Site icon Vistara News

Stuart Broad: ಸ್ಟುವರ್ಟ್​ ಬ್ರಾಡ್​ಗೆ ಅಭಿನಂದನೆ ಸಲ್ಲಿಸಿದ ಯುವರಾಜ್​ ಸಿಂಗ್​

stuart broad and yuvraj singh 2007 t20 world cup

ಲಂಡನ್​: ಆ್ಯಶಸ್​ ಸರಣಿಯ ಅಂತಿಮ ಟೆಸ್ಟ್​ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಂಗ್ಲೆಂಡ್​ ತಂಡದ ಪ್ರಧಾನ ವೇಗಿ ಸ್ಟುವರ್ಟ್​ ಬ್ರಾಡ್(Stuart Broad) ಅವರಿಗೆ ಯುವರಾಜ್​ ಸಿಂಗ್​(Yuvraj Singh) ಅಭಿನಂದನೆ ಸಲ್ಲಿಸಿದ್ದಾರೆ. ಬ್ರಾಡ್​ ಅವರ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದರೂ ಯುವಿ ಅವರು ಬ್ರಾಡ್​ ಅವರನ್ನು ಲೆಜೆಂಡ್ ಆಟಗಾರ ಎಂದು ಗುಣಗಾನ ಮಾಡಿದ್ದಾರೆ.

​ಟ್ವೀಟ್​ ಮೂಲಕ ಬ್ರಾಡ್​ ಅವರ ಸಾಧನೆಯನ್ನು ಕೊಂಡಾಡುವ ಮೂಲಕ ಅವರ ನಿವೃತ್ತ ಕ್ರಿಕೆಟ್​ ಬದುಕಿಗೆ ಶುಭಹಾರೈಸಿದ್ದಾರೆ. “ಟೆಸ್ಟ್ ಕ್ರಿಕೆಟ್​ನ ಅತ್ಯಂತ ಶ್ರೇಷ್ಠ ಬೌಲರ್​ಗಳಲ್ಲಿ ನೀವು ಕೂಡ ಒಬ್ಬರು. ರೆಡ್​ ಬೌಲ್​ ಕ್ರಿಕೆಟ್​ನಲ್ಲಿ ನಿಮ್ಮ ಸಾಧನೆ ಅದ್ಭುತ. ನಿಜವಾದ ದಂತಕಥೆ. ನಿಮ್ಮ ಪಯಣ ಮತ್ತು ಸಂಕಲ್ಪವು ಸ್ಪೂರ್ತಿದಾಯಕವಾಗಿದೆ. ಮುಂದಿನ ಪಯಣಕ್ಕೆ ಶುಭವಾಗಲಿ” ಎಂದು ಯುವರಾಜ್​ ಶುಭಹಾರೈಸಿದ್ದಾರೆ.

ವಿದಾಯದ ಸಂದರ್ಭದಲ್ಲಿ ಯುವರಾಜ್​ ಸಿಂಗ್​ ಬಗ್ಗೆ ಬ್ರಾಡ್ ವಿಶೇಷವಾಗಿ ಮಾತನಾಡಿ, ಅಂದು ಯುವಿ ನನ್ನ ಓವರ್​ನಲ್ಲಿ 6 ಸಿಕ್ಸರ್​ ಬಾರಿಸದೇ ಹೋಗುತ್ತಿದ್ದರೆ ನಾನು ಕ್ರಿಕೆಟ್​ನಲ್ಲಿ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಬಾರಿಸಿದ ಸಿಕ್ಸರ್​ನಿಂದ ನನಗೆ​ ಕ್ರಿಕೆಟ್​ನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹುಟ್ಟಿಕೊಂಡಿತು. ಒಂದರ್ಥದಲ್ಲಿ ಅವರೂ ಕೂಡ ನನಗೆ ಸ್ಪೂರ್ತಿ ಎಂದು ಹೇಳಿದ್ದರು.

ಇದನ್ನೂ ಓದಿ Stuart Broad: ಯುವಿಯಿಂದ 6 ಸಿಕ್ಸರ್​ ಚಚ್ಚಿಸಿಕೊಂಡ ಸ್ಟುವರ್ಟ್​ ಬ್ರಾಡ್​ ಕ್ರಿಕೆಟ್​ಗೆ ವಿದಾಯ

ಟಿ20 ಇತಿಹಾಸದ ಮೊದಲ ವಿಶ್ವಕಪ್‌ ನಡೆದಿದ್ದು 2007ರಲ್ಲಿ.(2007 t20 world cup) ಈ ಕೂಟದಲ್ಲಿ ಹಲವು ಅಚ್ಚರಿಗಳು, ಮರೆಯಲಾಗದ ಘಟನೆಗಳು ನಡೆದವು. ಅದರಲ್ಲಿ ಯುವರಾಜ್‌ ಸಿಂಗ್‌ ಸತತ 6 ಸಿಕ್ಸರ್‌ಗಳನ್ನು ಬಾರಿಸಿದ್ದು ಅತ್ಯಂತ ಮಹತ್ವದ್ದು. ಇಂಗ್ಲೆಂಡ್‌ ವಿರುದ್ಧ ಅತ್ಯಂತ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತದ ಪರ 19ನೇ ಓವರ್‌ನಲ್ಲಿ ಯುವರಾಜ್‌ ಸಿಂಗ್​ ಅವರನ್ನು ಇಂಗ್ಲೆಂಡ್​ ನಾಯಕ ಆ್ಯಂಡ್ರೂ ಫ್ಲಿಂಟಾಫ್ ಕೆಣಕಿದರು. ಇದರಿಂದ ಕೋಪಗೊಂಡ ಯುವಿ ಸ್ಟುವರ್ಟ್‌ ಬ್ರಾಡ್‌ ಅವರ ಓವರ್‌ನಲ್ಲಿ ನಂಬಲಸಾಧ್ಯ ರೀತಿಯಲ್ಲಿ ಸತತ 6 ಸಿಕ್ಸರ್‌ ಬಾರಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾರಿಸಲ್ಪಟ್ಟ ಮೊದಲ ಸತತ 6 ಸಿಕ್ಸರ್‌ಗಳ ದಾಖಲೆಯಾಗಿ ಹೊರಹೊಮ್ಮಿತು. ಆದರೆ 21 ವರ್ಷದ ಸ್ಟುವರ್ಟ್‌ ಬ್ರಾಡ್‌ ಅಂದು ಇಂಗ್ಲೆಂಡ್​ ಪಾಲಿಗೆ ಕಳನಾಯಕನಾದರು.

Exit mobile version