐಪಿಎಲ್(IPL 2024) ಟೂರ್ನಿಯ ಮೊದಲ ಹಂತದ ಪಂದ್ಯವಾಳಿಗಳು ಮಾರ್ಚ್ 22ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆಟಗಾರರು ಕೂಡ ಈ ಕ್ಯಾಂಪ್ ಸೇರಿ ಕೋಚ್ ನೇತೃತ್ವದಲ್ಲಿ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಸನ್ರೈಸರ್ಸ್(SunRisers Hyderabad) ತಂಡದ ಕೋಚ್ ಆಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್(Dale Steyn) ಅವರು ಈ ಬಾರಿ ಟೂರ್ನಿಯಿಂದ ಹಿಂದೆ ಸರಿಯುವ ಎಲ್ಲ ಲಕ್ಷಣ ಕಂಡುಬಂದಿದೆ.
ಈ ವರ್ಷದ ಐಪಿಎಲ್ ಕರ್ತವ್ಯಗಳಿಂದ ವಿರಾಮ ತೆಗೆದುಕೊಳ್ಳಲು ಡೇಲ್ ಸ್ಟೇನ್ ಹೈದರಾಬಾದ್ ಫ್ರಾಂಚೈಸಿಗೆ ಅನುಮತಿ ಕೋರಿದ್ದು ಮುಂದಿನ ಋತುವಿನಲ್ಲಿ ಹಿಂತಿರುಗಲು ನಿರ್ಧರಿಸಿರುವುದಾಗಿ ಕ್ರಿಕ್ಇನ್ಫೋ ವರದಿ ಮಾಡಿದೆ. ಹೀಗಾಗಿ ಸನ್ರೈಸರ್ಸ್ ತಂಡ ನೂತನ ಬೌಲಿಂಗ್ ಕೋಚ್ ಹುಡುಕುವ ಅನಿವಾರ್ಯತೆಗೆ ಸಿಲುಕಲಿದೆ.
Dale Steyn will not be a part of the SRH coaching team. He seeks a break 💔
— SunRisers OrangeArmy Official (@srhfansofficial) March 2, 2024
.
.
.#SRH #sunrisershyderabad #Orangeramy #dalesteyn #IPL #Hyderabad #sunrisers pic.twitter.com/Mgry1IStTh
ಕಮಿನ್ಸ್ಗೆ ನಾಯಕತ್ವ?
ಡೇವಿಡ್ ವಾರ್ನರ್ ಅವರು ಹೋದ ಮೇಲೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸರಿಯಾದ ನಾಯಕ ಸಿಕ್ಕಿರಲಿಲ್ಲ. ಇದೀಗ ತಂಡಕ್ಕೆ 2 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರು ಈ ತಂಡಕ್ಕೆ ನಾಯಕನಾಗುವುದು ಖಚಿತವಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸಿ ಪಟ್ಟು ಬಿಡದೆ 20.5 ಕೋಟಿಗೆ ಅವರನ್ನು ಖರೀದಿಸಿದ್ದು.
ಕಳೆದ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ತಂಡದ ಆಲ್ ರೌಂಡರ್ ಐಡೆನ್ ಮಾರ್ಕ್ರಾಮ್ ಅವರನ್ನು ಹೊಸ ನಾಯಕನನ್ನಾಗಿ ಫ್ರಾಂಚೈಸಿ ನೇಮಕ ಮಾಡಿತ್ತು. ಆದರೆ ಸೌಥ್ ಆಫ್ರಿಕಾ ಲೀಗ್ನಲ್ಲಿ ಸಿಕ್ಕ ಯಶಸ್ಸು ಅವರಿಗೆ ಐಪಿಎಲ್ನಲ್ಲಿ ಸಿಗಲಿಲ್ಲ. ತಂಡ ಹೀನಾಯ ಪ್ರದರ್ಶನ ತೋರಿತ್ತು. ಇದಕ್ಕೂ ಮುನ್ನ ಅಗರ್ವಾಲ್ ಕೂಡ ತಂಡವನ್ನು ಮುನ್ನಡೆಸಿ ಯಶಸ್ಸು ಕಂಡಿರಲಿಲ್ಲ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಹೈದರಾಬಾದ್ ತಂಡ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೇಡರ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 23ರಂದು ಈಡನ್ ಗಾರ್ಡನ್ನಲ್ಲಿ ನಡೆಯಲಿದೆ.
ಹೈದರಾಬಾದ್ ತಂಡ
ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್ ಮತ್ತು ಜಾತವೇಧ್ ಸುಬ್ರಹ್ಮಣ್ಯನ್.