ಕೊಲೊಂಬೊ: ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಶುಕ್ರವಾರ, ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ (೧೦೯) ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಕಳೆದ ೧೮ ತಿಂಗಳ ಬಳಿಕ ಟೆಸ್ಟ್‌ನಲ್ಲಿ ಮೂರಂಕಿ ಮೊತ್ತ ದಾಟಿದ್ದಾರೆ.
ಸ್ಟೀವ್ ಸ್ಮಿತ್ ಅವರಿಗೆ ಇದು ೨೮ನೇ ಟೆಸ್ಟ್ ಶತಕವಾಗಿದ್ದು, ಏಷ್ಯಾ ಖಂಡದಲ್ಲಿ ೫ ಶತಕಗಳನ್ನು ಬಾರಿಸಿದಂತಾಗಿದೆ. ಏತನ್ಮಧ್ಯೆ, ಭಾರತ ತಂಡದ ರನ್ ಮಾಂತ್ರಿಕ ವಿರಾಟ್ ಕೊಹ್ಲಿ ಎಂದು ಶತಕ ಬಾರಿಸುವುದು ಯಾವಾಗ ಎಂಬ ಸೋಶಿಯಲ್ ಮೀಡಿಯಾ ಚರ್ಚೆ ಆರಂಭಗೊಂಡಿದೆ. ವಿರಾಟ್ ಕೊಹ್ಲಿ ೨೦೧೯ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕೊತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್‌ನಲ್ಲಿ ಕೊನೇ ಟೆಸ್ಟ್ ಶತಕ ಬಾರಿಸಿದ್ದರು. ಅಲ್ಲಿಂದ ಮೂರು ವರ್ಷಗಳು ಕಳೆದರೂ ಕೊಹ್ಲಿಯ ಬ್ಯಾಟ್‌ನಿಂದ ಮೂರಂಕಿ ಮೊತ್ತ ಮೂಡಿ ಬರುತ್ತಿಲ್ಲ. ಒಂದು ಸಮಯದಲ್ಲಿ ಬ್ಯಾಟಿಂಗ್ ಮೂಲಕವೇ ಎಲ್ಲರಿಗೂ ಉತ್ತರ ಕೊಡುತ್ತಿದ್ದ ವಿರಾಟ್ ಕೊಹ್ಲಿ ಇದೀಗ ಟೀಕಾಕಾರರಿಗೆ ಆಹಾರವಾಗಿದ್ದಾರೆ.
ಆಸ್ಟ್ರೇಲಿಯಾದ ದಿನದ ಗೌರವ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಅಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ ೫ ವಿಕೆಟ್ ನಷ್ಟಕ್ಕೆ ೨೯೮ ರನ್ ಬಾರಿಸಿದೆ. ಮರ್ನಸ್ ಲಾಬುಶೇನ್ (೧೦೪) ಹಾಗೂ ಸ್ಟೀವ್ ಸ್ಮಿತ್ (೧೦೯) ಶತಕ ಬಾರಿಸಿದ್ದಾರೆ. ಆರಂಭಿಕ ಆಟಗಾರ ಉಸ್ಮಾನ್ ಖವಾಜ ೩೭ ರನ್‌ಗಳಿಗೆ ಔಟಾದರೆ, ಡೇವಿಡ್ ವಾರ್ನರ್ ೫ ರನ್‌ಗೆ ವಿಕೆಟ್ ಒಪ್ಪಿಸಿದರು. ಟ್ರಾವಿಸ್ ಹೆಡ್ ೧೨ ರನ್‌ಗಳಿಗೆ ಔಟಾದರೆ, ಕ್ಯಾಮೆರೂನ್ ಗ್ರೀನ್ ೪ ರನ್ ಹಾಗೂ ಅಲೆಕ್ಸ್ ಕ್ಯೇರಿ ೧೬ ರನ್ ಬಾರಿಸಿ, ಸ್ಟೀವ್ ಸ್ಮಿತ್ ಜತೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: ಮರ್ನಸ್ ಲ್ಯಾಬುಶೇನ್ ೧೦೪, ಸ್ಟೀವ್ ಸ್ಮಿತ್ ೧೦೯*; ;ಪ್ರಬತ್ ಜಯಸೂರ್ಯ ೯೦ಕ್ಕೆ೩)
ಇದನ್ನೂ ಓದಿ: ಶ್ರೀಲಂಕಾ ಮಹಿಳೆಯರು Whitewash, ಭಾರತದ ವನಿತೆಯರಿಗೆ ಭರ್ಜರಿ ಜಯ