Site icon Vistara News

Team India : ಆರಂಭಿಕ ಬ್ಯಾಟರ್​​ಗಳು ಆಕ್ರಮಣಶೀಲತೆ ತೋರಬೇಕು; ಸೌರವ್​ ಗಂಗೂಲಿ ಸಲಹೆ

Starting batters should be aggressive; Sourav Ganguly's advice

ನವ ದೆಹಲಿ: ಭಾರತ ತಂಡ (Team India) ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ 2-1 ಅಂತರದಿಂದ ಸೋತ ಬಳಿಕ ಮುಂದಿನ ವಿಶ್ವ ಕಪ್​ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನು ಕೆಲವೇ ತಿಂಗಳು ಮಾತ್ರ ಟೂರ್ನಿ ಆರಂಭಗೊಳ್ಳುವುದಕ್ಕೆ ಬಾಕಿ ಇದೆ. ಹೀಗಾಗಿ ಯಾವ ರೀತಿಯ ತಂಡವನ್ನು ರಚಿಸಬೇಕು ಎಂಬ ಉದ್ದೇಶದೊಂದಿಗೆ ಟೀಮ್​ ಇಂಡಿಯಾದೊಳಗೆ ವಿಮರ್ಶೆಗಳು ನಡೆಯುತ್ತಿವೆ. ಅದೇ ರೀತಿ ಹಿರಿಯ ಕ್ರಿಕೆಟಿಗರು ಕೂಡ ಸಲಹೆಗಳನ್ನು ನೀಡುತ್ತಿದ್ದಾರೆ. ಏತನ್ಮಧ್ಯೆ, ಹಿರಿಯ ಆಟಗಾರರು ಕೂಡ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಭಾರತ ತಂಡ ಯಾವ ರೀತಿಯ ಆಡಿದರೆ ವಿಶ್ವ ಕಪ್​ನಲ್ಲಿ ಗೆಲ್ಲಬಹುದು ಎಂದು ಹೇಳಿದ್ದಾರೆ. ಅವರ ಪ್ರಕಾರ ಆರಂಭಿಕ ಬ್ಯಾಟರ್​ಗಳು ಆಕ್ರಮಣಶೀಲರಾಗಿ ಆಡಿದರೆ ಗೆಲುವು ಸುಲಭ ಎಂದಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ಆಕ್ರಮಣಶೀಲತೆ ಹೆಚ್ಚಬೇಕು. ಪ್ರಮುಖವಾಗಿ ಅಕ್ರ ಕ್ರಮಾಂಕದ ಆಟಗಾರರು ಬಿಡುಬೀಸಿನ ಬ್ಯಾಟಿಂಗ್ ನಡೆಸಬೇಕು. ಯಾಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಭಾರತ ತಂಡ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್​ ಅವರಂಥ ಆಟಗಾರರನ್ನು ಹೊಂದಿದ್ದಾರೆ. ಹೀಗಾಗಿ ಉತ್ತಮ ಆರಂಭ ಕೊಟ್ಟರೆ ದೊಡ್ಡ ಮೊತ್ತ ಪೇರಿಸಿ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹುಟ್ಟುಹಬ್ಬದ ಸಂಭ್ರಮದಲ್ಲಿ ಸೌರವ್ ಗಂಗೂಲಿ

ಒತ್ತಡ ನಿರ್ವಹಣೆಯೇ ದೊಡ್ಡ ಸವಾಲು. ಅದೇ ರೀತಿ ಪಂದ್ಯಕ್ಕೆ ಪೂರಕವಾಗಿ ಆಡುವುದನ್ನು ಕೂಡ ರೂಢಿಸಿಕೊಳ್ಳಬೇಕು. ಭಾರತ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ಅವರೆಲ್ಲರೂ ಮುಂದಿನ ಹಂತಕ್ಕೆ ತೇರ್ಗಡೆ ಹೊಂದುವ ನಿಟ್ಟಿನಲ್ಲಿ ಆಡಬೇಕು. ದೊಡ್ಡ ಟೂರ್ನಿಗೆ ಹೇಗೆ ಸಿದ್ದಗೊಳ್ಳುತ್ತಾರೆ ಎಂಬ ಮೇಲೆ ಅವರ ಪ್ರದರ್ಶನ ನಿಂತಿದೆ ಎಂದು ಹೇಳಿದರು.

ಇದೇ ವೇಳೆ ಅವರು ಪೃಥ್ವಿ ಶಾ ಟೀಮ್​ ಇಂಡಿಯಾಗೆ ಮರಳಬಹುದು ಎಂಬುದಾಗಿ ಭವಿಷ್ಯ ನುಡಿದರು. ಅವರು ಭಾರತ ತಂಡದ ಪರವಾಗಿ ಆಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಹಾಗೂ ಟೀಮ್​ ಮ್ಯಾನೇಜ್ಮೆಂಟ್ ಅವರ ಪ್ರದರ್ಶನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ ಎಂದು ಹೇಳಿದರು.

ಭಾರತ ತಂಡದ ಕಳೆದ 10 ವರ್ಷದಿಂದ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. 2016 ಟಿ20 ವಿಶ್ವ ಕಪ್​, 20221 ಹಾಗೂ 2022ರ ಟಿ20 ವಿಶ್ವ ಕಪ್​ನಲ್ಲೂ ಭಾರತ ತಂಡ ಯಶಸ್ಸು ಕಂಡಿಲ್ಲ. 2019ರ ಏಕ ದಿನ ವಿಶ್ವ ಕಪ್​ನ ಸೆಮಿಫೈನಲ್​ನಲ್ಲಿ ಟೂರ್ನಿಯಿಂದ ಹೊರ ಬಿದ್ದಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್​ನಲ್ಲೂ ಪಾಕಿಸ್ತಾನಕ್ಕೆ ಭಾರತ ತಂಡ ಮಣಿದಿತ್ತು. 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ ಭಾರತ ತಂಡ ಪರಾಭವಗೊಂಡಿತ್ತು.

Exit mobile version