ಚೆನ್ನೈ: 17ನೇ ಆವೃತ್ತಿಯ ಐಪಿಎಲ್ನ(IPL 2024) ದ್ವಿತೀಯ ಕ್ವಾಲಿಫೈಯರ್(SRH vs RR Qualifier 2) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜಸ್ಥಾನ್(Rajasthan Royals) ಮತ್ತು ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡಗಳು ಈ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಇತ್ತಂಡಗಳ ಈ ಮುಖಾಮುಖಿಗೆ ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ಸಿಡಿಯಬೇಕಿದೆ ಹೆಡ್
ಲೀಗ್ ಹಂತದ ಆರಂಭದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಮೂರು ಬಾರಿ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಅದು ಕ್ಲೀನ್ ಬೌಲ್ಡ್ ಆಗುವ ಮೂಲಕ. ಇದೀಗ ಮಹತ್ವದ ಪಂದ್ಯದಲ್ಲಿ ಅವರು ಆಡದೇ ಹೋದರೆ ಹೈದರಾಬಾದ್ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಲಿದೆ. ಹೀಗಾಗಿ ಅವರು ಬ್ಯಾಟಿಂಗ್ ಫಾರ್ಮ್ಗೆ ಮರಳಬೇಕಾದ ಅನಿವಾರ್ಯವಿದೆ. 25 ವರ್ಷದ ಎಡಗೈ ದಾಂಡಿಗ ಅಭಿಷೇಕ್ ಶರ್ಮ ಬ್ಯಾಟಿಂಗ್ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಅಭಿಷೇಕ್ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್ ಬಾರಿಸಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬೌಲಿಂಗ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಹೈದರಾಬಾದ್ ನಾಕೌಟ್/ ಪ್ಲೇ ಆಫ್ ಸಾಧನೆ
2013ರಲ್ಲಿ ಲೀಗ್ನಲ್ಲಿ 4ನೇ ಸ್ಥಾನ. ಎಲಿಮಿನೇಟರ್ನಲ್ಲಿ ಸೋಲು
2016ರಲ್ಲಿ ಲೀಗ್ನಲ್ಲಿ 3ನೇ ಸ್ಥಾನ. ಚಾಂಪಿಯನ್
2017ರಲ್ಲಿ ಲೀಗ್ನಲ್ಲಿ 3ನೇ ಸ್ಥಾನ. ಎಲಿಮಿನೇಟರ್ನಲ್ಲಿ ಸೋಲು
2018ರಲ್ಲಿ ಮೊದಲ ಸ್ಥಾನ. ರನ್ನರ್ ಅಪ್
2019ರಲ್ಲಿ 4ನೇ ಸ್ಥಾನ. ಎಲಿಮಿನೇಟರ್ನಲ್ಲಿ ಸೋಲು
2020ರಲ್ಲಿ 3ನೇ ಸ್ಥಾನ. ಕ್ವಾಲಿಫೈಯರ್-2ನಲ್ಲಿ ಸೋಲು
ಇದನ್ನೂ ಓದಿ RR vs SRH: ಹೈದರಾಬಾದ್-ರಾಜಸ್ಥಾನ್ ನಡುವಣ ಇಂದಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಕಾಟ ಇದೆಯೇ?
ರಾಜಸ್ಥಾನ್ ಬೌಲಿಂಗ್ ಬಲಿಷ್ಠ
ರಾಜಸ್ಥಾನ್ ತಂಡದ ಬ್ಯಾಟಿಂಗ್ ಅಷ್ಟಾಗಿ ಬಲಿಷ್ಠವಿಲ್ಲದಿದ್ದರೂ ಕೂಡ ಸಂಘಟಿತ ಪ್ರದರ್ಶನದಿಂದಾಗಿ ಪಂದ್ಯ ಗೆಲ್ಲುತ್ತಿದೆ. ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಯಜುವೇಂದ್ರ ಚಹಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್ ಘಾತಕ ಬೌಲಿಂಗ್ ದಾಳಿಗೆ ಹೆಸರುವಾಸಿ. ಯಾವುದೇ ಕ್ಷಣದಲ್ಲಿಯೂ ಸತತವಾಗಿ ವಿಕೆಟ್ ಕಿತ್ತು. ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಇವರಿಗಿದೆ.
ರಾಜಸ್ಥಾನ್ ನಾಕೌಟ್/ ಪ್ಲೇ ಆಫ್ ಸಾಧನೆ
2008ರಲ್ಲಿ ಲೀಗ್ನಲ್ಲಿ ಮೊದಲ ಸ್ಥಾನ. ಚಾಂಪಿಯನ್
2013ರಲ್ಲಿ ಲೀಗ್ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್ನಲ್ಲಿ ಸೋಲು
2015ರಲ್ಲಿ ಲೀಗ್ನಲ್ಲಿ 4ನೇ ಸ್ಥಾನ. ಪ್ಲೇ ಆಫ್ನಲ್ಲಿ ಸೋಲು
2018ರಲ್ಲಿ ಲೀಗ್ನಲ್ಲಿ 4ನೇ ಸ್ಥಾನ. ಪ್ಲೇ ಆಫ್ನಲ್ಲಿ ಸೋಲು
2022ರಲ್ಲಿ ಲೀಗ್ನಲ್ಲಿ 2ನೇ ಸ್ಥಾನ. ಫೈನಲ್ನಲ್ಲಿ ಸೋಲು (ರನ್ನರ್ ಅಪ್)
ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್ 10, ರಾಜಸ್ಥಾನ್ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.