ಬುಲವಾಯೊ (ಜಿಂಬಾಬ್ವೆ): ವಿಶ್ವ ಕಪ್ 2023ರ (World Cup 2023) ಅರ್ಹತಾ ಸುತ್ತಿನ ಪಂದ್ಯಾವಳಿಯ ಸೂಪರ್ ಸಿಕ್ಸ್ ಹಂತದಲ್ಲಿ ಆತಿಥೇಯ ಜಿಂಬಾಬ್ವೆ ತಂಡದ ವಿರುದ್ದ 9 ವಿಕೆಟ್ಗಳ ಭರ್ಜರಿ ವಿಜಯ ದಾಖಲಿಸಿದ ಶ್ರೀಲಂಕಾ ತಂಡ ವಿಶ್ವ ಕಪ್ಗೆ ತನ್ನ ಸ್ಥಾನ ಕಾಯ್ದಿರಿಸಿಕೊಂಡಿತು. ಭಾನುವಾರ ಇಲ್ಲಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಹಣಾಹಣಿಯಲ್ಲಿ ಸುಲಭ ಜಯ ದಾಖಲಿಸಿದ 1996ರ ವಿಶ್ವ ಕಪ್ ವಿಜೇತ ತಂಡ ತನ್ನ ವಿಜಯದ ಅಭಿಯಾನ ಮುಂದುವರಿಸಿತು. ಶನಿವಾರವಷ್ಟೇ ವೆಸ್ಟ್ ಇಂಡೀಸ್ ತಂಡ ಸ್ಕಾಟ್ಲೆಂಡ್ ವಿರುದ್ಧ ಸೋಲುವ ಮೂಲಕ ವಿಶ್ವ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಈ ಮೂಲಕ ಎರಡು ಬಾರಿಯ ವಿಶ್ವ ಕಪ್ ವಿಜೇತ ತಂಡ ಅರ್ಹತೆ ಪಡೆಯಲು ವಿಫಲವಾದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಆದರೆ, ದಸುನ್ ಶನಕ ನೇತೃತ್ವದ ತಂಡ ಆ ರೀತಿಯ ಫಲಿತಾಂಶಕ್ಕೆ ಅವಕಾಶ ನೀಡಲಿಲ್ಲ.
Pathum Nissanka's unbeaten hundred takes Sri Lanka to a win and they have now booked their spot at the 2023 @cricketworldcup 💥#CWC23 | #ZIMvSL: https://t.co/kYQerTkkIx pic.twitter.com/QmiqyifN5E
— ICC (@ICC) July 2, 2023
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಿಲ್ಶಾನ್ ಮಧುಶಂಕಾ (3 ವಿಕೆಟ್) ಮತ್ತು ಮಹೇಶ್ ತೀಕ್ಷಾನಾ ( 4ವಿಕೆಟ್) ಪ್ರಾಬಲ್ಯ ಸಾಧಿಸಿ ಜಿಂಬಾಬ್ವೆಯನ್ನು ಕೇವಲ 165 ರನ್ಗಳಿಗೆ ಆಲೌಟ್ ಮಾಡಿದರು. ಸಣ್ಣ ಮೊತ್ತವನ್ನು ಪೇರಿಸಿದ್ದ ತವರಿನ ತಂಡಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಲಂಕಾದ ಆಟಗಾರರರಾದ ಪಾಥುಮ್ ನಿಸ್ಸಾಂಕ (ಅಜೇಯ 101 ರನ್), ದಿಮುತ್ ಕರುಣಾ ರತ್ನೆ (30) ಅವರ ಶತಕದ ಜೊತೆಯಾಟಕ್ಕೆ ಅವರು ನಿರುತ್ತರರಾದರು. ಲಂಕಾ ತಂಡ 33.1 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 169 ರನ್ ಬಾರಿಸಿ ಗೆಲುವು ಕಂಡಿತು.
ಇದನ್ನೂ ಓದಿ : World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್ಗೆ ವೆಸ್ಟ್ ಇಂಡೀಸ್ ತಂಡ ಇಲ್ಲ!
ಶ್ರೀಲಂಕಾ ಪರ ಬೌಲಿಂಗ್ನಲ್ಲಿ ಮಧುಶಂಕಾ ಹೊಸ ಚೆಂಡಿನೊಂದಿಗೆ ಮಿಂಚಿದರಲ್ಲದೆ, ನಾಯಕ ದಸುನ್ ಶನಕಾ ಅವರ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು. ಜಿಂಬಾಬ್ವೆಯ ನಾಲ್ಕನೇ ವಿಕೆಟ್ ಜೋಡಿ ಸೀನ್ ವಿಲಿಯಮ್ಸ್ ಮತ್ತು ಸಿಕಂದರ್ ರಾಜಾ ಸ್ವಲ್ಪ ಪ್ರತಿರೋಧ ಒಡ್ಡಿದರೂ ಪ್ರಯೋಜನ ಆಗಲಿಲ್ಲ. ಆದರೆ, ಕೆಲ ಕ್ರಮಾಂಕದಲ್ಲ ಮಹೀಶ್ ತೀಕ್ಷನಾ ಎದುರಾಳಿ ತಂಡಕ್ಕೆ ಸ್ಪಿನ್ ಬೌಲಿಂಗ್ ಮೂಲಕ ಮಾರಕ ಎನಿಸಿಕೊಂಡರು.
Sri Lanka are #CWC23 bound 🤩🇱🇰 pic.twitter.com/DfV6N7TSKY
— ICC (@ICC) July 2, 2023
1996ರ ವಿಶ್ವ ಕಪ್ ವಿಜೇತರು ಈಗ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಿಂದ ಭಾರತದಲ್ಲಿ ನಡೆಯುವ ಟೂರ್ನಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿದ ಮೊದಲ ತಂಡ ಎನಿಸಿಕೊಂಡಿತು. ಸ್ಕಾಟ್ಲೆಂಡ್ ವಿರುದ್ಧ ನಡೆಯಲಿರುವ ಕೊನೆಯ ಸೂಪರ್ ಸಿಕ್ಸ್ ಪಂದ್ಯದ ಫಲಿತಾಂಶದ ಮೇಲೆ ಜಿಂಬಾಬ್ವೆಯ ಅವಕಾಶ ನಿಂತಿದೆ.
“ಕ್ವಾಲಿಫೈಯರ್ಗೆ ಪ್ರವೇಶಿಸುವುದು ಯಾವಾಗಲೂ ಕಠಿಣ. ಆದರೆ ನಮ್ಮದೇ ಉತ್ತಮ ಪ್ರದರ್ಶನ ನೀಡಿದರೆ ಅರ್ಹತೆ ಪಡೆಯುವ ಭರವಸೆ ಇತ್ತು. ಕೆಲವು ತಂಡಗಳು ನಡುವೆ ನಮಗೆ ಉತ್ತಮ ಹೋರಾಟವನ್ನು ನೀಡಿದವು, ಆದರೆ ಇನ್ನೂ ನಾವು ಉತ್ತಮ ತಂಡ ಎಂಬುದನ್ನು ಸಾಬೀತು ಪಡಿಸಿದೆವು ಎಂದು ಲಂಕಾ ನಾಯಕ ಶನಕಾ ಹೇಳಿದರು.