ಲಾರ್ಡ್ಸ್: ಇಲ್ಲಿ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಆ್ಯಶಸ್ ಟೆಸ್ಟ್(The Ashes, 2023) ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್(Steven Smith) ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಅತಿ ಕಡಿಮೆ ಟೆಸ್ಟ್ ಇನಿಂಗ್ಸ್ನಲ್ಲಿ ವೇಗವಾಗಿ 9 ಸಾವಿರ ರನ್ ಪೂರೈಸಿದ ಆಟಗಾರರ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಜತೆಗೆ ವಿಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ(Brian Lara) ಅವರನ್ನು ಹಿಂದಿಕ್ಕಿದ್ದಾರೆ.
ಲಾರ್ಡ್ಸ್ ಮೈದಾನಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ ಸದ್ಯ 200ರ ಗಡಿ ದಾಟಿ ಉತ್ತಮ ರನ್ ಕಳೆಹಾಕುತ್ತಿದೆ. ಸ್ಟೀವನ್ ಸ್ಮಿತ್ ಅರ್ಧಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 9 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ದ್ವಿತೀಯ ಆಟಗಾರ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಜತೆಗೆ ಅತಿ ಕಡಿಮೆ ಪಂದ್ಯಗಳನ್ನು ಆಡಿ ಈ ದಾಖಲೆ ಬರೆದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಬರೆದರು. ಇದುವರೆಗೆ ಈ ದಾಖಲೆ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿತ್ತು. ಅವರು 101 ಟೆಸ್ಟ್ ಪಂದ್ಯ ಆಡಿ 9 ಸಾವಿರ ರನ್ ಪೂರ್ತಿಗೊಳಿಸಿದ್ದರು. ಆದರೆ ಸ್ಮಿತ್ ಕೇವಲ 99 ಪಂದ್ಯ ಆಡಿ ಈ ದಾಖಲೆಯನ್ನು ಮುರಿದಿದ್ದಾರೆ.
Only Kumar Sangakkara has reached 9000 Test runs in fewer innings than Steve Smith 🔥#ENGvAUS | #Ashes pic.twitter.com/g8FPQrO386
— ESPNcricinfo (@ESPNcricinfo) June 28, 2023
ಅತಿ ಕಡಿಮೆ ಇನಿಂಗ್ಸ್ನಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದ ಸಾಧಕರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(Kumar Sangakkara) ಅವರಿಗೆ ಅಗ್ರಸ್ಥಾನ. ಅವರು 172 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಮಿತ್ 174 ಇನಿಂಗ್ಸ್ನಲ್ಲಿ 9 ಸಾವಿರ ರನ್ ಬಾರಿಸಿದ್ದಾರೆ. ರಾಹುಲ್ ಡ್ರಾವಿಡ್(Rahul Dravid) ಅವರು 176 ಇನಿಂಗ್ಸ್ನಲ್ಲಿ ಈ ಮೊತ್ತ ಕಲೆಹಾಕಿ ಮೂರನೇ ಸ್ಥಾನ ಪಡೆದಿದ್ದಾರೆ. ಲಾರಾ ಮತ್ತು ರಿಕಿ ಪಾಂಟಿಂಗ್(Ricky Ponting) ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ WTC Final 2023: 87 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್-ಹೆಡ್ ಜೋಡಿ
87 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದ ಸ್ಮಿತ್-ಹೆಡ್ ಜೋಡಿ
ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದಿದ್ದ ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು 87 ವರ್ಷಗಳ ಹಿಂದಿನ ಜತೆಯಾಟದ ದಾಖಲೆಯೊಂದನ್ನು ಮುರಿದಿದ್ದರು. ಈ ಜೋಡಿ 285 ರನ್‌ಗಳ ಬೃಹತ್ ಜತೆಯಾಟ ನಡೆಸಿ 1936ರಲ್ಲಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್ ಅವರು ನಾಲ್ಕನೇ ವಿಕೆಟ್ಗೆ ಭಾರತದ ವಿರುದ್ಧವೇ 266 ರನ್‌ಗಳ ಜತೆಯಾಟ ನಡೆಸಿದ ದಾಖಲೆಯನ್ನು ಮುರಿದ್ದರು.
ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್ ಅವರು ಈ ದಾಖಲೆ ನಿರ್ಮಿಸುವ ಮೊದಲು ಇದೇ ಮೈದಾನದಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಮತ್ತು ಆರ್ಚೀ ಜಾಕ್ಸನ್ ಜೋಡಿ 1930ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ವಿಕೆಟ್ 243 ರನ್ ಗಳಿಸಿದ್ದರು.