Site icon Vistara News

SRH vs RR: ಕ್ವಾಲಿಫೈಯರ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಸಂಜು ಸ್ಯಾಮ್ಸನ್​

SRH vs RR

SRH vs RR: "That's Where We Lost...": Sanju Samson Pinpoints Reason After RR's Yet Another Playoffs Heart-break

ಚೆನ್ನೈ: ಶುಕ್ರವಾರ ರಾತ್ರಿ ನಡೆದ ಐಪಿಎಲ್​(IPL 2024) ಕ್ವಾಲಿಫೈಯರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(SRH vs RR) ತಂಡ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ 36 ರನ್​ಗಳಿಂದ ಸೋಲು ಕಾನುಣು ಮೂಲಕ ತನ್ನ ಅಭಿಯಾನವನ್ನು ಮುಗಿಸಿತು. ಈ ಸೋಲಿಗೆ ಕಾರಣ ಏನೆಂಬುದನ್ನು ತಂಡದ ನಾಯಕ ಸಂಜು ಸ್ಯಾಮನ್ಸ್(Sanju Samson)​ ವಿವರಿಸಿದ್ದಾರೆ.

ಪಂದ್ಯದ ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್​, ನಮ್ಮ ತಂಡದ ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಹೈದರಾಬಾದ್​ ತಂಡದ ಎಡಗೈ ಸ್ಪಿನ್ನರ್​ಗಳು ಉತ್ತಮ ದಾಳಿ ಸಂಘಟಿಸಿದರು. ನಮ್ಮ ಬ್ಯಾಟಿಂಗ್​ ಲೈನಪ್​ನಲ್ಲಿ ಹೆಚ್ಚಿನ ಎಡಗೈ ಬ್ಯಾಟರ್​ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು ಎಂದರು.

ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್​ ಹೆಟ್ಮೆಯರ್​ ಹೊರತುಪಡಿಸಿ ಯಾರು ಎಡಗೈ ಬ್ಯಾಟ್ಸ್​ಮನ್​ಗಳಿರಲಿಲ್ಲ. ಇದುವೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಸ್ಯಾಮ್ಸನ್​ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದರು. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಯಾವುದೇ ಒಂದು ತಂಡ ಸೋಲಲೇ ಬೇಕು. ಈ ಸೋಲಿನಿಂದ ಹಲವು ಪಾಠ ಕಲಿತಿದ್ದೇವೆ. ಮುಂದಿನ ಬಾರಿ ಮತ್ತಷ್ಟು ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡುವ ವಿಶ್ವಾಸವಿದೆ ಎಂದರು.

ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಮೇ 26ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಹೈದರಾಬಾದ್​ ತಂಡ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.​

ಇದನ್ನೂ ಓದಿ IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಚೇಸಿಂಗ್​ ವೇಳೆ ನಾಯಕ ಸಂಜು ಸ್ಯಾಮ್ಸನ್​(10), ಟಾಮ್ ಕೊಹ್ಲರ್-ಕ್ಯಾಡ್ಮೋರ್(10), ರಿಯಾನ್​ ಪರಾಗ್​(6), ಆರ್​ ಅಶ್ವಿನ್​(0), ಶಿಮ್ರಾನ್ ಹೆಟ್​ಮೇರ್​(4) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಯಾರೂ ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ. ಜೈಸ್ವಾಲ್​ 3 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 42 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ಧೃವ್​ ಜುರೇಲ್​ ಅರ್ಧಶತಕ ಬಾರಿಸುವ ಮೂಲಕ ಶಕ್ತಿ ಮೀರಿದ ಬ್ಯಾಟಿಂಗ್​ ಹೋರಾಟ ನಡೆಸಿದರೂ ಕೂಡ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗದ ಕಾರಣ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಜೇಯರಾಗಿ ಉಳಿದ ಜುರೇಲ್ 35 ಎಸೆತಗಳಿಂದ 56 ರನ್​ ಬಾರಿಸಿದರು. ಇದರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಹೈದರಾಬಾದ್​ ಪರ ಶಾಬಾಜ್​ ಅಹ್ಮದ್​ 4 ಓವರ್​ಗೆ ಕೇವಲ 23 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್​ ಕಡೆವಿದರು. ಪಾರ್ಟ್​ ಟೈಮ್​ ಬೌಲರ್​ ಅಭಿಷೇಕ್​ ಶರ್ಮ 24 ರನ್​ಗೆ 2 ವಿಕೆಟ್​ ಕಿತ್ತರು

Exit mobile version