ಲಾಹೋರ್ : ಏಷ್ಯಾ ಕಪ್ ಲೀಗ್ (Asia Cup 2023) ಹಂತದದಲ್ಲಿ ಬಿ ಗುಂಪಿನ ಎರಡನೇ ತಂಡವಾಗಿ ಕಳೆದ ಬಾರಿಯ ಚಾಂಪಿಯನ್ ಶ್ರೀಲಂಕಾ ತಂಡ (Srilanka Team) ಸೂಪರ್-4 ಹಂತಕ್ಕೇರಿದೆ. ರೋಚಕವಾಗಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ 2 ರನ್ಗಳ ವಿಜಯ ಸಾಧಿಸಿದ ಲಂಕಾ ಬಳಗ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಇದೇ ವೇಳೆ ಏಷ್ಯಾ ಕಪ್ 2023 ರಲ್ಲಿ ಅಫ್ಘಾನಿಸ್ತಾನ ತಂಡದ ಪ್ರಯಾಣವು ವಿದ್ರಾವಕ ಸೋಲಿನೊಂದಿಗೆ ಕೊನೆಗೊಂಡಿತು. ಲಂಕಾ ಬೌಲರ್ಗಳು ಅಂತಿಮ ಹಂತದಲ್ಲಿ ಭರ್ಜರಿ ಬೌಲಿಂಗ್ ನಡೆಸುವ ಮೂಲಕ ಮುಂದಿನ ಹಂತಕ್ಕೆ ಹೋಗಲು ನೆರವಾದರು.
ಇಲ್ಲಿನ ಗಢಾಪಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 291 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಫ್ಘನ್ ಬಳಗ 37.4 ಓವರ್ಳಲ್ಲಿ 289 ರನ್ ಬಾರಿಸಿ ಆಲ್ಔಟ್ ಆಯಿತು. ಅಫಘಾನಿಸ್ತಾನ ತಂಡಕ್ಕೆ ಗೆಲುವು ಸಿಕ್ಕ ಹೊರತಾಗಿಯೂ 37.1 ಓವರ್ಗಳಲ್ಲಿ ಗುರಿ ಮುಟ್ಟಿದ್ದರೆ ಮಾತ್ರ ಸೂಪರ್-4 ಹಂತಕ್ಕೇರುವ ಅವಕಾಶ ಲಭಿಸುತ್ತಿತ್ತು. ಹೀಗಾಗಿ ಅಬ್ಬರದ ಬ್ಯಾಟಿಂಗ್ ನಡೆಸಿತ್ತು. ಆದರೆ, ಕೊನೇ ಹಂತದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡು ಗೆಲುವು ಪಡೆಯದೇ ನಿರಾಸೆ ಎದುರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು ಪಥುಮ್ ನಿಸ್ಸಾಂಕಾ ಮತ್ತು ದಿಮುತ್ ಕರುಣರತ್ನೆ ಅವರ 63 ರನ್ಗಳ ಆರಂಭಿಕ ಜೊತೆಯಾಟದಿಂದಾಗಿ ಉತ್ತಮ ಗತಿ ಪಡೆಯಿತು. ಕುಸಾಲ್ ಮೆಂಡಿಸ್ 84 ಎಸೆತಗಳಲ್ಲಿ 92 ರನ್ ಸಿಡಿಸಿ ಔಟಾದರು. ಪಂದ್ಯದ ಕೊನೆಯಲ್ಲಿ ದುನಿತ್ ವೆಲ್ಲಲಗೆ ಮತ್ತು ಮಹೀಶ್ ತಿಕ್ಷಣಾ ರನ್ ಗಳಿಕೆ ವೇಗವನ್ನು ಹೆಚ್ಚಿಸಿದರು.
ಅಫ್ಘಾನಿಸ್ತಾನ ಪರ ಗುಲ್ಬಾದಿನ್ ನೈಬ್ 4 ವಿಕೆಟ್ ಕಿತ್ತರೆ, ರಶೀದ್ ಖಾನ್ 2 ವಿಕೆಟ್ ಪಡೆದರು. ಶ್ರೀಲಂಕಾದ ಬ್ಯಾಟರ್ಗಳು ಸುಲಭವಾಗಿ 300 ರನ್ ದಾಟುವಂತೆ ಬ್ಯಾಟ್ ಮಾಡಿದರೂ ಎದುರಾಳಿ ಸ್ಪಿನ್ನರ್ಗಳು ಅವಕಾಶ ನೀಡಲಿಲ್ಲ.
ಅಫಘಾನಿಸ್ತಾನ ಹೋರಾಟ
ಚೇಸಿಂಗ್ ವಿಷಯಕ್ಕೆ ಬಂದಾಗ, ಅಫ್ಘಾನಿಸ್ತಾನವು ತಮ್ಮ ಇಬ್ಬರು ಆರಂಭಿಕರನ್ನು ಬೇಗ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರನ್ ಅವರನ್ನು ಕಸುನ್ ರಜಿತಾ ಔಟ್ ಮಾಡಿದರೆ, ನಯೀಬ್ 22 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಆದ್ದರಿಂದ, ತಂಡವು ತೀವ್ರ ಒತ್ತಡದಲ್ಲಿತ್ತು/ ಆಗ ಹಶ್ಮತುಲ್ಲಾ ಶಾಹಿದಿ ಮತ್ತು ರಹಮತ್ ಶಾ ಅಬ್ಬರದ ಕ್ರಿಕೆಟ್ ಆಡಿದರು. ಶಾ ಔಟಾದ ನಂತರ, ಅನುಭವಿ ಆಲ್ರೌಂಡರ್ ಮೊಹಮ್ಮದ್ ನಬಿ ತಂಡವನ್ನು ಸೇರಿಕೊಂಡರು ಮತ್ತು 32 ಎಸೆತಗಳಲ್ಲಿ 65 ರನ್ ಗಳಿಸಿ ಆಟದ ಗತಿಯನ್ನು ಸಂಪೂರ್ಣವಾಗಿ ಬದಲಾಯಿಸಿದರು.
ಇದನ್ನೂ ಓದಿ : Asia Cup 2023 : ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ಖಡಕ್ ಉತ್ತರ ಕೊಟ್ಟ ಜಯ್ ಶಾ
ಆದಾಗ್ಯೂ, 38 ವರ್ಷದ ಆಟಗಾರನಿಗೆ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ನಾಯಕ ದಸುನ್ ಶನಕಾ ನಂತರ ದುನಿತ್ ವೆಲ್ಲಾಲಗೆ ಅವರನ್ನು ಔಟ್ ಮಾಡಿದರು. ರಶೀದ್ ಖಾನ್ ಕೊನೆಯಲ್ಲಿ ಗೆಲುವಿಗೆ ಪ್ರಯತ್ನಿಸಿದರು. ಆದರೆ ಎರಡು ರನ್ಗಳಿಂದ ಸೋತು ಸ್ಪರ್ಧೆಯಿಂದ ಹೊರಗುಳಿಯಿತು.