Site icon Vistara News

Asia Cup | ಶ್ರೀಲಂಕಾ ತಂಡಕ್ಕೆ ಜಯ, ಸೂಪರ್‌- 4ಕ್ಕೆ ಪ್ರವೇಶ

asia cup

ದುಬೈ : ಏಷ್ಯಾ ಕಪ್‌ನ ಬಿ ಗುಂಪಿನಲ್ಲಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಗುಂಪು ಹಂತದ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡ ೨ ವಿಕೆಟ್‌ಗಳ ವಿರೋಚಿತ ಜಯ ಸಾಧಿಸಿದೆ. ಇದರೊಂದಿಗೆ ಏಷ್ಯಾ ಕಪ್‌ನ ಸೂಪರ್‌-೪ ಹಂತಕ್ಕೇರಿದ್ದು, ಸೆಪ್ಟೆಂಬರ್‌ ೩ರಂದು ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ತಂಡಕ್ಕೆ ಎದುರಾಗಲಿದೆ.

ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಮ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ೭ ವಿಕೆಟ್ ನಷ್ಟಕ್ಕೆ ೧೮೩ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ೧೯.೨ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೮೪ ರನ್ ಬಾರಿಸಿ ಗೆಲುವು ಸಾಧಿಸಿತು.

ಶ್ರೀಲಂಕಾ ಕುಸಾಲ್‌ ಮೆಂಡಿಸ್‌ ೩೭ ಎಸೆತಗಳಲ್ಲಿ ೬೦ ರನ್‌ ಬಾರಿಸಿದರೆ ನಾಯಕ ದಸುನ್ ಶನಕ ೩೩ ಎಸೆತಗಳಲ್ಲಿ ೪೫ ರನ್‌ ಬಾರಿಸಿದರು. ಅದಲ್ಲದೆ, ಪಾಥುಮ್ ನಿಸ್ಸಂಕಾ ೨೦ ರನ್‌ ಬಾರಿಸಿದರೆ, ಚಾಮಿಕಾ ಕರುಣಾರತ್ನೆ ೧೬ ರನ್‌ಗಳ ಕೊಡುಗೆ ಕೊಟ್ಟರು. ಲಂಕಾ ಪರ ಎಬಾದತ್‌ ಹೊಸೈನ್‌ ೫೧ ರನ್‌ಗಳಿಗೆ ೩ ವಿಕೆಟ್ ಪಡೆದಿದ್ದು, ಟಸ್ಕಿನ್ ಅಹಮದ್‌ ೨೪ ರನ್‌ಗಳಿಗೆ ೨ ವಿಕೆಟ್ ಪಡೆದುಕೊಂಡಿದ್ದಾರೆ.

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ ತಂಡದ ಪರ ಮೆಹೆದಿ ಹಸನ್ (೩೮), ಶಕಿಬ್‌ ಅಲ್‌ ಹಸನ್‌ (೨೪), ಅಫೀಪ್‌ ಹೊಸೈನ್‌ (೩೯), ಮಹಮದುಲ್ಲಾ (೨೭), ಮೊಸೆದಕ್‌ ಹೊಸೈನ್‌(೨೪) ಸವಾಲಿನ ಮೊತ್ತ ಪೇರಿಸಲು ನೆರವಾದರು.

ಸ್ಕೋರ್‌ ವಿವರ

ಬಾಂಗ್ಲಾದೇಶ : ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೩ (ಮೆಹೆದಿ ಹಸನ್‌ ೩೮, ಅಫೀಪ್‌ ಹೊಸೈನ್‌ ೩೯; ವಾನಿಂದು ಹಸರಂಗ ೪೧ಕ್ಕೆ೨, ಚಾಮಿಕಾ ಕರುಣಾರತ್ನೆ ೩೨ಕ್ಕೆ೨).

ಶ್ರೀಲಂಕಾ : ೧೯. ೨ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೮೪ (ಕುಸಾಲ್‌ ಮೆಂಡಿಸ್‌ ೬೦, ದಸುನ್‌ ಶನಕ ೪೫, ಎಬಾದತ್ ಹೊಸೈನ್‌ ೫೧ಕ್ಕೆ೩).

ಇದನ್ನೂ ಓದಿ | Ind vs Pak | ಭಾರತ – ಪಾಕಿಸ್ತಾನ ಏಷ್ಯಾ ಕಪ್‌ ಹಣಾಹಣಿಗಳ ಆಸಕ್ತಿಕರ ಸಂಗತಿಗಳು ಇಲ್ಲಿವೆ

Exit mobile version