ಲಂಡನ್: ಇಂಗ್ಲೆಂಡ್ ತಂಡದ ಸ್ಟಾರ್ ಫುಟ್ಬಾಲ್(England Footballer) ಆಟಗಾರ ಡಿಲೆ ಆಲಿ(Dele Alli) ಅವರು ತಮ್ಮ ಬಾಲ್ಯದ ಕರಾಳ ಜೀವನದ ಕುರಿತ ಸಂಗತಿಯನ್ನು ತಿಳಿಸಿದ್ದು, ಕೇವಲ 6ನೇ ವಯಸ್ಸಿಗೆ ತನ್ನ ತಾಯಿಯ ಸ್ನೇಹಿತೆಯಿಂದಲೇ ನಿರಂತರ ಲೈಂಗಿಕ ಕಿರುಕಳ ಅನುಭವಿಸಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಬಾಲ್ಯದ ಕರಾಳ ದಿನವನ್ನು ಮೆಲುಕು ಹಾಕಿದ ಡಿಲೆ ಆಲಿ, 7ನೇ ವಯಸ್ಸಿಗೆ ಸಿಗರೇಟ್ ಸೇವನೆ, 8ನೇ ವರ್ಷಕ್ಕೆ ಡ್ರಗ್ಸ್ ಡೀಲಿಂಗ್ ಆರಂಭಿಸಿದೆ. ಇದಕ್ಕೆ ಕಾರಣ ತನ್ನ ತಾಯಿಯ ಕುಟಿತದ ಚಟ. ನನ್ನ ತಾಯಿ ಮದ್ಯದ ವ್ಯಸನಿಯಾಗಿದ್ದರು. ಹೀಗಾಗಿ ನನ್ನ ಬಗ್ಗೆ ಗಮನವಹಿಸಲು ತಾಯಿಗೆ ಸಾಧ್ಯವಾಗುತ್ತಿರಲಿಲ್ಲ. ತಾಯಿಯ ಸ್ನೇಹಿತೆ ನಮ್ಮ ಮನೆಯಲ್ಲೇ ತಂಗಿದ್ದರು. ಅವರು 6ನೇ ವಯಸ್ಸಿಗೆ ನನ್ನನ್ನು ಲೈಂಕಿಗವಾಗಿ ಬಳಸಿಕೊಳ್ಳಲು ಆರಂಭಿಸಿದರು. ಜತೆಗೆ ಮಧ್ಯ ಮತ್ತು ಡ್ರಗ್ಸ್ಗಳನ್ನು ನೀಡುತ್ತಿದ್ದರು. ತಾನು ಯಾವತ್ತೂ ಬಾಲ್ಯದ ಜೀವನವನ್ನು ನೆನೆಪಿಸಿಕೊಳ್ಳಲು ಇಷ್ಟಪಡುವುದಿಲ್ಲ” ಎಂದು ಹೇಳುವ ಮೂಲಕ ತಮ್ಮ ಬಾಲ್ಯದ ಕರಾಳ ಜೀವನದ ಘಟನೆಯನ್ನು ಬಿಚ್ಚಿಟ್ಟರು.
ಇದನ್ನೂ ಓದಿ 10 ಸಾವಿರ ಮಹಿಳೆಯರ ಜತೆ ಲೈಂಗಿಕ ಸಂಪರ್ಕ, ಅತ್ಯಾಚಾರ ಕೇಸಲ್ಲಿ ಸಿಕ್ಕಿಬಿದ್ದ ಫುಟ್ಬಾಲ್ ಆಟಗಾರನ ಹೇಳಿಕೆ!
“ಕುಟುಂಬದ ನಿರ್ಲಕ್ಷ್ಯಗಳಿಂದ ನಾನು ಏಕಾಂಗಿಯಾದೆ. ಹಣದ ಅವಶ್ಯಕತೆಗಾಗಿ ಫುಟ್ಬಾಲ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದೆ. ಆದರೆ ನನ್ನ ಬಾಳಿನಲ್ಲಿಯೂ ದೇವರು ಒಂದು ಮಹತ್ವದ ತಿರುವ ನೀಡಿದ. 12ನೇ ವಯಸ್ಸಿಗೆ ನನ್ನನ್ನು ಶ್ರೀಮಂತ ಕುಟುಂಬವೊಂದು ದತ್ತು ಪಡೆದುಕೊಂಡಿತು. ಇದು ನನ್ನ ಜೀವನದಲ್ಲಿ ನಡೆದ ಮಹತ್ವದ ತಿರುವು. ನನ್ನನ್ನು ಸರಿದಾರಿಗೆ ಬರಲು ಆ ಕುಟುಂಬ ಬಹಳ ಕಷ್ಟಪಟ್ಟಿತು. ಈ ಕುಟುಂಬ ನನ್ನನ್ನು ಅಂದು ದತ್ತು ತೆಗೆದುಕೊಳ್ಳದೇ ಹೋಗುತ್ತಿದ್ದರೆ ಇಂದು ನಾನು ಜೀವಂತವಾಗಿ ಇರುತ್ತಿದ್ದೇನೋ ಎಂದು ಊಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
27 ವಯಸ್ಸಿನ ಡಿಲೆ ಆಲಿ ಇಂದು ಬಹು ಬೇಡಿಕೆಯ ಫುಟ್ಬಾಲ್ ಆಟಗಾರನಾಗಿ ಗುರಿಸಿಕೊಂಡಿದ್ದಾರೆ. ಜತೆಗೆ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. 2018ರಲ್ಲಿ ವಿಶ್ವ ಕಪ್ನಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಈ ಆವೃತ್ತಿಯಲ್ಲಿ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಪಡೆದಿತ್ತು. ತಂಡ ಈ ಸಾಧನೆಯಲ್ಲಿ ಡಿಲೆ ಆಲಿ ಕೊಡುಗೆಯೂ ಅಪಾರವಾಗಿತ್ತು.