Site icon Vistara News

ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗೂ ಮುನ್ನ ತಂಡ ಪ್ರಕಟಿಸಿದ ಹಾಲಿ ಚಾಂಪಿಯನ್​ ಶ್ರೀಲಂಕಾ

Sri Lanka name 15-member squad for Asia Cup

ಕೊಲೊಂಬೊ: 16ನೇ ಆವೃತ್ತಿಯ ಏಷ್ಯಾಕಪ್​ ಟೂರ್ನಿ(Asia Cup 2023) ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಇರುವಾಗ ಹಾಲಿ ಚಾಂಪಿಯನ್​ ಶ್ರೀಲಂಕಾ 15 ಸದಸ್ಯರ ತಂಡವನ್ನು(Sri Lanka squad for Asia Cup) ಪ್ರಕಟಿದೆ. ಇನ್ನೂ ಅಚ್ಚರಿ ಎಂದರೆ ಲಂಕಾಗೆ ಎರಡೇ ದಿನಗಳ ಅಂತರದಲ್ಲಿ ಮೊದಲ ಪಂದ್ಯ ಕೂಡ ಇದೆ. ಈ ಬಾರಿ ಸ್ಟಾರ್​ ಆಟಗಾರರ ಅಲಭ್ಯತೆ ಲಂಕಾ ತಂಡದಲ್ಲಿ ಕಂಡುಬಂದಿದೆ. ಗಾಯದಿಂದ ಬಳಲುತ್ತಿರುವ ವನಿಂದು ಹಸರಂಗ(Wanindu Hasaranga), ದುಷ್ಮಂತ ಚಮೀರಾ(Dushmantha Chameera), ದಿಲ್ಶನ್ ಮಧುಶಂಕ(Lahiru Madushanka) ಹಾಗೂ ಲಹಿರು ಕುಮಾರ(Lahiru Kumara) ಕೂಟದಿಂದ ಹೊರಗುಳಿದಿದ್ದಾರೆ.

ಆಲ್​ರೌಂಡರ್​ ದಸುನ್ ಶನಕ(Dasun Shanaka) ತಂಡವನ್ನು ಮುನ್ನಡೆಸಲಿದ್ದಾರೆ. ಕುಸಾಲ್ ಮೆಂಡಿಸ್ ಉಪನಾಯಕನಾಗಿದ್ದಾರೆ. ಕೊರೊನಾ ಪಾಸಿಟಿವ್​ ಆದ ಅವಿಷ್ಕಾ ಫರ್ನಾಂಡೋ ಅವರನ್ನು ಕೈಬಿಡಲಾಗಿದೆ. ಆದರೆ ಕುಸಾಲ್ ಪೆರೆರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಇವರಿಗೂ ಕೋವಿಡ್​ ವಕ್ಕರಿಸಿತ್ತು ಎಂದು ವರದಿಯಾಗಿತ್ತು.

ಫೈನಲ್​ ಸೇರಿ 9 ಪಂದ್ಯ ಲಂಕಾದಲ್ಲಿ

ಈ ಬಾರಿಯ ಏಷ್ಯಾಕಪ್​ಗೆ ಪಾಕಿಸ್ತಾನ ಆತಿಥ್ಯವಹಿಸಿಕೊಂಡರೂ ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಹೇಳಿ ತಮ್ಮ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸಬೇಕೆಂಸು ಪಟ್ಟುಹಿಡಿದಿತ್ತು. ಈ ಕಾರಣದಿಂದ ಟೂರ್ನಿ ಹೈಬ್ರಿಡ್​ ಮಾದರಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಪಂದ್ಯಗಳು ನಡೆಯುತ್ತಿವೆ. ಆಗಸ್ಟ್​ 30ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ ನಾಲ್ಕು ಮತ್ತು ಉಳಿದ 9 ಪಂದ್ಯಗಳಿಗೆ ಶ್ರಿಲಂಕಾ ಆತಿಥ್ಯ ವಹಿಸಿಕೊಂಡಿದೆ. ಹೀಗಾಗಿ ಲಂಕಾಗೆ ತವರಿನ ಲಾಭವೂ ಸಿಕ್ಕಂತಾಗಿದೆ. ಹಾಲಿ ಚಾಂಪಿಯನ್​ ಆಗಿರುವ ಲಂಕಾ ಪ್ರಶಸ್ತಿಯನ್ನು ತಮ್ಮ ಬಳಿ ಉಳಿಸಿಕೊಳ್ಳಲು ಉತ್ತಮ ಅವಕಾಶವಿದೆ.

ಇದನ್ನೂ ಓದಿ Asia Cup 2023: ಪಾಕಿಸ್ತಾನದಲ್ಲೂ ಪಂದ್ಯ ಆಡಲಿದೆ ಟೀಮ್​ ಇಂಡಿಯಾ!

6 ಬಾರಿ ಚಾಂಪಿಯನ್​

ಏಷ್ಯಾ ಕಪ್​ ಇತಿಹಾಸದಲ್ಲಿ ಭಾರತ ಬಿಟ್ಟರೆ ಶ್ರೀಲಂಕಾದ ಸಾಧನೆ ಉತ್ತಮವಾಗಿದೆ. ಅತ್ಯಧಿಕ 12 ಸಲ ಫೈನಲ್‌ಗೆ ಲಗ್ಗೆ ಇರಿಸಿ 6 ಸಲ ಪ್ರಶಸ್ತಿ ಎತ್ತಿದೆ. ಕಳೆದ ವರ್ಷ ಯುಎಇಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಹೀಗಾಗಿ ಲಂಕಾ ತಂಡವನ್ನು ಕಡೆಗಣಿಸುವಂತಿಲ್ಲ. ಲಂಕಾ ತನ್ನ ಮೊದಲ ಲೀಗ್​ ಪಂದ್ಯವನ್ನು ಆಗಸ್ಟ್​ 31ರಂದು ತವರಿನ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ.

ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಉದ್ಘಾಟನ ಪಂದ್ಯದಲ್ಲಿ ನೇಪಾಳ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಗಲಿದೆ. ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿರುವ ಪಾಕಿಸ್ತಾನ ಈ ಪಂದ್ಯದ ನೆಚ್ಚಿನ ತಂಡವಾಗಿದೆ.

ಇದನ್ನೂ ಓದಿ Asia Cup 2023: 15 ಆವೃತ್ತಿಯ ಏಷ್ಯಾಕಪ್​ನಲ್ಲಿ ಭಾರತ ತಂಡದ್ದೇ ಪಾರುಪತ್ಯ

ಶ್ರೀಲಂಕಾ ತಂಡ

ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.

Exit mobile version