ಕೊಲಂಬೊ: ಭಾರತ ವಿರುದ್ಧದ ತವರಿನ ಟಿ20 ಸರಣಿ ಆರಂಭಕ್ಕೂ ಮುನ್ನವೇ ಆತಿಥೇಯ ಶ್ರೀಲಂಕಾ ತಂಡಕ್ಕೆ(Sri lanka Team) ಗಾಯದ ಬರೆ ಬಿದ್ದಿದೆ. ಒಂದೇ ದಿನದ ಅಂತರದಲ್ಲಿ ಇಬ್ಬರು ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ವೇಗಿಗಳಾದ ದುಷ್ಮಂತ ಚಮೀರಾ(dushmantha chameera) ಮತ್ತು ನುವಾನ್ ತುಷಾರ(Nuwan Thushara) ಗಾಯಗೊಂಡ ಆಟಗಾರರು.
ಉಭಯ ಆಟಗಾರರು ಕೂಡ ಅಭ್ಯಾಸ ನಡೆಸುವ ವೇಳೆ ಗಾಯಕ್ಕೆ ತುತ್ತಾದರು. ಫೀಲ್ಡಿಂಗ್ ಅಭ್ಯಾಸ ವೇಳೆ ನುವಾನ್ ತುಷಾರ ಬೆರಳು ಮುರಿತವಾಗಿದೆ. ತಂಡದ ಪ್ರಮುಖ ವೇಗಿಗಳು ಟೂರ್ನಿಯಿಂದ ಹೊರಬಿದ್ದಿರುವುದು ಲಂಕಾಗೆ ಭಾರೀ ಹಿನ್ನಡೆ ಉಂಟುಮಾಡಿದೆ. ನುವಾನ್ ತುಷಾರ ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ಪರ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನುವಾನ್ ತುಷಾರ ಅಲಭ್ಯತೆಯಲ್ಲಿ ಬದಲಿ ಆಟಗಾರನಾಗಿ ವೇಗಿ ದಿಲ್ಶನ್ ಮಧುಶಂಕ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ದುಷ್ಮಂತ ಚಮೀರಾ ಬದಲಿಯಾಗಿ ಅಸಿತ ಫರ್ನಾಂಡೋ ಅವರನ್ನು ಹೆಸರಿಸಲಾಗಿದೆ.
ಇದನ್ನೂ ಓದಿ Team India: ಲಂಕಾ ಸರಣಿಗೂ ಮುನ್ನವೇ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ
2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಲಂಕಾ ತಂಡಕ್ಕೆ ಮಾಜಿ ಆಟಗಾರ ಸನತ್ ಜಯಸೂರ್ಯ ಮಾರ್ಗದರ್ಶನ ನೀಡಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಚರಿತ್ ಅಸಲಂಕಾ ನಾಯಕತ್ವದಲ್ಲಿ ಜಾಫ್ನಾ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿ ಇವರಿಗೆ ನಾಯಕತ್ವ ಪಟ್ಟ ಕಟ್ಟಿದೆ. ಭಾರತ ಕೂಡ ನೂತನ ನಾಯಕ ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಆಡಲಿದೆ.
ಶ್ರೀಲಂಕಾ ಪರಿಕೃತ ತಂಡ
ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಜನಿತ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಚಾಮಿಂದು ವಿಕ್ರಮಸಿಂಗ, ಮಥೀಶ ಪತಿರಾನ, ದಿಲ್ಶನ್ ಮಧುಶಂಕ, ಅಸಿತ ಫೆರ್ನಾಂಡೋ, ಬಿನೂರ ಫೆರ್ನಾಂಡೋ.
ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ
ಶ್ರೀಲಂಕಾ(Sri Lanka series) ವಿರುದ್ಧದ ಟಿ20 ಸರಣಿಗೆ ಭಾರತ ತಂಡ(Team India) ಫೋಟೋಶೂಟ್ ಮಾಡಿದೆ. ಜೆರ್ಸಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲಾಗಿದೆ. ಜೆರ್ಸಿಯಲ್ಲಿ(Team India unveil new T20I jersey) 2 ಸ್ಟಾರ್‌ಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಟಿ20 ವಿಶ್ವಕಪ್ ವೇಳೆ ಒಂದು ಸ್ಟಾರ್ ಮಾತ್ರ ಇತ್ತು. ಇದೀಗ ಭಾರತ ತಂಡದ ಎರಡು ಟಿ20 ವಿಶ್ವಕಪ್ ಗೆಲುವಿನ ಸಂಕೇತವಾಗಿ ಈ ಎರಡು ಸ್ಟಾರ್‌ಗಳನ್ನು ಹಾಕಲಾಗಿದೆ.