Site icon Vistara News

Ashes 2023 : ಬ್ರಾಡ್ಮನ್​, ಸಚಿನ್​ ದಾಖಲೆ ಮುರಿದ ಸ್ಟೀವ್​ ಸ್ಮಿತ್​! ಏನದು ಹೊಸ ಮೈಲುಗಲ್ಲು?

Steve smith

ಲಂಡನ್​ : ಲಾರ್ಡ್ಸ್​​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ (Ashes 2023) 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ತೇಲಿಯಾ ತಂಡದ ಸ್ಟಾರ್​ ಬ್ಯಾಟರ್​ ಸ್ಟೀವ್ ಸ್ಮಿತ್ (Steve Smith) ತಮ್ಮ ವೈಯಕ್ತಿಕ 32ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ 416 ರನ್ ಗಳಿಸಲು ನೆರವಾದರು. ಸ್ಮಿತ್ 184 ಎಸೆತಗಳಲ್ಲಿ 110 ರನ್ ಗಳಿಸಿ ಔಟಾದರು. ಈ ಪ್ರಮುಖ ಇನಿಂಗ್ಸ್​ ವೇಳೆ ಅವರು ಕ್ರಿಕೆಟ್ ದಂತಕತೆ ಸರ್​ ಬ್ರಾಡ್ಮನ್​ ಹಾಗೂ ರನ್​ ಮಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಗಳನ್ನು ಮುರಿದರು. ಕಲಾತ್ಮಕ ಬ್ಯಾಟರ್​ ಸ್ಮಿತ್​ಗೆ ಇದು 99 ನೇ ಪಂದ್ಯ ಹಾಗೂ 174 ನೇ ಇನ್ನಿಂಗ್ಸ್. ಇಷ್ಟರೊಳಗೆ ಅವರು 32 ಟೆಸ್ಟ್ ಶತಕಗಳನ್ನು ಬಾರಿಸುವ ಮೂಲಕ ಸಾಧನೆ ಮಾಡಿದ್ದಾರೆ. ಅತಿವೇಗದಲ್ಲಿ ಗರಿಷ್ಠ ಶತಕಗಳನ್ನ ಬಾರಿಸಿ ದಾಖಲೆ ಮಾಡಿದ್ದಾರೆ.

ಸ್ಟೀವ್ ಸ್ಮಿತ್​​ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 168 ಟೆಸ್ಟ್ ಪಂದ್ಯಗಳಲ್ಲಿ 41 ಶತಕಗಳನ್ನು ಗಳಿಸಿರುವ ರಿಕಿ ಪಾಂಟಿಂಗ್ ಮಾತ್ರ ಈಗ ಸ್ಮಿತ್ ಅವರಿಗಿಂತ ಮುಂದಿದ್ದಾರೆ. ಸ್ಮಿತ್ ಸಚಿನ್ ತೆಂಡೂಲ್ಕರ್ ಅವರನ್ನು ಏಕೈಕ ಎದುರಾಳಿಯ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದು ಆಸ್ಟ್ರೇಲಿಯಾ ವಿರುದ್ಧ ಅವರ 12 ನೇ ಶತಕವಾಗಿದ್ದರೆ, ತೆಂಡೂಲ್ಕರ್ ಅದೇ ಎದುರಾಳಿಯ ವಿರುದ್ಧ 11 ಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಇಂಗ್ಲೆಂಡ್ನ ಲೆಜೆಂಡರಿ ಬ್ಯಾಟರ್​​ ಜ್ಯಾಕ್ ಹಾಬ್ಸ್ ಅವರೊಂದಿಗೆ ಸ್ಮಿತ್ ಈ ಪಟ್ಟಿಯಲ್ಲಿ ಸಮಾನ ಸ್ಥಾನ ಹೊಂದಿದ್ದಾರೆ.

ಇದನ್ನೂ ಓದಿ : Nathan Lyon: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ನಥಾನ್​ ಲಿಯೋನ್

ಸುನಿಲ್ ಗವಾಸ್ಕರ್ ಮತ್ತು ಬ್ರಾಡ್ಮನ್ ಮಾತ್ರ ಈಗ ಸ್ಮಿತ್​ ಅವರಿಗಿಂತ ಮುಂದಿದ್ದಾರೆ. ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ 13 ಶತಕಗಳನ್ನು ಗಳಿಸಿದ್ದರೆ, ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 19 ಶತಕಗಳನ್ನು ಗಳಿಸಿದ್ದಾರೆ. ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 32ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ಹೊಂಚು ಹಾಕಿರುವ ಇಂಗ್ಲೆಂಡ್​ ವಿರುದ್ಧ 416 ರನ್​ಗಳ ಬೃಹತ್​ ಮೊತ್ತ ಪೇರಿಸಲು ಆಸ್ಟ್ರೇಲಿಯಾ ತಂಡಕ್ಕೆ ನೆರವಾದರು.

ವಾರೆನ್ ಬಾರ್ಡ್ಸ್ಲೆ (1912, 1926), ಬ್ರಾಡ್ಮನ್ (1930, 1938) ಮತ್ತು ಬಿಲ್ ಬ್ರೌನ್ (1934, 1938) ಅವರಂತೆಯೇ ಎರಡು ಬಾರಿ ಲಾರ್ಡ್ಸ್ ಆನರ್ಸ್ ಬೋರ್ಡ್​​ನಲ್ಲಿ ತಮ್ಮ ಹೆಸರು ಬರೆಸಿಕೊಂಡ ಆಸ್ಟ್ತೇಲಿಯಾದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ 1938 ರ ಬಳಿಕ ಸ್ಮಿತ್ ಏಕೈಕ ಆಟಗಾರ.

ನೇಥನ್​ ಲಿಯಾನ್ ವಿನೂತನ ದಾಖಲೆ

ಇಂಗ್ಲೆಂಡ್(England vs Australia)​ ವಿರುದ್ಧ ಸಾಗುತ್ತಿರುವ ಆ್ಯಶಸ್​ ಸರಣಿಯ(Ashes 2023) ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ತಂಡದ ಸ್ಪಿನ್​ ಬೌಲರ್​ ನೇಥನ್​ ಲಿಯಾನ್​ ​(Nathan Lyon) ಅವರು ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತವಾಗಿ ನೂರು ಟೆಸ್ಟ್​ ಪಂದ್ಯ ಆಡಿದ ವಿಶ್ವದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್​​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.​

2011ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ 35 ವರ್ಷದ ಲಿಯಾನ್​​ ಇದುವರೆಗೆ ಆಸೀಸ್​ ಪರ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.99ರ ಸರಾಸರಿಯಲ್ಲಿ 495* ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಶೇನ್ ವಾರ್ನ್ (708 ವಿಕೆಟ್) ಮತ್ತು ಗ್ಲೆನ್ ಮೆಕ್‌ಗ್ರಾತ್ (563 ವಿಕೆಟ್) ಬಳಿಕ ಅತ್ಯಧಿಕ ವಿಕೆಟ್​ ಪಡೆದ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

Exit mobile version