Site icon Vistara News

SRH vs CSK: ಚೆನ್ನೈ ವಿರುದ್ಧ ಗೆಲುವಿನ ‘ಸನ್​ರೈಸ್​’ ನಿರೀಕ್ಷೆಯಲ್ಲಿ ಹೈದರಾಬಾದ್!

SRG vs CSK

ಹೈದರಾಬಾದ್​: ಶುಕ್ರವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಮತ್ತು ಸನ್​ರೈಸರ್ಸ್​ ಹೈದಾರಾಬಾದ್​(Sunrisers Hyderabad) ತಂಡಗಳು ಕಣಕ್ಕಿಳಿಯಲಿವೆ. ಇತ್ತಂಡಗಳ(SRH vs CSK) ಪಂದ್ಯ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂಬೈ ಮತ್ತು ಹೈದರಾಬಾದ್​ ನಡುವಣ ಮುಖಾಮುಖಿಯಲ್ಲಿ ಒಟ್ಟು 523 ರನ್​ ದಾಖಲಾಗಿತ್ತು. ಹೀಗಾಗಿ ಈ ಪಂದ್ಯವನ್ನು ಕೂಡ ಹೈ ಸ್ಕೋರ್​ ಪಂದ್ಯ ಎಂದು ನಿರೀಕ್ಷೆ ಮಾಡಬಹುದು.

ಚೆನ್ನೈ ತಂಡ ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೆ, ಸನ್​ರೈಸರ್ಸ್ 3 ಪಂದ್ಯಗಳಿಂದ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಇದೀಗ ತವರಿನ ಪಂದ್ಯದಲ್ಲಿ ಗೆದ್ದು ಮತ್ತೆ ಗೆಲುವಿನ ಹಳಿ ಏರುವ ವಿಶ್ವಾಸದಲ್ಲಿದೆ. ಚೆನ್ನೈ ತವರಿನಾಚೆ ಆಡಿದ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ, ಈ ಪಂದ್ಯದಲ್ಲಿ ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ.

​ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ಸೋಲು ಕಂಡಿತ್ತು ಎಂದ ಮಾತ್ರಕ್ಕೆ ಈ ಸವಾಲನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಂಡದಲ್ಲಿ ಬಲಿಷ್ಠ ಆಟಗಾರರ ಪಡೆಯೇ ಇದೆ. ಇವರೆಲ್ಲ ಯಾವುದೇ ಹಂತದಲ್ಲಿ ಸಿಡಿದು ನಿಲ್ಲಬಲ್ಲರು. ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದಿರುವ ಬಾಂಗ್ಲಾದೇಶದ ಆಟಗಾರ ಮುಸ್ತಫಿಜುರ್​ ರೆಹಮಾನ್​ ಅವರು ಟಿ20 ವಿಶ್ವಕಪ್​ ಆಡಲು ವೀಸಾ ಸಂಬಂಧಿತ ತುರ್ತು ಕೆಲಸಕ್ಕಾಗಿ ತವರಿಗೆ ಮರಳಿದ್ದಾರೆ. ಹೀಗಾಗಿ ಅವರು ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದು ಚೆನ್ನೈಗೆ ಕೊಂಚ ಮಟ್ಟಿನ ಹಿನ್ನಡೆಯಾಗಿ ಪರಿಣಮಿಸಬಹುದು.

ಇದನ್ನೂ ಓದಿ IPL 2024: ನಿಷೇಧ ಭೀತಿಯಲ್ಲಿ ರಿಷಭ್​ ಪಂತ್​; ನಿಧಾನಗತಿ ಬೌಲಿಂಗ್​ಗೆ 24 ಲಕ್ಷ ರೂ. ದಂಡ

ಹೈದರಾಬಾದ್​ ತಂಡದ ಬೌಲಿಂಗ್​ ಸುಧಾರಣೆ ಕಾಣದೆ ಹೋದರೆ ತಂಡಕ್ಕೆ ಗೆಲುವು ಕಷ್ಟ ಸಾಧ್ಯ. ಕೇವಲ ಬ್ಯಾಟಿಂಗ್​ ನೆಚ್ಚಿಕೊಂಡು ಎಲ್ಲ ಪಂದ್ಯ ಗೆಲ್ಲುವುದು ಕಷ್ಟ. ಹೀಗಾಗಿ ಅನುಭವಿ ಭುವನೇಶ್ವರ್​ ಕುಮಾರ್​, ನಾಯಕ ಪ್ಯಾಟ್​ ಕಮಿನ್ಸ್, ಉನಾದ್ಕತ್​​ ಮತ್ತು ಟಿ.ನಟರಾಜನ್​ ಅವರು ತಮ್ಮ ಎಸೆತಗಳಿಗೆ ರನ್​ ಕಡಿವಾಣ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ದಕ್ಷಿಣ ಆಫ್ರಿಕಾದ ಸ್ಟಾರ್​ ವೇಗಿ ಮಾರ್ಕೊ ಜಾನ್ಸೆನ್​ ಅವರನ್ನು ಮೊದಲ ಪಂದ್ಯ ಆಡಿಸಿ ಆ ಬಳಿಕ 2 ಪಂದ್ಯಗಳಿಂದ ಹಿರಗಿಡಲಾಗಿತ್ತು. ಈ ಪಂದ್ಯದಲ್ಲಿ ಮತ್ತೆ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ 19 ಪಂದ್ಯಗಳನ್ನು ಆಡಿವೆ. ಇದರಲ್ಲಿ ಚೆನ್ನೈ ಗರಿಷ್ಠ 14 ಪಂದ್ಯ ಗೆದ್ದರೆ, ಹೈದರಾಬಾದ್​ ಕೇವಲ 5 ಪಂದ್ಯ ಮಾತ್ರ ಗೆದ್ದಿದೆ. ಕಳೆದ ಆವೃತ್ತಿಯಲ್ಲಿಯೂ ಚೆನ್ನೈ ತಂಡವೇ ಗೆದ್ದು ಬೀಗಿತ್ತು. ಬಲಾಬಲದ ಲೆಕ್ಕಾಚಾರ ನೋಡುವಾಗ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್​ ಆಗಿ ಗೋಚರಿಸಿದೆ.

ಇದನ್ನೂ ಓದಿ IPL 2024: ನಿಷೇಧ ಭೀತಿಯಲ್ಲಿ ರಿಷಭ್​ ಪಂತ್​; ನಿಧಾನಗತಿ ಬೌಲಿಂಗ್​ಗೆ 24 ಲಕ್ಷ ರೂ. ದಂಡ

ಸಂಭಾವ್ಯ ತಂಡ


ಚೆನ್ನೈ ಸೂಪರ್​ ಕಿಂಗ್ಸ್​:
ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್​ ಕೀಪರ್​), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮತೀಶ ಪತಿರಾನ, ಮೊಯಿನ್​ ಅಲಿ.

ಸನ್​ರೈಸರ್ಸ್​ ಹೈದರಾಬಾದ್​: ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನಾದ್ಕತ್.

Exit mobile version