ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ (Asia Cup 2023) ಟಿಕೆಟ್ ದರವನ್ನು ಶೇ.95ರಷ್ಟು ಕಡಿತಗೊಳಿಸಿದೆ. ಏಷ್ಯಾ ಕಪ್ ಪಂದ್ಯದ ಟಿಕೆಟ್ ಬೆಲೆಯನ್ನು ಶೇಕಡಾ 40ರಷ್ಟು ಏರಿಕೆ ಮಾಡಿದ್ದ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಅಂತಿಮವಾಗಿ ಬೆಲೆಯನ್ನು ಇಳಿಕೆ ಮಾಡಲು ಮಂದಾಗಿ ಪ್ರೇಕ್ಷಕರು ಹೆಚ್ಚು ಉತ್ಸಾಹ ತೋರದ ಕಾರಣ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ಶ್ರೀಲಂಕಾದಲ್ಲಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಟಿಕೆಟ್ ಬೆಲೆ 250 ರೂಪಾಯಿಗಳಾಗಿತ್ತು.
ಶ್ರೀಲಂಕಾದಲ್ಲಿ ಟೂರ್ನಿ ನಡೆಯುತ್ತಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸುತ್ತಿದೆ. ಹೀಗಾಗಿ ಕೆಲವು ಟಿಕೆಟ್ಗಲ ಬೆಲೆಯನ್ನು 10,000 ರೂ.ಗೆ ಹೆಚ್ಚಿಸಲಾಗಿತ್ತು. ಆದರೆ, ಅಭಿಮಾನಿಗಳು ಉತ್ಸಾಹ ತೋರದ ಕಾರಣ ಬೆಲೆ ಇಳಿಸಲಾಗಿದೆ. ಕೊಲಂಬೊದ 35,000 ಆಸನ ಸಾಮರ್ಥ್ಯದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಸೂಪರ್ ಫೋರ್ ಪಂದ್ಯಕ್ಕೆ ಕೇವಲ 7,000 ತವರಿನ ಬೆಂಬಲಿಗರು ಆಗಮಿಸಿದ್ದರು. ಆತಂಕಕ್ಕೆ ಒಳಗಾದ ಸಂಸ್ಥೆ ಬೆಲೆ ಇಳಿಸಿದೆ. ಅದೇ ರೀತಿ ಪಂದ್ಯಗಳಿಗೆ ಮಳೆಯೂ ಅಡಚಣೆ ಮಾಡುತ್ತಿರುವ ಕಾರಣ ಪ್ರೇಕ್ಷಕರು ಮೈದಾನದ ಕಡೆಗೆ ಬರುತ್ತಿಲ್ಲ. ಇವೆಲ್ಲ ಕಾರಣಕ್ಕೆ ಪಂದ್ಯದ ಟಿಕೆಟ್ ದರ ಇಳಿಸುವುದು ಅನಿವಾರ್ಯವಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ದಿನದ ಪಂದ್ಯ ಸೇರಿದಂತೆ ಉಳಿದ ಎಲ್ಲಾ ಸೂಪರ್ ಫೋರ್ ಪಂದ್ಯಗಳಿಗೆ ಟಿಕೆಟ್ ದರದಲ್ಲಿ ಶೇಕಡಾ 95 ರಷ್ಟು ಬೆಲೆ ಕಡಿತವನ್ನು ಘೋಷಿಸಿದೆ. ಇಷ್ಟಾದರೂ ಭಾನುವಾರ ಸ್ಟೇಡಿಯಮ್ನಲ್ಲಿ ಕೇವಲ 20 ಸಾವಿರ ಜನರು ಮಾತ್ರ ಕಂಡು ಬಂದರು ಎನ್ನಲಾಗಿದೆ.
ಅಭಿಮಾನಿಗಳ ಕೋಪ
ಟಿಕೆಟ್ ಬೆಲೆ ಏರಿಕೆಯ ಕುರಿತು ಅಭಿಮಾನಿಗಳನ್ನು ಬೇಸರ ವ್ಯಕ್ತಪಡಿಸಿದ್ದರು . ವಿದೇಶಿ ವಿನಿಮಯ ಬಿಕ್ಕಟ್ಟಿನ ನಂತರ ಶ್ರೀಲಂಕಾ ಕಳೆದ ವರ್ಷ ತಿಂಗಳುಗಟ್ಟಲೆ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯನ್ನು ಅನುಭವಿಸಿತು, ಇದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಇದು ಅಧ್ಯಕ್ಷರನ್ನು ಪದಚ್ಯುತಗೊಳಿಸುವಲ್ಲಿ ಕೊನೆಗೊಂಡಿತ್ತು. ಇದೀಗ ಟಿಕೆಟ್ ಬೆಲೆ ಏರಿಕೆ ಮಾಡಿರುವುದು ಅಭಿಮಾನಿಗಳನ್ನು ಕೆರಳಿಸಿದೆ.
50 ಓವರ್ಗಳ ಏಷ್ಯಾ ಕಪ್ ಮುಂಬರುವ ಏಕದಿನ ವಿಶ್ವ ಕಪ್ಗೆ ಅಭ್ಯಾಸದಂತಿದೆ. ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತವು ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ನಂತರ ಹೆಚ್ಚಿನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಮಳೆ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗಿವೆ.
“ಪಾಕಿಸ್ತಾನವು ಕ್ರಿಕೆಟ್ ಮಂಡಳಿಯು ಟಿಕೆಟ್ ದರವನ್ನು ತುಂಬಾ ಹೆಚ್ಚಿಸಿದೆ. ಇದು ಅಭಿಮಾನಿಗಳನ್ನು ಕ್ರೀಡಾಂಗಣಗಳಿಂದ ದೂರವಿರಿಸಿದೆ” ಎಂದು ಶ್ರೀಲಂಕಾದ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಕೆಟ್ ದರ. ಸಾಮಾನ್ಯರ ಕೈಗೆಟುಕುವುದಿಲ್ಲ ಎಂದು ಅವರು ಹೇಳಿದರು. “ಇದು ವಿಲಕ್ಷಣವಾಗಿದೆ. ನಾವು ಪಿಸಿಬಿಯೊಂದಿಗೆ ಚರ್ಚಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ತಮ್ಮದೇ ಕಾರಣದಿಂದ ಹಣವನ್ನು ಕಳೆದುಕೊಂಡಿದ್ದಾರೆ. ಅದಕ್ಕಾಗಿ ಟಿಕೆಟ್ ದರ ಹೆಚ್ಚಿಸಿರಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ದುಬಾರಿ ದರದ ಬಗ್ಗೆ ಬೇಸರ
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಭಾನುವಾರ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಯಾಕೆಂದರೆ ಗ್ರ್ಯಾಂಡ್ ಗ್ಯಾಲರಿ ಟಿಕೆಟ್ ಬೆಲೆ 64,000 ರೂಪಾಯಿ ನಿಗದಿ ಮಾಡಲಾಗಿತ್ತು. ಅಭಿಮಾನಿಗಳು ಇಷ್ಟೊಂದು ಬೆಲೆಯನ್ನು ಊಹಿಸಿರಲಿಲ್ಲ.
ಇದು ಒಳ್ಳೆಯದಲ್ಲ. ನಾವು ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ ಆದರೆ ಪಂದ್ಯವನ್ನು ವೀಕ್ಷಿಸಲು ದೊಡ್ಡ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದು ಕೊಲಂಬೊ ಕ್ರೀಡಾಂಗಣದ ಹೊರಗೆ ಚಹಾ ಮಾರಾಟಗಾರ ಸುಪುನ್ ವಿಜಯರತ್ನಂ ಎಎಫ್ಗೆ ತಿಳಿಸಿದರು.
ನಾನು ಇಲ್ಲಿ ಅನೇಕ ಪಂದ್ಯಗಳನ್ನು ಕೇವಲ 100 ಮತ್ತು 200 ರೂಪಾಯಿಗಳಿಗೆ ನೋಡಿದ್ದೇನೆ. ಆದರೆ ಈ ಬಾರಿ ನಾನು ಅದನ್ನು ಟಿವಿಯಲ್ಲಿ ನೋಡಬೇಕು ಮತ್ತು ಕೇವಲ ಕೇಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಈ ಪಂದ್ಯಕ್ಕಾಗಿ ನಾವು 16,000 ಶ್ರೀಲಂಕಾ ರೂಪಾಯಿಗಳನ್ನು ಪಾವತಿಸಿದ್ದೇವೆ. ನಾವು ಕ್ಯಾಂಡಿಯಲ್ಲಿಯೂ ಇದ್ದೆವು ಮತ್ತು ಅಲ್ಲಿ 15,000 ಪಾವತಿಸಬೇಕಾಯಿತು” ಎಂದು ಉತ್ತರ ಭಾರತದ ನಗರ ಲಕ್ನೋದ ಅರುಣ್ ಕುಮಾರ್ ಯಾದವ್ ತಿಳಿಸಿದ್ದಾರೆ. ನಾವು ಕಳೆದ ಬಾರಿ ಇಲ್ಲಿಗೆ ಬಂದಾಗ ಟಿಕೆಟ್ ಬೆಲೆಗಳು ಇಷ್ಟೊಂದು ದುಬಾರಿ ಆಗಿರಲಿಲ್ಲ ” ಎಂದು 35 ವರ್ಷದ ಅವರು ಹೇಳಿದರು.