Site icon Vistara News

WTC Final 2023: ಭಾರತದ ಸ್ಪಿನ್ನರ್​ಗಳ ಬಗ್ಗೆ ಎಚ್ಚರ ಅಗತ್ಯ; ಸ್ಟೀವನ್​ ಸ್ಮಿತ್​

wtc final

ಲಂಡನ್​: ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯವನ್ನಾಡಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಉಭಯ ತಂಡಗಳ ಈ ಪ್ರಶಸ್ತಿ ಸಮರ ಜೂನ್​ 7 ರಿಂದ ಲಂಡನ್​ನ ಓವಲ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಇತ್ತಂಡಗಳ ಆಟಗಾರರು ಲಂಡನ್​ ತಲುಪಿ ಅಭ್ಯಾಸ ನಿರತರಾಗಿದ್ದಾರೆ. ಆದರೆ ಪಂದ್ಯಕ್ಕೂ ಮುನ್ನವೇ ಸ್ವೀವನ್​ ಸ್ಮಿತ್​ ಅವರು ಭಾರತದ ಸ್ಪಿನ್​ ಬೌಲಿಂಗ್​ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಆಡಲಾದ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸೆರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಸರಣಿ ಸೋಲು ಕಂಡಿತ್ತು. ಈ ಸರಣಿಯಲ್ಲಿ ಭಾರತದ ಸ್ಪಿನ್ನರ್​ಗಳು ಅಮೋಘ ಪ್ರದರ್ಶನ ತೋರುವ ಮೂಲಕ ಆಸೀಸ್​ ಬೌಲರ್​ಗ ಹುಟ್ಟಡಗಿಸಿದ್ದರು. ಇದೇ ಕಾರಣಕ್ಕೆ ಸ್ಟೀವನ್​ ಸ್ಮಿತ್​ ಅವರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯದಲ್ಲಿಯೂ ಭಾರತದ ಸ್ಪಿನ್ನರ್​ಗಳ ಎದುರು ಎಚ್ಚರಿಕೆ ಆಟ ಅಗತ್ಯವೆಂದು ಹೇಳಿದ್ದಾರೆ.

“ಓವಲ್ ಪಿಚ್​ ಕೆಲವೊಮ್ಮೆ ಸ್ಪಿನ್‌ ಬೌಲಿಂಗ್​ಗೆ ಹೆಚ್ಚಿನ ನೆರವು ನೀಡುವುದನ್ನು ನಾನು ಗಮನಿಸಿದ್ದೇನೆ. ಇದು ಆ್ಯಶಸ್ ಸರಣಿ ಆಡುವಾಗ ಅನುಭವಕ್ಕೆ ಬಂದಿದೆ. ಒಂದೊಮ್ಮೆ ಸ್ಪಿನ್​ ಸ್ನೇಹಿಯಾದರೆ ಆಗ ಭಾರತದ ಸ್ಪಿನ್ನರ್​ಗಳ ಬಗ್ಗೆ ವಿಶೇಷ ಗಮನ ಇಡಬೇಕಾಗುತ್ತದೆ. ರವೀಂದ್ರ ಜಡೇಜಾ, ಆರ್​. ಅಶ್ವಿನ್​ ಅವರಂತಹ ಶ್ರೇಷ್ಠ ಸ್ಪಿನ್ನರ್​ಗಳ ಎದುರುವುದು ಅಷ್ಟು ಸುಲಭದ ಮಾತಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ WTC Final 2023: ಟೆಸ್ಟ್ ವಿಶ್ವಕಪ್​ಗೆ ಆಯ್ಕೆಯಾದ ಅಂಪೈರ್​ಗಳು ಯಾರು? ಇಲ್ಲಿದೆ ಮಾಹಿತಿ

ಉಭಯ ತಂಡಗಳು

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್​ವುಡ್​, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

ಮೀಸಲು ಆಟಗಾರರು: ಮಿಚೆಲ್ ಮಾರ್ಷ್, ಮ್ಯಾಥ್ಯೂ ರೆನ್ಶಾ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್).

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

Exit mobile version