Site icon Vistara News

BAN vs SL: ಹಸ್ತಲಾಘವ ಮಾಡದೆ ಮೈದಾನ ತೊರೆದ ಲಂಕಾ ಆಟಗಾರರು; ಕಾರಣ ಏನು?

refuse to shake hands with Bangladesh players

ನವದೆಹಲಿ: ಬದ್ಧ ಎದುರಾಳಿಯಾದ ಬಾಂಗ್ಲಾದೇಶ(Bangladesh vs Sri Lanka) ವಿರುದ್ಧದ ಸೋಮವಾರದ ವಿಶ್ವಕಪ್​ ಪಂದ್ಯದಲ್ಲಿ ಶ್ರೀಲಂಕಾ(BAN vs SL) ತಂಡದ ಆಟಗಾರರು ಹಸ್ತಲಾಘವ ಮಾಡದೆ ಮೈದಾನ ತೊರೆದಿದ್ದಾರೆ. ಇದಕ್ಕೆ ಕಾರಣ ಬಾಂಗ್ಲಾ ಆಟಗಾರರು ಕ್ರೀಡಾಸ್ಫೂರ್ತಿ ಮರೆತದ್ದು.

ಹೌದು, ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡದ ಈ ಪಂದ್ಯ ಕೊನೆ ಕ್ಷಣದವರೆಗೂ ಆಟಗಾರರ ನಡುವೆ ಮುಸುಕಿನ ಗುದ್ದಾಟದ ಮೂಲಕವೇ ಸಾಗಿ ಬಂತು. ಅದರಲ್ಲೂ ಬಾಂಗ್ಲಾದೇಶ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಲಂಕಾ ಆಟಗಾರರು ಪ್ರತಿ ಎಸೆತದಲ್ಲಿಯೂ ಕೆಣಕುತ್ತಲೇ ಇದ್ದರು. ಪದೇಪದೆ ಆಟಗಾರರನ್ನು ಸಮಾಧಾನ ಪಡೆಸಿ ಅಂಪೈರ್​ಗಳು ಸುಸ್ತಾದರು. ಕಾಮೆಂಟ್ರಿಯಲ್ಲಿದ್ದವರು ಮಾತ್ರ ಈ ಕೋಳಿ ಜಗಳವನ್ನು ಅತ್ಯಂತ ಸುಂದರವಾಗಿ ವರ್ಣಿಸಿ ರಂಚಿಸುತ್ತಿದ್ದರು. ಇತ್ತಂಡಗಳ ಆಟಗಾರರ ಮಧ್ಯೆ ಮುನಿಸಿಗೆ ಕಾರಣ ಏಂಜೆಲೊ ಮ್ಯಾಥ್ಯೂಸ್‌ ಅವರ ಟೈಮ್ಡ್​ ಔಟ್​!


ಜಗಳಕ್ಕೆ ಕಾರಣ!

ಲಂಕಾ ತಂಡದ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್‌(angelo mathews) ಅವರು ಬ್ಯಾಟಿಂಗ್​ ನಡೆಸಲು ಕ್ರೀಸ್​ಗೆ ಬಂದಾಗ ಅವರಿಗೆ ಹೆಲ್ಮೆಟ್​ ಸಮಸ್ಯೆ ಎದುರಾಯಿತು. ಕೂಡಲೇ ಅವರು ಡಗೌಟ್​ನಲ್ಲಿ ಕುಳಿತ ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್​ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್​ ಮಾಡಿದರು. ಫೀಲ್ಡ್​ ಅಂಪೈರ್​ ಮರೈಸ್ ಎರಾಸ್ಮಸ್ ಬಾಂಗ್ಲಾ ಆಟಗಾರರ ಮನವಿಯನ್ನು ಮಾನ್ಯ ಮಾಡಿ ಮ್ಯಾಥ್ಯೂಸ್​ಗೆ ಕ್ರೀಸ್​ ಬಿಡುವಂತೆ ಹೇಳಿದರು. ಇದೇ ವೇಳೆ ಮ್ಯಾಥ್ಯೂಸ್‌ ಅವರು ತಮ್ಮ ಹೆಲ್ಮೆಟ್​ ತುಂಡಾಗಿರುವುದನ್ನು ತೋರಿಸಿ ಮನವಿ ಮಾಡಿದರು. ಅಲ್ಲದೆ ಬಾಂಗ್ಲಾ ನಾಯಕ ಶಕೀಬ್​ ಅವರ ಬಳಿಯೂ ನಡೆದ ಘಟನೆಯನ್ನು ವಿವರಿಸಿದರು. ಆದರೂ ಬಾಂಗ್ಲಾ ಆಟಗಾರರು ತಮ್ಮ ಮನವಿಯನ್ನು ಹಿಂಪಡೆಯಲಿಲ್ಲ. ಹೀಗಾಗಿ ಏಂಜೆಲೊ ಮ್ಯಾಥ್ಯೂಸ್‌ ಅವರು ಒಂದೂ ಎಸೆತ ಎದುರಿಸಿದೆ ಟೈಮ್ಡ್​ ಔಟ್​ ಬಲಿಯಾದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ರೀತಿ ಔಟ್​ ಆದ ಮೊದಲ ಆಟಗಾರ ಎಂಬ ಕೆಟ್ಟ ದಾಖಲೆ ಪಟ್ಟಿಗೆ ಸೇರ್ಪಡೆಯಾದರು.

ಲಂಕಾ ತಂಡಕ್ಕೆ ದಂಡದ ಭೀತಿ?

ಕ್ರೀಡಾಸ್ಫೂರ್ತಿ ತೋರದ ಬಾಂಗ್ಲಾ ಆಟಗಾರರನ್ನು ಪಂದ್ಯದುದ್ದಕೂ ಕೆಣಕುತ್ತಲೇ ಸಾಗಿದರು. ಅದರಲ್ಲೂ ನಾಯಕ ಶಕೀಬ್​ ಅವರ ವಿಕೆಟ್​ ಮ್ಯಾಥ್ಯೂಸ್​ ಅವರೇ ಕಿತ್ತು ಸೇಡು ತೀರಿಸಿಕೊಂಡದ್ದು ಪಂದ್ಯದ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಲಂಕ ಆಟಗಾರರು ಪಂದ್ಯದ ಮುಕ್ತಾಯದ ಬಳಿಕವೂ ಹಸ್ತಲಾಘವ ಮಾಡದೆ ತಮ್ಮ ಪಾಡಿಗೆ ಮೈದಾನದಿಂದ ಹೊರನಡೆದರು. ಸದ್ಯ ಲಂಕಾ ಆಟಗಾರ ಈ ವರ್ತನೆಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ ಬಹಿರಂಗವಾಗಿಯೇ ಶಕೀಬ್​, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್‌

ಕಿಡಿ ಕಾರಿದ ಮ್ಯಾಥ್ಯೂಸ್​

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥ್ಯೂಸ್, ”ನಾನು ತಪ್ಪು ಮಾಡದಿದ್ದರೂ ಬಾಂಗ್ಲಾ ಆಟಗಾರರು ತೋರಿದ ವರ್ತನೆ ಬಗ್ಗೆ ನನ್ನ ವಿರೋಧವಿದೆ. ನನ್ನ ಹೆಲ್ಮೆಟ್​ ತೊಂದರೆಯಿಂದಾಗಿ ಈ ತಪ್ಪು ಆಗಿದೆ. ಆದರೆ ಬಾಂಗ್ಲಾ ಆಟಗಾರಿಗೆ ಕಾಮನ್ಸೆನ್ಸ್ ಎಂಬುದೇ ಇಲ್ಲ. ಇದು ಶಕೀಬ್ ಮತ್ತು ಬಾಂಗ್ಲಾದೇಶದಿಂದ ಅತ್ಯಂತ ಕೀಳು ಮಟ್ಟದ ತೀರ್ಮಾನವಾಗಿದೆ” ಎಂದು ಹೇಳಿದರು.

”ಇಷ್ಟು ಕೀಳು ಮಟ್ಟಕ್ಕೆ ಇಳಿದು ಕ್ರಿಕೆಟ್ ಆಡುವುದು ನಿಜಕ್ಕೂ ಬೇಸರ ತಂದಿದೆ. ನಿಯಮಗಳ ಪ್ರಕಾರ, ನಾನು ಎರಡು ನಿಮಿಷಗಳಲ್ಲಿ ತಯಾರಾಗಬೇಕು, ನನಗೆ ಅಲ್ಲಿ ಇನ್ನೂ ಐದು ಸೆಕೆಂಡುಗಳು ಕಾಲಾವಕಾಶವಿತ್ತು. ಈ ರೀತಿಯ ಘಟನೆ ಅವಮಾನಕರವಾಗಿದೆ. ನಮ್ಮನ್ನು ಗೌರವಿಸುವ ಜನರನ್ನಷ್ಟೆ ನಾವೂ ಗೌರವಿಸುತ್ತೇವೆ. ನಾವೆಲ್ಲರೂ ಉತ್ತಮವಾಗಿ ಕ್ರಿಕೆಟ್ ಆಡಲು ಬಂದಿದ್ದೇವೆ. ನೀವು ಇದಕ್ಕೆ ಗೌರವ ಕೊಡದಿದ್ದರೆ ಇನ್ನೇನು ಹೇಳಲು ಸಾಧ್ಯ,” ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version