Site icon Vistara News

World Cup 2023 : ಶ್ರೀಲಂಕಾ ತಂಡ ವಿಶ್ವ ಕಪ್​ ಕ್ವಾಲಿಫೈಯರ್​ ಟೂರ್ನಿಯ ಚಾಂಪಿಯನ್​

Srilanka Team

ಹರಾರೆ: ಭಾನುವಾರ ನಡೆದ 2023ರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಫೈನಲ್​ ಪಂದ್ಯದಲ್ಲಿ ಗೆದ್ದಿರುವ ಶ್ರೀಲಂಕಾ ತಂಡದ ಟ್ರೋಫಿ ಗೆದ್ದಿದೆ. ನೆದರ್ಲ್ಯಾಂಡ್ಸ್ ವಿರುದ್ಧ 128 ರನ್​ಗಳ ಸುಲಭ ಜಯ ಗಳಿಸಿದ ಲಂಕಾ ಬಳಗ ಪ್ರಶಸ್ತಿ ಗೆದ್ದು ಸಂಭ್ರಮಸಿತು. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್​ಗೆ ಎರಡೂ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿರುವ ಮುಖ್ಯ ಪಂದ್ಯಾವಳಿಗೆ ಉಭಯ ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಆದರೆ ಶ್ರೀಲಂಕಾ ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದುಕೊಂಡಿತು. ಅಲ್ಲದೆ, ನೆದರ್ಲ್ಯಾಂಡ್ಸ್​ ತಂಡವೂ ಅರ್ಹತೆ ಪಡೆದುಕೊಂಡಿತು.

ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 47.5 ಓವರ್​ಗಳಿಗೆ 233 ರನ್​ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ನೆದರ್ಲ್ಯಾಂಡ್ಸ್ 23.3 ಓವರ್​ಗಳಿಗೆ 105 ರನ್​ಬಾರಿಸಿ ಆಲ್​ಔಟ್​ ಆಯಿತು. ಮಹೀಶ್​ ತೀಕ್ಷಣಾ 31 ರನ್​ಗಳನ್ನು ನೀಡಿ 4 ವಿಕೆಟ್​ ಉರುಳಿಸಿದರೆ ದಿಲ್ಯಶನ್​ ಮದುಶಂಕಾ 18 ರನ್​ಗಳಿಗೆ 3 ವಿಕೆಟ್​ ಪಡೆಯುವ ಮೂಲಕ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ : Ashes 2023 : ಮೂರನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ತಂಡಕ್ಕೆರೋಚಕ ಜಯ

ಮೊದಲ ಗುರಿ ಅರ್ಹತೆ ಪಡೆಯುವುದಾಗಿತ್ತು ಮತ್ತು ನಾವು ಅದನ್ನು ಮಾಡಿದ್ದೇವೆ. ಎರಡನೆಯದು ಪಂದ್ಯಾವಳಿಯನ್ನು ಗೆಲ್ಲುವುದು ಮತ್ತು ಅದೃಷ್ಟವಶಾತ್ ನಾವು ಎಲ್ಲವನ್ನೂ ಮಾಡಿದ್ದೇವೆ. ನಾವು ಸಂತೋಷದಿಂದ ಮನೆಗೆ ಹೋಗಬಹುದು ಎಂದು ಶ್ರೀಲಂಕಾ ಕೋಚ್ ಕ್ರಿಸ್ ಸಿಲ್ವರ್ವುಡ್ ಗೆಲುವಿನ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್​ಗೆ ಹೆಚ್ಚು ಪೂರಕವಾಗಿದ್ದ ಹರಾರೆ ಪಿಚ್​​ನಲ್ಲಿ ಶ್ರೀಲಂಕಾ ತಂಡವನ್ನು ದೊಡ್ಡ ಮೊತ್ತವನ್ನು ಪೇರಿಸಲು ವಿಫಲಗೊಂಡಿತು. ಸಹನ್​ ಅರ್ಚಿಗೆ 57 ಅರ್ಧ ಶತಕ ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಕುಸಾಲ್​ ಮೆಂಡಿಸ್​ 47 ರನ್​ ಕೊಡುಗೆ ಕೊಟ್ಟರೆ ಚರಿತ್​ ಅಸಲಂಕಾ 36 ರನ್ ಬಾರಿಸಿದರು. ಕೊನೆಯಲ್ಲಿ ವಾನಿಂದು ಹಸರಂಗ 21 ಎಸೆತಗಳಿಗೆ 29 ರನ್​ ಕೊಡುಗೆ ಕೊಟ್ಟರು.

ಗುರಿಯನ್ನು ಬೆನ್ನಟ್ಟಲು ಹೊರಟ ನೆದರ್ಲ್ಯಾಂಡ್ಸ್​ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮ್ಯಾಖ್ಸ್ ಒ ಡೌಡ್​ 33 ರನ್​ ಬಾರಿಸಿದರು. ಆದರೆ, ಅವರ ಬ್ಯಾಟಿಂಗ್ ನಿಧಾನಗತಿಯಿಂದ ಕೂಡಿತ್ತು. ಲೋಗನ್​ ವ್ಯಾನ್​ ಬೀಕ್​ ಎಂಟನೇ ಕ್ರಮಾಂಕದಲ್ಲಿ 20 ರನ್​ ಗಳಿಸಿದ್ದರು ಬಿಟ್ಟರೆ ಉಳಿದವರು ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡರು.

Exit mobile version