Site icon Vistara News

IPL 2024 : ಗರಿಷ್ಠ ರನ್​ ಮಾತ್ರವಲ್ಲ, ಒಟ್ಟು ಸಿಕ್ಸರ್​ಗಳಲ್ಲೂ ದಾಖಲೆ ಬರೆದ ಎಸ್​ಆರ್​​ಎಚ್​​

IPL 2024

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಫೀಲ್ಡರ್​ಗಳು ಎಸ್​ಆರ್​​ಎಚ್​​ ವಿರುದ್ಧದ ಐಪಿಎಲ್​ (IPL 2024) ಪಂದ್ಯದಲ್ಲಿ ಕನಿಷ್ಠ 22 ಬಾರಿ ಆಕಾಶದತ್ತ ನೋಡಿದ್ದಾರೆ. ಯಾಕೆ ಗೊತ್ತಾ. ಎಸ್​ಆರ್​​ಎಚ್ ಬ್ಯಾಟರ್​ಗಳು ಈ ಪಂದ್ಯದಲ್ಲಿ 22 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಅಂದ ಹಾಗೆ ಇದು ಐಪಿಎಲ್ ಇತಿಹಾಸದಲ್ಲಿ ದಾಖಲೆ. ಇನಿಂಗ್ಸ್​ವೊಂದರಲ್ಲಿ 21 ಸಿಕ್ಸರ್​ಗಳನ್ನು ಬಾರಿಸಿ ಆರ್​ಸಿಬಿ ಮಾಡಿದ್ದ ದಾಖಲೆಯನ್ನು ಎಸ್​ಆರ್​ಚ್ ಮುರಿದಿದೆ. ಅದೂ ಎಸ್​ಆರ್​ಎಚ್ ತಿರುದ್ದವೇ ಎನ್ನುವುದು ವಿಶೇಷ.

ಸನ್​ರೈಸರ್ಸ್​​ ಹೈದರಾಬಾದ್ ಈ ಪಂದ್ಯದಲ್ಲಿ 287 ರನ್​ಗಳನ್ನು ಬಾರಿಸಿದ್ದು. ಫ್ರ್ಯಾಂಚೈಸ್ ಕ್ರಿಕೆಟ್​ನಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ ಬ್ಯಾಟರ್​ಗಳಿಗೆ ಸ್ವರ್ಗ ಎಂಬುದು ಗೊತ್ತಿರುವ ವಿಚಾರ. ಅದರಲ್ಲೂ ಹೊಡೆಬಡಿಯ ಬ್ಯಾಟರ್​ಗಳು ಇದ್ದರೆ ಅಂದು ಹಬ್ಬ ಗ್ಯಾರಂಟಿ. ಅಂತೆಯೇ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್​​​ಆರ್​ಎಚ್ ಬ್ಯಾಟರ್​ಗಳು ಹಬ್ಬ ಮಾಡಿದ್ದಾರೆ.

ಗರಿಷ್ಠ ಸಿಕ್ಸರ್​ಗಳ ದಾಖಲೆ ವಿವರ ಇಲ್ಲಿದೆ

22 ಸಿಕ್ಸರ್​, ಎಸ್ಆರ್​ಎಚ್​​ ತಂಡ, ಆರ್​​ಸಿಬಿ ವಿರುದ್ಧ, 2024, ಬೆಂಗಳೂರು
21 ಸಿಕ್ಸರ್​, ಆರ್ಸಿಬಿ ತಂಡ, ಪಿಡಬ್ಲ್ಯುಐ ವಿರುದ್ಧ, 2013, ಬೆಂಗಳೂರು
20 ಸಿಕ್ಸರ್​, ಆರ್ಸಿಬಿ ತಂಡ, ಜಿಎಲ್ ವಿರುದ್ಧ, 2016, ಬೆಂಗಳೂರು
20 ಸಿಕ್ಸರ್​, ಡಿಸಿ ತಂಡ, ಜಿಎಲ್ ವಿರುದ್ಧ, 2017, ದೆಹಲಿ
20 ಸಿಕ್ಸರ್​, ಎಂಐ ತಂಡ, ಎಸ್ಆರ್​ಎಚ್​ ವಿರುದ್ಧ, 2024, ಹೈದರಾಬಾದ್

ವೇಗದ ಶತಕದ ಪಟ್ಟಿಗೆ ಸೇರಿದ ಟ್ರಾವಿಸ್​ ಹೆಡ್​​

ಬೆಂಗಳೂರು: ಐಪಿಎಲ್​ 2024ರಲ್ಲಿ ಹಲವಾರು ದಾಖಲೆಗಳು ಮೂಡಿ ಬರುತ್ತಿವೆ. ಅಂತೆಯೇ ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ (Travis Head) ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2024) co ಚ್ಚಲ ಶತಕ ಬಾರಿಸಿದ್ದಾರೆ. ಅದು ಕೂಡ ದಾಖಲೆಯ ವೇಗದ ಶತಕವಾಗಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹೆಡ್ 39 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇನ್ನಿಂಗ್ಸ್ ನ ಆರಂಭದಿಂದಲೂ ಅಬ್ಬರಿಸಿದ ಅವರು ಆರ್​ಸಿಬಿ ಬೌಲರ್​ಗಳ ಬುರುಡೆ ಮೇಲೆ ಬಾರಿಸಿದಂತೆ ಸಿಕ್ಸರ್ ಹಾಗೂ ಬೌಂಡರಿಗಳ ಸುರಿಮಳೆ ಸುರಿಸಿದರು. ಅಭಿಷೇಕ್ ಶರ್ಮಾ ಅವರೊಂದಿಗೆ ಪವರ್ ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಿದ ಹೆಡ್, ಶತಕದ ಜೊತೆಯಾಟ ತಂದರು. ಬಳಿಕ ಹೆಡ್​ ಹೆನ್ರಿಚ್​ ಕ್ಲಾಸೆನ್ ಅವರೊಂದಿಗೆ ಅಬ್ಬರ ಮುಂದುವರಿಸಿದರು.

ಇದನ್ನೂ ಓದಿ: MS Dhoni : ಮುಂಬೈ ವಿರುದ್ಧದ ಗೆಲುವಿನ ಬಳಿಕ ಕೇಕ್ ಕಟ್​​ ಮಾಡಿದ ಎಂ. ಎಸ್. ಧೋನಿ

ಇದು ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್, ಯೂಸುಫ್ ಪಠಾಣ್ ಮತ್ತು ಡೇವಿಡ್ ಮಿಲ್ಲರ್ ಬಳಿಕ ಇದು ನಾಲ್ಕನೇ ವೇಗದ ಶತಕವಾಗಿದೆ. ಹೆಡ್ ಆ ದಿನ 9 ಬೌಂಡರಿಗಳು ಮತ್ತು 8 ಸಿಕ್ಸರ್ ಗಳನ್ನು ಹೊಡೆದರು. ಪಂದ್ಯದ 13 ನೇ ಓವರ್​ನಲ್ಲಿ ಲಾಕಿ ಫರ್ಗುಸನ್ ಹೆಡ್ ಅವರನ್ನು ಔಟ್ ಮಾಡಿದರು. ಆದರೆ ಆ ಹೊತ್ತಿಗೆ ಬ್ಯಾಟ್ಸ್ಮನ್ ಕೇವಲ 41 ಎಸೆತಗಳಲ್ಲಿ 102 ರನ್ ಗಳಿಸಿದ್ದರು.

Exit mobile version