ನವದೆಹಲಿ: ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ(Sri Lanka Tour) ಗುರುವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಏಕದಿನ ತಂಡದಿಂದ ಸಂಜು ಸ್ಯಾಮ್ಸನ್(Sanju Samson) ಮತ್ತು ಅಭಿಷೇಕ್ ಶರ್ಮ(Abhishek Sharma) ಅವರನ್ನು ಸರಣಿಗೆ ಆಯ್ಕೆ ಮಾಡದ್ದಕ್ಕೆ ಸಂಸದ ಶಶಿ ತರೂರ್(Member of Parliament Shashi Tharoor) ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸ್ಯಾಮ್ಸನ್ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅಭಿಷೇಕ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದರು. ಆದರೂ ಕೂಡ ಈ ಪ್ರತಿಭಾನ್ವಿತ ಆಟಗಾರರನ್ನು ಕೈಬಿಟ್ಟಿರುವುದು ನಿಜ್ಜಕ್ಕೂ ಬೇಸರದ ಸಂಗತಿ ಎಂದು ತರೂರ್(Shashi Tharoor) ಹೇಳಿದ್ದಾರೆ.
“ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಕುತೂಹಲಕಾರಿಯಾಗಿದೆ. ತಮ್ಮ ಕೊನೆಯ ಏಕದಿನದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಏಕದಿನಕ್ಕೆ ಆಯ್ಕೆ ಮಾಡಲಾಗಿಲ್ಲ. ಜಿಂಬಾಬ್ವೆ ಟಿ20 ಸರಣಿಯಲ್ಲಿ ವೇಗದ ಶತಕ ಬಾರಿಸಿದ್ದ ಅಭಿಷೇಕ್ ಶರ್ಮ ಕೂಡ ಆಯ್ಕೆಯಾಗಿಲ್ಲ. ಅಪರೂಪಕ್ಕೊಮ್ಮೆ ಆಯ್ಕೆಯಾದರು, ತಂಡಕ್ಕೆ ಶುಭವಾಗಲಿ,” ಎಂದು ತರೂರ್ ತಂಡದ ಆಟಗಾರರ ಪಟ್ಟಿಯನ್ನು ಹಂಚಿಕೊಂಡು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಟಿ20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್ಗೆ ಟಿ20 ನಾಯಕತ್ವ
ಏಕದಿನ ತಂಡ
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮೊದಲು ಭಾರತ ತಂಡ ಕೆಲವೇ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದೆ. ಹೆಚ್ಚಾಗಿ ಟಿ20 ಸರಣಿ ಮಾತ್ರ ಆಡಲಿದೆ. ಕಡಿಮೆ ಏಕದಿನ ಪಂದ್ಯ ಇರುವ ಕಾರಣ ಅನುಭವಿ ಆಟಗಾರರು ಈ ಪ್ರವಾಸದಲ್ಲಿ ಪಾಲ್ಗೊಳ್ಳಬೇಕು ಎಂದು ನೂತನ ಕೋಚ್ ಗೌತಮ್ ಗಂಭೀರ್ ಖಡಕ್ ಎಚ್ಚರಿಕೆ ನೀಡಿದ ಕಾರಣ ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಮ್ಮ ವಿಶ್ರಾಂತಿ ಮೊಟಕುಗೊಳಿಸಿ ತಂಡಕ್ಕೆ ಮರಳಿದ್ದಾರೆ.
ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್ 1ರದ ಬದಲಾಗಿ ಆಗಸ್ಟ್ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್ 4 ಮತ್ತು 7ರಂದೇ ನಡೆಯಲಿದೆ.