ಕೊಲೊಂಬೊ: ಪ್ರಚಂಡ ಸ್ಪಿನ್ ಬೌಲರ್ಗಳನ್ನು ಕಂಡ ಕ್ರಿಕೆಟ್ ತಂಡದ ಶ್ರೀಲಂಕಾ. ಇಲ್ಲಿ ಹೊಸ ಹೊಸ ಸ್ಪಿನ್ನರ್ಗಳು ಬಂದು ದಾಖಲೆ ಸೃಷ್ಟಿಸುತ್ತಲೇ ಇರುತ್ತಾರೆ. ಅಂತೆಯೇ ಶ್ರೀಲಂಕಾ ತಂಡದ ಯುವ ಸ್ಪಿನ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗದಲ್ಲಿ 50 ವಿಕೆಟ್ ಉರುಳಿಸಿದ ಹೊಸ ಸಾಧನೆ ಮಾಡಿದ್ದಾರೆ. ಅವರೇ ಯುವ ಸ್ಪಿನ್ನರ್ ಪ್ರಭಾತ್ ಜಯಸೂರ್ಯ. ಐರ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಐದನೇ ದಿನ ಈ ಸಾಧನೆ ಮಾಡಿದ್ದಾರೆ.
ಗಾಲೆಯಲ್ಲಿ ನಡೆಯತ್ತಿರುವ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ನ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅವರನ್ನು 1 ರನ್ಗೆ ಔಟ್ ಮಾಡಿದ ಪ್ರಭಾತ್ ಜಯಸೂರ್ಯ 50 ವಿಕೆಟ್ಗಳ ಮೈಲುಗಲ್ಲು ದಾಟಿದರು. ಈ ಮೂಲಕ ಏಳನೇ ಟೆಸ್ಟ್ ಪಂದ್ಯದಲ್ಲಿ 50 ವಿಕೆಟ್ ಉರುಳಿಸಿದ ಸಾಧನೆ ಮಾಡಿದರು. ಈ ವೇಳೆ ಅವರು ವೆಸ್ಟ್ ಇಂಡೀಸ್ನ ಮಾಜಿ ಸ್ಪಿನ್ನರ್ ಆಲ್ಫ್ ವೆಲಂಟೈನ್ ಅವರು 8 ಪಂದ್ಯಗಳಲ್ಲಿ 50 ವಿಕೆಟ್ ಉರುಳಿಸಿ ಮಾಡಿದ್ದ ಸಾಧನೆಯನ್ನು ಅಳಿಸಿ ಹಾಕಿದರು.
31 ವರ್ಷದ ಪ್ರಭಾತ್ ಜಯಸೂರ್ಯ ಈ ಪಂದ್ಯಕ್ಕೆ ಮೊದಲುಇ 43 ವಿಕೆಟ್ ಉರುಳಿಸಿದ್ದರು. ಗಾಲೆಯಲ್ಲಿ ನಡೆದ ಹಣಾಹಣಿಯ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಕಬಳಿಸಿದ್ದ ಪ್ರಭಾತ್ ಎರಡನೇ ಇನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದ ತಕ್ಷಣ ವಿಶ್ವ ದಾಖಲೆ ಸೃಷ್ಟಿಸಿದರು.
ಇದನ್ನೂ ಓದಿ : Kuldeep Yadav | ಕಳೆದ ಆರು ಪಂದ್ಯಗಳಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್ ಸಾಧನೆ ಈ ರೀತಿ ಇದೆ
ಒಟ್ಟಾರೆಯಾಗಿ ಶ್ರೀಲಂಕಾದ ಸ್ಪಿನ್ನರ್ ಅತಿವೇಗದಲ್ಲಿ 50 ವಿಕೆಟ್ ಕಬಳಿಸಿದ ಬೌಲರ್ಗಳ ಜಂಟಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 1888ಲ್ಲಿ ಅವರು ಆರು ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಮೈಲುಗಲ್ಲು ದಾಟಿದ್ದರು. ಇಂಗ್ಲೆಂಡ್ ವೇಗಿ ಟಾಮ್ ರಿಚರ್ಡ್ಸನ್ ಹಾಗೂ ದಕ್ಷಿಣ ಆಫ್ರಿಕಾದ ವೆರೋನ್ ಫಿಲಾಂಡರ್ ಏಳು ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇವರೆಲ್ಲರೂ ವೇಗದ ಬೌಲರ್ಗಳಾಗಿದ್ದಾರೆ.